ವಿವಿಧ ಇಲಾಖೆಗಳ ವಿಭಾಗೀಯ ಸಭೆಗೆ ಚಾಲನೆ ಕೊಟ್ಟ ಪ್ರಾದೇಶಿಕ ಆಯುಕ್ತ

0
54
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:29 ಸರಕಾರದ ವಿವಿಧ ಇಲಾಖೆಗಳ ಯೋಜನೆಗಳ‌ ಅನುಷ್ಠಾನ ಮತ್ತು ಪ್ರಗತಿ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಪ್ರಾದೇಶಿಕ‌ ಆಯುಕ್ತ ಎನ್.ಜಯರಾಮ್ ಚಾಲನೆ ನೀಡಿದರು.
ರಾಜ್ಯ ಸರಕಾರದ ಯೋಜನೆಗಳು ಸಾಮಾಜಿಕ ಆರ್ಥಿಕ ಅಭಿವೃದ್ದಿಯ ಬಗ್ಗೆ ಹೆಚ್ಚಿನ ಮಹತ್ವದಾಗಿದ್ದೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪ್ರತಿ ಬಿಂಬ ವೆಬ್ ಪ್ರೋಟಾಲ್ ಹೆಚ್ಚಿನ‌ ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಇಂದಿಲ್ಲಿ ಹೇಳಿದರು.
ಮಖ್ಯಮಂತ್ರಿ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಎಲ್ಲ ಇಲಾಖೆಯ ಮಾಹಿತಿಗಳು ಆನ್ ಲೈನ್ ನಲ್ಲಿ ಸಿಗುತ್ತಿದೆ. ಆದರೆ ಅದು ಸಮರ್ಪಕವಾಗಿ ಮಾಹಿತಿ ಸಿಗುತ್ತಿಲ್ಲ. ಪ್ರತಿಬಿಂಬ ಪ್ರೋಟಾಲ್ ಮೂಲಕ ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ‌ಸಿಇಓ ರಾಮಚಂದ್ರನ್, ಎಡಿಸಿ ಡಾ.ಸುರೇಶ ಇಟ್ನಾಳ ಸೇರದಂತೆ ಮೊದಲಾದವರು ಹಾಜರಿದ್ದರು.

loading...