ಶಾಸಕ ಪಿ.ರಾಜೀವ್ ಬಿಜೆಪಿಗೆ: ಶ್ರೀರಾಮುಲು

0
185
loading...


ಕನ್ನಡಮ್ಮ ಸುದ್ದಿ
ಚಿಕ್ಕೋಡಿ 05: ಬಿಎಸ್ಆರ್ ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ಕುಡಚಿ ಶಾಸಕ ಪಿ.ರಾಜೀವ್ ಬಿಜೆಪಿ ಸೇರ್ಪಡೆ ನಿಶ್ಚಿತ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಿಪ್ಪಾಣಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹಾಗೂ ಪಿ.ರಾಜೀವ್ ಒಂದೇ ಪಕ್ಷದಿಂದ ಆಯ್ಕೆಯಾಗಿ ಶಾಸಕರಾಗಿದ್ದೇವೆ. ಇಬ್ಬರೂ ಒಂದೇ ಪಕ್ಷದಲ್ಲಿರಬೇಕೆಂಬುದು ನನ್ನ ಬಯಕೆ ಹೀಗಾಗಿ ಈ ಕುರಿತು ರಾಜೀವ್ ಹಾಗೂ ನಾನು ಸೇರಿ ಪಕ್ಷದ ನಾಯಕರ ಜೊತೆಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದ್ದೇವೆ. ಶೀಘ್ರದಲ್ಲಿ ಅವರೇ ಈ ಕುರಿತು ತಮ್ಮ ಹೇಳಿಕೆ ನೀಡಲಿದ್ದಾರೆ ಎಂದರು.

loading...