ಶಿಕ್ಷಣದಿಂದ ದೇಶದ ಪ್ರಗತಿಯಾಗಲೂ ಸಾಧ್ಯ.

0
26
loading...

ಘಟಪ್ರಭಾ: 17 ಹುಡುಗರಿಂದ ಪ್ರಾರಂಭಗೊಂಡ ಸಂಸ್ಥೆಯಲ್ಲಿ ಇಂದು 3000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಗ್ರಾಮೀಣ ಪ್ರದೇಶದ ಕೆ.ಆರ್.ಎಚ್ ಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಕ್ರಾಂತಿಯನ್ನು ಮಾಡಿದೆ ಎಂದು ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಇಲ್ಲಿಯ ಕೆ.ಆರ್.ಎಚ್ ವಿದ್ಯಾವರ್ಧಕ ಸಂಘ ರಜತಮಹೋತ್ಸವ ಹಾಗೂ ರೈತ ನಾಯಕ ದಿ. ಕಾಡಪ್ಪ ರಾಮಪ್ಪಾ ಹುಕ್ಕೇರಿಯವರ ಮೂರ್ತಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಇಂದು ಎಷ್ಟೊ ಶಿಕ್ಷಣ ಸಂಸ್ಥೆಗಳು ಕೇವಲ ಹೆಸರಿಗೆ ಮಾತ್ರ ಇದೆ. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಈ ಸಂಸ್ಥೆ ಮಹತ್ತರವಾದ ಸಾಧನೆ ಮಾಡಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಳಕಾಗಿದೆ ಎಂದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ವಹಿಸಿದ ಸಿದ್ದೇಶ್ವರ ಮಹಾಸ್ವಾಮಿಗಳು ಶಿಕ್ಷಣದಿಂದ ಮಾತ್ರ ಇಂದು ದೇಶದ ಪ್ರಗತಿಯಾಗಲೂ ಸಾಧ್ಯ. ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಯಾರೊಬ್ಬರು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕು. ಉತ್ತಮವಾದ ಶಿಕ್ಷಣವನ್ನು ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದರೆ ಆ ಶಿಕ್ಷಣ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಬೆಳವಣೆಗೆಯಾಗಿ ಮೇಲಕ್ಕೆ ಬರುತ್ತದೆ ಎನ್ನುವುದಕ್ಕೆ ಈ ಸಂಸ್ಥೆ ಸಾಕ್ಷಿ ಎಂದು ಹೇಳಿದರು.
ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು, ಚಿಕ್ಕೋಡಿಯ ಸಂಪಾದನ ಮಹಾಸ್ವಾಮಿಗಳು, ಘೋಡಗೇರಿಯ ಶಿವಾನಂದ ಮಹಾಸ್ವಾಮಿಗಳು, ಹುಕ್ಕೇರಿಯ ಶಿವಬಸವ ಮಹಾಸ್ವಾಮಿಗಳು, ಹಸಿರು ಕ್ರಾಂತಿ ಸಂಪದಕರಾದ ಕಲ್ಯಾಣರಾವ್ ಮುಚಳಂಬಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೈವಲ್ಯಾನಂದ ಮಹಾಸ್ವಾಮಿಗಳು, ಹಂಚಿನಾಳದ ಮಹೇಶನಾಂದ ಮಹಾಸ್ವಾಮಿಗಳು, ಡಾ. ಶ್ರದ್ಧಾನಂದಾ ಮಹಾಸ್ವಾಮಿಗಳು, ಬಸವಗೌಡ ಪಾಟೀಲ (ನಾಗನೂರು) ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಸುಭಾಸ ಹುಕ್ಕೇರಿ ವಹಿಸಿದ್ದರು. ಪ್ರಾಸ್ತವಿಕವಾಗಿ ಸಂಸ್ಥೆಯ ಚೇರಮನ್ನರಾದ ರಾಮಣ್ಣ ಹುಕ್ಕೇರಿ ಮಾತನಾಡಿದರು. ಪ್ರಾಚಾರ್ಯ ಬಿ.ಎ.ಪಾಟೀಲ ವರದಿ ವಾಚಿಸಿದರು ವಿಠಲ ಹುಕ್ಕೇರಿ ವಂದಿಸಿದರು.
ಈ ಸಂದರ್ಭದಲ್ಲಿ ರೈತ ನಾಯಕ ದಿವಂಗತ ಕಾಡಪ್ಪ ರಾಮಪ್ಪಾ ಹುಕ್ಕೇರಿಯವರ ಮೂರ್ತಿಯನ್ನ ಶಾಲಾ ಅವರಣದಲ್ಲಿ ಅನಾವರಣಗೊಳಿಸಲಾಯಿತು.

loading...