ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ಓರ್ವನ ಬಂಧನ

0
138
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:11 ಚಿಂಚಲಿ ಸಮೀಪದ ಹಾರೂಗೇರಿ ಪ್ರದೇಶದ ಖಣದಾಳ ಗ್ರಾಮದ ವ್ಯಾಪ್ತಿಯಲ್ಲಿ ಜೆಎಲ್‍ಬಿಸಿ ಕೆನಾಲ್ ಹತ್ತಿರ ಮೂವರು ವ್ಯಕ್ತಿಗಳು ಅಕ್ರಮವಾಗಿ ಬೈಕ್ ಮೇಲೆ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಹಾರೂಗೇರಿ ಪೋಲಿಸರು ದಾಳಿ ನಡೆಸಿ ನಾಲ್ಕು ಕೆ.ಜಿಯುಳ್ಳ ಅದರ ಅಂದಾಜು ಮೊತ್ತ 20 ಸಾವಿರ ರೂ ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.

ಪೋಲಿಸರ ದಾಳಿ ವೇಳೆ ಅಳಗವಾಡಿಯ ಮಹಾದೇವ ಶೆಟ್ಟೆಪ್ಪಾ ಶಿರಗೂರೆ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನಿತರಿಬ್ಬರ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸುವುದಾಗಿ ಹಾರೂಗೇರಿ ಪೋಲಿಸರು ತಿಳಿಸಿದ್ದಾರೆ. ಈ ಕುರಿತು ರಾಯಬಾಗ ತಾಲೂಕಿನ ಹಾರೂಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...