ಸರಕಾರೇತರ ಶಾಲೆ ಮುಚ್ಚುವ ಹುನ್ನಾರ: ಬಸವರಾಜ ಹೊರಟ್ಟಿ

0
33
loading...

ಸರಕಾರೇತರ ಶಾಲೆ ಮುಚ್ಚುವ ಹುನ್ನಾರ: ಬಸವರಾಜ ಹೊರಟ್ಟಿ
ಕನ್ನಡಮ್ಮ ಸುದ್ದಿ
ಚಿಕ್ಕೋಡಿ 04: 1960ರ ದಶಕದಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳು ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದು, ದಿ.ಎಂ.ಕೆ.ಕವಟಗಿಮಠ ಸ್ಥಾಪಿಸಿದ ಸಿಎಲ್ಇ ಶಿಕ್ಷಣ ಸಂಸ್ಥೆ ಸುವರ್ಣ ಮಹೋತ್ಸವ ಪೂರೈಸಿ, ಅಭಿವೃದ್ಧಿಯತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಅವರು ಸಿಎಲ್ಇ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ನಿಮಿತ್ತ ಹಳೆ ವಿದ್ಯಾಥರ್ಿಗಳ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ಅಂದು ಸರಕಾರ ನಿಭಾಯಿಸದ ಕೆಲಸವನ್ನು ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಮಾಡುವ ಮೂಲಕ ಇಂದಿನ ಆಡಳಿತ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿವೆ ಎಂದರು.
ಮುಂದುವರೆದ ಅವರು, ರಾಜ್ಯದ ಶೈಕ್ಷಣಿಕ ಅಭಿವೃದ್ಧಿ ಸಲುವಾಗಿ 1965ರ ನಂತರ ಪ್ರಾರಂಭವಾದ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸದೇ ಸರಕಾರ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದ್ದು, ಈ ಕುರಿತು ಶೀಘ್ರದಲ್ಲಿ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಗುವುದು ಎಂದು ಬಸವರಾಜ ಹೊರಟ್ಟಿ ಹೇಳಿದರು.
ಪಾಲಕರು ಸರಕಾರಿ ಶಾಲೆಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದು, ಇದರಿಂದ ರಾಜ್ಯದಲ್ಲಿ ಪ್ರಸಕ್ತ ವರ್ಷ 2004 ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆಯಾಗಿದೆ. ಅತಿಯಾದ ಇಂಗ್ಲೀಷ ವ್ಯಾಮೋಹದಿಂದ ಕೆಲವರು ಸರಕಾರಿ ಶಾಲೆಗಳನ್ನು ಬಿಟ್ಟಿದ್ದಾರೆ. ಇನ್ನುಳಿದಂತೆ ಈ ಹಿಂದೆ ಸರಕಾರಿ ಶಾಲಾ ಶಿಕ್ಷಕರು ವಿದ್ಯಾಥರ್ಿಗಳಿಗಾಗಿ ಮಾಡುತ್ತಿದ್ದ ತ್ಯಾಗದ ಭಾವನೆ ಮರೆಯಾಗುತ್ತಿದೆ. ಜೊತೆಗೆ ಸ್ವಾರ್ಥದ ಸಲುವಾಗಿ ಜರುಗುತ್ತಿರುವ ವಗರ್ಾವಣೆ ಪ್ರಕ್ರಿಯೆಗಳು ಶಿಕ್ಷಣದ ಅನವತಿಗೆ ಕಾರಣವಾಗಿವೆ ಎಂದರು.
ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದ 400 ಇಂಗ್ಲೀಷ ಶಾಲೆಗಳನ್ನು ಬಂದ ಮಾಡಿದ್ದೇ ಆದರೆ ನಂತರ ಅಧಿಕಾರಕ್ಕೆ ಬಂದ ಸರಕಾರಗಳು ಅವುಗಳಿಗೆ ಅನುಮತಿ ನೀಡಿದವು. ಮಾತೃಭಾಷೆಯಲ್ಲಿ ಶಾಲೆ ಕಲಿತ ವಿದ್ಯಾಥರ್ಿಗಳು ಜೀವನದಲ್ಲಿ ಬಹುಬೇಗ ಗುರಿ ತಲುಪಲು ಸಾಧ್ಯ ಆದರೆ ಇಂಗ್ಲೀಷ ಮಾಧ್ಯಮದ ಬೆನ್ನುಹತ್ತಿರುವ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿವತ್ತ ಲಕ್ಷ್ಯವಹಿಸಿದ್ದಾರೆ ಹೊರತು ಸಂಸ್ಕಾರ ನೀಡಲು ಮುಂದಾಗುತ್ತಿಲ್ಲ. ಇದರಿಂದ ಜೀವನದಲ್ಲಿ ಕಷ್ಟವನ್ನೇ ಕಾಣದ ಮಕ್ಕಳಿಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಅಸಮರ್ಥರಿರುತ್ತಾರೆ. ಜೊತೆಗೆ ಮಕ್ಕಳ ಭವಿಷ್ಯ ನೋಡಿದ ಪಾಲಕರು ಇಂದು ವೃದ್ಧಾಶ್ರಮಗಳನ್ನು ಸೇರುವ ಅನಿವಾರ್ಯತೆ ಎದುರಾಗಿದೆ ಎಂದರು.
ಹೆತ್ತ ತಂದೆ-ತಾಯಿ ಮರೆಯದಿರಿ:
ಇತ್ತೀಚಿಗೆ ರೈತನ ಮಗ ಉದ್ದಪ್ಪ ಹಣಮನ್ನವರ ಐಎಎಸ್ ಅಧಿಕಾರಿಯಾಗಿದ್ದಾರೆ. ಆದರೆ ಮನುಷ್ಯ ಯಾವುದೇ ಹಂತ ತಲುಪಿದರೂ ತನ್ನ ತಂದೆ-ತಾಯಿಯನ್ನು ಕೊನೆ ಕ್ಷಣದವರೆಗೂ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಆದರೆ ಇಂದು ಮಕ್ಕಳಿಗೆ ತಂದೆ-ತಾಯಿ ಬೇಡವಾಗಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಉತ್ತರ ಕನರ್ಾಟಕದಲ್ಲಿ ಶೈಕ್ಷಣಿಕ ಅಂದೋಲನ ಮಾಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿವೆ. ಇತ್ತೀಚಿಗೆ ದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಸರಕಾರಗಳಿಗೆ ಸವಾಲಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಅನೇಕ ದಾನ-ಧರ್ಮದಿಂದ ಪ್ರಾರಂಭವಾದ ಸಿಎಲ್ಇ ಶಿಕ್ಷಣ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಕೊಳ್ಳುತ್ತಿದೆ. ಒಂದು ಸಂಘ ಸಂಸ್ಥೆ ಬೆಳೆಯಬೇಕಾದರೆ ಅದರ ಸುತ್ತಲಿನ ವಾತಾವರಣ ಕಾರಣವಾಗುತ್ತಿದೆ. ಸಂಸ್ಥೆ ಬೆಳವಣಿಗೆಯಲ್ಲಿ ಅನೇಕ ಮಹನೀಯರ ತ್ಯಾಗ-ಬಲಿದಾನಗಳು ಅಡಗಿವೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ರಂಗದಲ್ಲಿ ಸಾಧನೆ ತೋರಿದ ಮಹನೀರರನ್ನು ಹಾಗೂ ಸಂಘದ ಹಳೆ ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು. ಅಲ್ಲದೇ ಮಧುಮತಿ ಹಿರೇಮಠ ಅವರು ಎಂ.ಕೆ. ಕವಟಗಿಮಠ ಕುರಿತ ನುಡಿನಮನ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ಚನ್ನವರ, ಕಾರ್ಯದಶರ್ಿ ಜಗದೀಶ ಕವಟಗಿಮಠ, ಮಹೇಶ ಭಾತೆ, ಸಂಸ್ಥೆ ನಿದರ್ೇಶಕರಾದ ಸುರೇಶ ಬೆಲ್ಲದ, ಎನ್.ಎಸ್.ವಂಟಮುತ್ತೆ, ಮಹಾಂತೇಶ ಭಾತೆ, ಎಸ್.ಎಸ್.ಕವಲಾಪೂರೆ, ಮಲಗೌಡ ನೇಲರ್ಿ,ಡಿಡಿಪಿಯು ಪಿ.ಐ. ಅದುಕೆ, ಡಿಡಿಪಿಐ ಗಜಾನನ ಮನ್ನಿಕೇರಿ ಮುಂತಾದವರು ಉಪಸ್ಥಿತರಿದ್ದರು. ಪ್ರಾಚಾರ್ಯ ಸುರೇಶ ಉಕಲಿ ಸ್ವಾಗತಿಸಿದರು. ವಿನಾಯಕ ಶಿವಪೂಜೆ ಪ್ರಾರ್ಥನೆ ಸಲ್ಲಿಸಿದರು. ಜಗದೀಶ ಕಾದ್ರೋಳ್ಳಿ ನಿರೂಪಿಸಿದರು. ಎಸ್.ಐ.ಬೀಸ್ಕೋಪ್ಪ ವಂದಿಸಿದರು.

loading...