ಸಾರಿಗೆ ಬಸ್ ಟೀಕೆಟ್‍ನಲ್ಲಿ ಕನ್ನಡದ ಅಂಕಿ ನಮೂದಾಗಬೇಕು

0
62
loading...

ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ
ಕನ್ನಡಮ್ಮ ಸುದ್ದಿ ಬೆಳಗಾವಿ: ಎನ್‍ಡಬ್ಲ್ಯೂಕೆಎಸ್‍ಆರ್‍ಟಿಸಿ ಸಾರಿಗೆ ಸಂಸ್ಥೆಯ ಬಸ್‍ಗಳ ಟೀಕೆಟ್‍ನಲ್ಲಿ ಬೆಲಗಾಮ್ ಅಂತಾ ಇದೆ ಇದನ್ನು ಬದಲು ಮಾಡಲು ರಾಜ್ಯ ಸಾರ್ಕಾರ ಆದೇಶ ಹೊರಡಿಸಿದ್ದರು ಸಾರಿಗೆ ಇಲಾಖೆ ಇನ್ನು ಬದಲು ಮಾಡಿಲ್ಲ ಎಂದು ಮಂಜುನಾಥ ವಸ್ತ್ರದ ಸಾರಿಗೆ ಇಲಾಖೆ ವಿರುದ್ಧ ಆಕ್ರೋಶದಿಂದ ಮಾತನಾಡಿದರು.
ಇಂದು ನಗರದ ಮುಖ್ಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸುತ್ತಾ ಮಾತನಾಡಿದ ಸಾರ್ವಜನಿಕರು. ಮಹಾರಾಷ್ಟ್ರ ಸಾರಿಗೆ ಇಲಾಖೆಯು ಪುಣಾ ಎಂದು ಇದ್ದಿದ್ದನ್ನು ಪುಣೆ ಎಂದು ಮಾಡಿತ್ತು, ಅದನ್ನು ನೋಡಿದ ರಾಜ್ಯ ಸಾರಿಗೆ ಇಲಾಖೆ ತತಕ್ಷಣ ಬದಲು ಮಾಡಿ ಮಹಾರಾಷ್ಟ್ರ ಸರ್ಕಾರವು ಇನ್ನು ಬದಲು ಮಾಡಿರಲಿಲ್ಲ ಅಷ್ಟೊತ್ತಿಗಾಲೆ ಬೋರ್ಡ್ ಬದಲು ಮಾಡಿತ್ತು ಆದರೆ, ರಾಜ್ಯ ಸರ್ಕಾರ ಬೆಲಗಾಮ್ ಇದ್ದುದ್ದನ್ನು ಈವರೆಗಾದರು ಬದಲು ಮಾಡಿಲ್ಲ ನಾನು ಈಗಾಗಲೇ ನಿಮಗೆ ಪತ್ರದ ಮೂಲಕ ತಿಳಿಸಿದ್ದರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ನೀವು ಕೇವಲ ಸಭೆಯನ್ನು ಕಾಟಾಚಾರಕ್ಕೆ ನಡೆಸುವಂತಿದೆ ಎಂದು ಅಧಿಕಾರಿಗಳ ಮೇಲೆ ಹಿರಿಹಾಯ್ದರು. ಇದಕ್ಕೆ ಸ್ಪಂಧಿಸಿದ ಘಟಕದ ವ್ಯವಸ್ಥಾಪಕ ಅಧಿಕಾರಿ ನೀತಿನ್ ಗಡದೆ ಮಾತನಾಡಿ, ಈಗಾಗಲೇ ಕೆಲ ಬಸ್‍ಗಳಲ್ಲಿ ಬದಲು ಮಾಡಲಾಗಿದೆ. ಇನ್ನು ಬದಲಾಗದ ಬಸ್‍ಗಳಲ್ಲಿ ಬದಲು ಮಾಡುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದೆವೆ ಸಧ್ಯದಲ್ಲಿಯೆ ಬದಲಾಗುತ್ತದೆ. ಹಾಗೇಯೆ ಬದಲಾದ ಕೂಡಲೆ ನಿಮ್ಮ ವಿಳಾಸಕ್ಕೆ ಮಾಹಿತಿ ನೀಡುತ್ತೆವೆ ಎಂದು ಹೇಳಿದರು.
ಇನ್ನು ಮಹಾರಾಷ್ಟ್ರದಲ್ಲಿ ಬಸ್ ಟೀಕೆಟ್‍ಗಳಲ್ಲಿ ಬಸ್‍ದರವನ್ನು ಮರಾಠಿಯಲ್ಲಿ ಬರೆದಿರುತ್ತಾರೆ ಅದರಂತೆ ನಮ್ಮ ಸಾರಿಗೆ ಬಸ್‍ಗಳಲ್ಲು ಕನ್ನಡದಲ್ಲಿ ನಮೂದಾಗಬೇಕು ಅಂದಾಗ ಬೇರೆ ರಾಜ್ಯದಿಂದ ಬರುವಂತವರಿಗೆ ಕರ್ನಾಟಕ ಎಂದು ತಿಳಿಯಲಿ ಎಂದರು. ಇದನ್ನು ಆಲಿಸಿದ ಇನ್ನೊರ್ವ ಘಟಕದ ವ್ಯವಸ್ಥಾಕ ಅಧಿಕಾರಿ ಮಡಿವಾಳರ ಮಾತನಾಡಿ, ಇದನ್ನು ನಾವು ಮೇಲಿನ ಅಧಿಕಾರಿಗಳಿಗೆ ತಿಳಿಸಿ ತಕ್ಷಣ ಕನ್ನಡದಲ್ಲಿ ನಮೂದು ಮಾಡುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಸುಪ್ರವೈಸರ್ ಹನುಮಗೌಡರ ಸಾರ್ವಜನಿಕರು ಸೇರಿದಂತೆ ಇತರರು ಇದ್ದರು.

loading...