ಸಿದ್ದು ಸರಕಾರ ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ: ಬಿಎಸ್ ವೈ

0
163
loading...


ಕನ್ನಡಮ್ಮ ಸುದ್ದಿ‌
ಚಿಕ್ಕೋಡಿ: 5 ದಲಿತರ ಮನೆಯಲ್ಲಿ ಊಟ ಮಾಡಿ ರಾಜಕಾರಣ ಮಾಡುತ್ತಿಲ್ಲಾ. ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದೆವೆ ಕಾಂಗ್ರೆಸ್ ಮುಖಂಡರುಗಳು ವಿನಾಕಾರಣ ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ಬಸವ ವೃತ್ತದಲ್ಲಿರುವ ಅಂಬೇಡ್ಕರ ಮತ್ತು ಬಸವ ವೃತ್ತದಲ್ಲಿರುವ ಮೂರ್ತಿ ಗಳಿಗೆ ಮಾಲಾರ್ಪನೆ. ಮಾಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ದಲಿತರ ಮನೆಗೆ ಬಿಜೆಪಿ ಊಟ ಮಾಡಲು ಹೊರಟ್ಟಿಲ್ಲ ಅವರ ಸಮಸ್ಯೆಯನ್ನು ಆಲಿಸುತ್ತಿದ್ದೇವೆ. ಅದು ಕಾಂಗ್ರೆಸ್ ಸರಕಾರಕ್ಕೆ ನುಂಗಲಾರದ ತುಪ್ಪವಾಗಿದೆ. ಕಾಂಗ್ರೆಸ್ ಮುಖಂಡರು ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು‌ ಅವರು ಹೇಳಿದರು.
ಉತ್ತರ ಪ್ರದೆಶದಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ದಲಿತರು ಮತ್ತು ಅಲ್ಪ ಸಂಖ್ಯಾತರ ಮೇಲೆ ಹಲ್ಲೆಗಳು ಹೆಚ್ಚಾಗಿವೆ ಎಂದು ಪ್ರಶ್ನೆ ಮಾಡಿದಕ್ಕೆ.
೨೪ ಘಂಟಗೆಗಳಲ್ಲಿ ಅಲ್ಲಿನ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯ ನಾಥ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಾರೆ. ಆದರೆ ಕನಾ೯ಟಕದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಯಾವುದೇ ಕ್ರಮ ಜರುಗಿಸದಿರುವುದು ವಿಪಯಾ೯ಸದ ಸಂಗತಿ ಎಂದು ಕಿಡಿಕಾರಿದರು.

loading...