ಬೆಳಗಾವಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಗುಡುಗಿದ ಬಿಎಸ್ ವೈ

0
166
loading...


ಕನ್ನಡಮ್ಮ ಸುದ್ದಿ
ಬೆಳಗಾವಿ: ನೀರಾವರಿ ಯೋಜನೆಗೆ 58 ಸಾವಿರ ಕೋಟಿ ಖರ್ಚು ಮಾಡುತ್ತೆವೆಂದು ಹೇಳಿ ಸುಳ್ಳು ಭರವಸೆ ನೀಡುತ್ತಿದ್ದಾರೆ. 36 ಸಾವಿರ ಕೋಟಿ ಮಾತ್ತ ಖರ್ಚು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಇದನ್ನು ಗಮನಿಸಿದ್ದರೆ ಗೋತಾಗುತ್ತದೆ. ನುಡಿದಂತೆ ನಡೆಯುವ ಸರ್ಕಾರ ಎನ್ನುವತ್ತಿರುವ ರಾಜ್ಯ ಸರ್ಕಾರ ಸುಳ್ಳು ಭರವಸೆ ನೀಡುತ್ತಾ ಜನರಿಗೆ ಮೋಸ ಮಾಡುತ್ತಿದೆ ಎಂದರು
ದಲಿತ ಸಮಸ್ಯೆ ತಿಳಿದುಕೊಳ್ಳುವ ಯೋಗ್ಯತೆ ಇಲ್ಲವೋ ಅವರು ಆರೋಪ ಮಾಡುತ್ತಾರೆ. ನಾವು ದಲಿತ ಮನೆಯಲ್ಲಿ ಊಟ ಅಷ್ಟೇ ಮಾಡಲಿ ಹೋರಟಿಲ್ಲ ಅವರ ಸಮಸ್ಯೆ ಆಲಿಸಲು ಹೋರಟಿದೇವೆ ಅದನ್ನು ಕಾಂಗ್ರೇಸ್ ನವರಿಗೆ ಸಹಿಸಿಕೊಳಲು ಆಗುತ್ತಿಲ್ಲ ಎಂದರು.
ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಸಿ.ಟಿ ರವಿ, ವಿಶ್ವನಾಥ ಪಾಟೀಲ,ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ರಾಜಕುಮಾರ ಟೋಪ್ಪನವರ, ರಾಜೇಂದ್ರ ಹರಕುಣಿ, ಕಿರಣ ಜಾಧವ, ಈರಣ್ಣ ಕಡಾಡಿ, ರಮೇಶ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

loading...