ಸೆಪ್ಟೆಂಬರವರೆಗೆ ಸಾತೋಡ್ಡಿ ಜಲಪಾತ ವೀಕ್ಷಣೆಗೆ ನಿಷೇಧ

0
47
loading...


ಯಲ್ಲಾಪುರ:ಕರ್ನಾಟಕದ ಪ್ರವಾಸಿ ನಕ್ಷೆಯಲ್ಲಿ ದಾಖಲಾಗಿರುವಂತಹ ಪ್ರಸಿದ್ಧ ಜಲಪಾತಗಳಲ್ಲಿ ಸಾತೊಡ್ಡಿ ಜಲಪಾತವೂ ಒಂದಾಗಿದ್ದು ಉ.ಕಜಿಲ್ಲೆಯ ನಯಾಗರ ವೆಂದೇ ಖ್ಯಾತವಾಗಿದೆ. ಬೇಸಿಗೆಯಲ್ಲಿ ಬಸವಳಿದ ಈ ಜಲಪಾತವು ಇತ್ತೀಚೆಗೆ ತಾಲೂಕಿನಲ್ಲಿ ಸುರಿದ ಸಾಮಾನ್ಯ ಮಳೆಗೆ ಸಾತೋಡ್ಡಿ ಜಲಪಾತ ಸುಂದರವಾಗಿ ಕಾಣುತ್ತಿದ್ದುಮೈದುಂಬಿಕೊಂಡಿದೆ.ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಸರ್ವ ಋತುವಿನಲ್ಲಿಯೂ ಸದಾ ಮೈತಳೆದು ದುಮ್ಮಿಕ್ಕುವ ಸಾತೊಡ್ಡಿ ಜಲಪಾತ ಪ್ರವಾಸಿಗರ ಪ್ರಮುಖ ಆಕರ್ಷಣೆ. ಆದರೆ ಜಲಪಾತಕ್ಕೆ ಸಾಗುವ ದಾರಿಯಲ್ಲಿ ಭಾರಿ ಗಾತ್ರದ ಬಂಡೆಗಳು ಉರುಳಿ ಬಿದ್ದಿರುವದರಿಂದ ಮುಂಬರುವ ಸೆಪ್ಟೆಂಬರವರೆಗೆಪ್ರವಾಸಿಗರು ಸಾತೋಡ್ಡಿ ಜಲಪಾತ ವೀಕ್ಷಣೆಗೆ ತೆರಳಲು ಪ್ರವೇಶ ನಿಷೇಧಿಸಲಾಗಿದೆ.
ಕಳೆದ ವಾರ ಜಲಪಾತದ ಬಳಿ ಬೃಹದಾಕಾರದ ನಾಲ್ಕೈದು ಬಂಡೆ ಸುಮಾರು 25 ಮೀಟರ್ ಎತ್ತರದಿಂದ ಉರುಳಿ ಬಿದ್ದಿದ್ದು, ಬಂಡೆ ಜಾರಿ ಬರುತ್ತಿರುವ ಸಂದರ್ಭದಲ್ಲಿ ಸುಮಾರು ನಾಲ್ಕೈದು ದೊಡ್ಡ ಮರಗಳನ್ನು ಧರೆಗೆ ಉರುಳಿಸಿದೆ. ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದ್ದರಿಂದ ಬಂಡೆಗಳು ಉರುಳಿ ಬಿದ್ದಿರಬಹುದು ಎಂದು ಹೇಳಲಾಗುತ್ತದೆ. ಪ್ರವಾಸಿಗರು ಜಲಪಾತ ವೀಕ್ಷಣೆಗೆ ಅನುಕೂಲವಾಗಲೆಂದು ಹೊಸದಾಗಿ ನಿರ್ಮಿಸಿದ ಕಾಲು ಸಂಕವನ್ನು ಮುರಿದು ಹಾಕಿದೆಯಲ್ಲದೇ ಜಲಪಾತ ವೀಕ್ಷಣೆಗೆಂದು ನಿರ್ಮಿಸಲಾದ ಪ್ಯಾರಾಗೋಲಾವನ್ನು ಸಂಪೂರ್ಣ ನಾಶಮಾಡಿದೆ. ಹಲವಾರು ಮರಗಳನ್ನು ಉರುಳಿಸಿದೆ.ಹೊಸದಾಗಿ 2.25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪ್ಯಾರಾಗೋಲಾ ಮತ್ತು ಜಲಪಾತಕ್ಕೆ ಸಾಗುವ ಸುಮಾರು 30 ಮೀ ಸಿಮೆಂಟ್ ಕಾಲು ದಾರಿಯನ್ನು ಹಾಳುಗೆಡವಿದ್ದು, ಸುಮಾರು 5 ಲಕ್ಷ ರೂ ಹಾನಿಯಾಗಿದೆ. ಮಳೆಗಾಲ ಆರಂಭದಲ್ಲಿ ಈ ಘಟನೆ ನಡೆದಿದ್ದು ಭಾರಿ ಮಳೆ ಸುರಿದಾಗ ಮತ್ತೆ ಬಂಡೆ ಉರುಳಿ ಬೀಳುವ ಸಾಧ್ಯತೆಯಿದ್ದು. ಪ್ರವಾಸಿಗರಿಗೆ ಸಾತೊಡ್ಡಿ ಪ್ರವಾಸ ಇದೀಗ ಅಪಾಯಕಾರಿಯಾಗಿದೆ.ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾಕ್ರಮವಾಗಿ ದೇಹಳ್ಳಿ ಗ್ರಾಮಪಂಚಾಯತಿಯು ಮುಂಬರುವ ಸಪ್ಟೆಂಬರವರೆಗೆ ಜಲಪಾತ ವೀಕ್ಷಣೆಗೆ ಪ್ರವೇಶ ನೀಷೇಧಿಸಿದೆ.
ನೂರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ರಸ್ತೆಯ ದುವ್ರ್ಯವಸ್ಥೆ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ ಪ್ರವಾಸೋದ್ಯಮ ಇಲಾಖೆ ಜಲಪಾತದ ಸಮೀಪ ಕೋಟಿ ಕೋಟಿ ಹಣವನ್ನು ಸಿಮೆಂಟ್ ಕಾಂಕ್ರೀಟ ರಸ್ತೆಗೆ ಸುರಿದರೂ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಉರುಳದಂತೆ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳದೇ, ತಾಲೂಕು ಕೇಂದ್ರದಿಂದ ಮಾರ್ಗ ನಿರ್ವಹಣೆಯಲ್ಲಿ ಸೋತಿದೆ ಎಂದು ಪ್ರವಾಸಿಗರು ಆಕ್ರೋಶವ್ಯಕ್ತಪಡಿಸುತಿದ್ದಾರೆ.

ಸಾತೊಡ್ಡಿ ಜಲಪಾತ ಸುತ್ತಲೂ ಕಲ್ಲೂ ಬಂಡೆಗಳಿಂದ ಆವೃತ್ತವಾಗಿದ್ದು. ಜಲಪಾತಕ್ಕೆ ಹೋಗುವ ದಾರಿಯಲ್ಲಿ ಸುಮಾರು ನಾಲ್ಕೈದು ಬಂಡೆಗಳು ಉರುಳಿ ಬಿದ್ದಿದೆ. ಈ ಬಾರಿಯ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದ್ದರಿಂದ ಈ ಕಲ್ಲು ಬಿದ್ದಿರಬಹುದಾದ ಸಾಧ್ಯತೆಯಿದೆ.
.                                                  ಆರ್.ಎಫ್.ಓ. ಬಾಲಸುಬ್ರಹ್ಮಣ್ಯ
ಮಳೆಗಾಲ ಆರಂಭದಲ್ಲಿ ಈ ಘಟನೆ ನಡೆದಿದ್ದು ಭಾರಿ ಮಳೆ ಸುರಿದಾಗ ಮತ್ತೆ ಬಂಡೆ ಉರುಳಿ ಬೀಳುವ ಸಾಧ್ಯತೆಯಿದ್ದು. ಪ್ರವಾಸಿಗರಿಗೆ ಸಾತೊಡ್ಡಿ ಪ್ರವಾಸ ಇದೀಗ ಅಪಾಯಕಾರಿಯಾಗಿದೆ.ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾಕ್ರಮವಾಗಿ ಮುಂಬರುವ ಸಪ್ಟೆಂಬರವರೆಗೆ ಜಲಪಾತ ವೀಕ್ಷಣೆಗೆ ಪ್ರವೇಶ ನೀಷೇಧಿಸಲಾಗಿದೆ.

ದೇಹಳ್ಳಿ ಗ್ರಾಮಪಂಚಾಯತಿಯ ಅಧ್ಯಕ್ಷ ವಿಶ್ವನಾಥ ಹಳೇಮನೆ .

 

loading...