ಹಲ್ಲೆ ನಡೆಸದಿದ್ದರೂ 307 ಪ್ರಕರಣ ದಾಖಲಿಸಿದ ಪಿಎಸ್‍ಐ

0
264
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:9 ಖಾನಾಪುರ ತಾಲೂಕಿನ ಪಿಎಸ್‍ಐ ಪರಶುರಾಮ ಪೂಜಾರಿ ನಿರ್ಲಕ್ಷ್ಯ ಹಾಗೂ ಒತ್ತಾಯ ಪೂರ್ವಕವಾಗಿ ತಪ್ಪು ಮಾಡದ ವ್ಯಕ್ತಿಗೆ 307 ಪ್ರಕರಣ ದಾಖಲಿಸಿ ಹಿಂಡಲಗಾ ಕಾರಾಗೃಹದಲ್ಲಿ 10 ದಿನ ಶಿಕ್ಷೆ ಅನುಭವಿಸುವಂತಾಗಿತ್ತು ಎಂದು ಪ್ರಮೋಧ ವೆಂಕಟರಾಮ ಕಾಮತ ಹೇಳಿದರು.
ಅವರು ಶುಕ್ರವಾರ ಮಾತನಾಡಿ, ಕಳೆದ ಮಾರ್ಚ 4 ರಂದು ಖಾನಾಪುರ ತಾಲೂಕಿನ ನಾಗುರ್ಡಾ ಗ್ರಾಮದಲ್ಲಿ ಬರುವ ಜಮೀನುಗಳು ರಿ.ಸ.ನಂ20/2 ಮತ್ತು 21/2ರಲ್ಲಿ ತೋಟದ ಫಾರ್ಮ ಹೌಸನಲ್ಲಿ ತಾವು ಹಾಗೂ ತಮ್ಮ ಪತ್ನಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುಕುಂದ ಕ್ಷತ್ರಿಯ ಎಂಬುವರು ತಮ್ಮ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆದರೆ ಯಾವುದೇ ಗಾಯಗಾಳಾಗಿಲ್ಲ ಎಂದು ದೂದು ನೀಡಿದರೂ ಖಾನಾಪುರ ಪಿಎಸ್‍ಐ ಕಳೆದ 10 ದಿನಗಳ ಹಿಂದೆ 307 ಸುಳ್ಳು ಪ್ರಕರಣ ದಾಖಲಿಸಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದರು ಎಂದು ಅವರು ದೂರಿದ್ದಾರೆ.
ಮುಕುಂದ ಕ್ಷತ್ರಿಯ ನೀಡಿದ ದೂರನಲ್ಲಿ ಅವರು ನನ್ನ ಜಮೀನಿನಲ್ಲಿ ಅತಿಕ್ರಮಣವಾಗಿ ಪ್ರವೇಶಿಸಿದ್ದರು. ಆ ಸಂದರ್ಭದಲ್ಲಿ ತಾವು ಎ ಭೊಸಡಿಚಾ ಮಾಝ ವಿರುದ್ಧ ಪಿರ್ಯಾದ ದೆತೋಸ ಮಲಾ ಪೊಲೀಸ್ ಸ್ಟೇಶನ್ ಲಾ ಪಳಾಪಳಿ ಕರಾಯಾಲಾ ಲಾವಲಾಸ ತುಲಾ ಮೀ ಆಜ ಜೀವಂತ ಸೋಡನಾರ ನಾಹಿ ತುಲಾ ಮಾರುನ್ ಟಾಕತೊ ಅಂದವೆನೆ ಅಲ್ಲಿಯೇ ಹತ್ತಿರದಲ್ಲಿದ್ದ ದೊಡ್ಡ ಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಯನ್ನು ಗುರಿಯಾಗಿಟ್ಟುಕೊಂಡು ಒಗೆದನು. ನಾನು ಪಕ್ಕಕ್ಕೆ ಸರಿದ್ದರಿಂದ ಕಲ್ಲು ನನ್ನ ತಲೆಗೆ ತಾಗಲಿಲ್ಲ ಎಂದು ಸ್ಪಷ್ಟವಾಗಿ ದೂರಿನಲ್ಲಿ ದಾಖಲಿಸಿದರೂ ಅದು ಹೇಗೆ 307 ಪ್ರಕರಣ ದಾಖಲಾಗುತ್ತದೆ. ಖಾನಾಪುರ ಪಿಎಸ್‍ಐ ಪರುಶುರಾಮ ಪೂಜಾರಿ ಉದ್ದೇಶ ಪೂರ್ವಕವಾಗಿಯೇ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಳೆದ 10 ದಿನಗಳಿಂದ ಹಿಂಡಲಗಾ ಕಾರಾಗೃಹದಲ್ಲಿ ಬಂಧನದಲ್ಲಿದ್ದಾಗಿ ಮುಕುಂದ ಕ್ಷತ್ರಿಯ ನಮ್ಮ ಜಮೀನಿಗೆ ನುಗ್ಗಿ ಅಲ್ಲಿ ಬೆಳೆದ ಬಾಳೆ ಬೆಳೆಗಳನ್ನು ತಮ್ಮ ಬೆಂಬಲಿಗರೊಂದಿಗೆ ಜೆಸಿಬಿಯೊಂದಿಗೆ ನಾಶ ಪಡೆಸಿದ್ದಾರೆ. ಇದಕ್ಕೆ ಖಾನಾಪುರ ಪಿಎಸ್‍ಐ ಪರಶುರಾಮ್ ಪೂಜಾರಿಯೇ ಹೊಣೆ ಮಾಡದ ತಪ್ಪನ್ನು ದೂರಿನಲ್ಲಿ ಸ್ಪಷ್ಟವಾಗಿ ಕಲ್ಲು ಬಿದಿಲ್ಲ ಎಂದು ತಿಳಿಸಿದರೂ ಯಾವ ಆದಾರದ ಮೇಲೆ ಅವರು ತಮ್ಮ ಮೇಲೆ 307 ಹಾಕಿದರು ಎಂದು ಅವರು ಪ್ರಶ್ನಿಸಿದರು.
ಬಾಕ್ಸ್
ಪ್ರಮೋದ ವೆಂಕಟರಾಮ ಕಾಮತ ಅವರು ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಜಗಳದಲ್ಲಿ ಕಲ್ಲು ತಾಗದಿದ್ದರೂ ಖಾನಾಪುರ ಪಿಎಸ್‍ಐ 307 ಪ್ರಕರಣ ದಾಖಲಿಸಿದ್ದರು. ಸದ್ಯ ಅವರಿಗೆ ಜಾಮೀನು ಮುಖಾಂತರ ಬೆಲ್ ಸಿಕ್ಕಿದೆ.
ನಾಗರಾಜ ತರಗಾರ
ಪ್ರಮೋದ ಕಾಮತರ ವಕೀಲರು

loading...