ಹಳ್ಳಿಯ ಹೈದ ವಿಯಟ್ನಾಮ್ ದೇಶದಲ್ಲಿ ಯೋಗ ಶಿಕ್ಷಕ

0
127
loading...

ವಿದೇಶದ ಸನ್‍ಲೈಟ್ ಯೋಗ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ರಾಚಯ್ಯ

| ಕೆ ಎಮ್ ಪಾಟೀಲ
ಬೆಳಗಾವಿ: ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಚಲವಿದ್ದರೆ ಏನೆಲ್ಲ ಮಾಡಬಹುದು ಎಂಬುದನ್ನು ಹಳ್ಳಿಯ ಯುವಕ ಯೋಗ ಕಲಿತು ವಿದೇಶದಲ್ಲಿ ಶಿಕ್ಷಕನಾಗಿ ವೃತ್ತಿಯನ್ನು ಪ್ರಾರಂಭಿಸಿರುವುದೇ ಸಾಕ್ಷಿಯಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಡಗಲಿ ಗ್ರಾಮದ ರಾಚಯ್ಯ ಗುರುಶಿದ್ದಯ್ಯ ಗೋಬಿ ಎಂಬುವವರು ಕೇವಲ ಒಂದು ವರ್ಷದಲ್ಲಿಯೆ ಯೋಗಾಭ್ಯಾಸಮಾಡಿ ಸಧ್ಯ ವಿಯಟ್ನಾಮ್ ದೇಶದ ಸನ್ ಲೈಟ್ ಯೋಗಾ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿಯನ್ನು ಪಾರಂಭಿಸಿದ್ದಾರೆ.
ಮನುಷ್ಯ ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಮನೋಭಾವ ಇರಬೇಕು. ಅದರ ಜೊತೆ ನಮಗೆ ಉತ್ತಮ ಮಾರ್ಗದರ್ಶನ ನೀಡಿ ನೀನು ಇದನ್ನೆ ಮಾಡಿದರೆ ನಿನ್ನ ಭವಿಷ್ಯ ಉಜ್ವಲವಾಗುತ್ತದೆ. ಈ ಹಾದಿಯಲ್ಲಿ ನೀನು ಮುನ್ನುಗ್ಗು ಎಂದು ನಮಗೆ ಬುದ್ದಿ ಹೇಳುವ ಗುರುಗಳು ಇರಬೇಕು ಅಂದಾಗ ನಾವು ಯಶಸ್ವಿಯಾಗಲು ಸಾಧ್ಯ.
ನಾನು ಯೋಗ ಕಲಿತು ವಿದೇಶದಲ್ಲಿ ಶಿಕ್ಷನಾಗಿ ಕೆಲಸ ಮಾಡುತ್ತೆನೆಂದು ಕನಸು ಮನಸಿನಲ್ಲಿ ಅಂದುಕೊಂಡಿರಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದ ಬಿಎ ಪದವಿಯನ್ನು ಪೂರ್ಣವಾಗಿ ಮುಗಿಸಲು ಸಾಧ್ಯವಾಗದೆ ಶಿಕ್ಷಣವನ್ನು ಮೊಟಕುಗೊಳಿಸುವ ಸಂದರ್ಭ ಒದಗಿ ಬಂತು.
ಇದೇ ಸಮಯದಲ್ಲಿ ನಮ್ಮ ತಾಯಿಯ ಸೋದರ ಮಗ ಯೋಗ ಕಲಿತು ವಿದೇಶದಲ್ಲಿ ಕೆಲಸಮಾಡುತ್ತಿದ್ದಾನೆ ಎಂದು ಮಾಹಿತಿ ತಿಳಿದು ಬಂತು. ಆ ನಿಟ್ಟಿನಲ್ಲಿ ನಾನು ಯೋಗ ಕಲಿತು ನಮ್ಮ ಮಾಮನ ಹಾಗೇ ಯೋಗ ಶಿಕ್ಷಕನಾಗಿ ದೇಶ ವಿದೇಶದಲ್ಲಿ ಯೋಗ ಶಿಕ್ಷಕನಾಗಿ ಸಾಧನೆ ಮಾಡಬೇಕು ಎಂದು ಚಲಹುಟ್ಟಿತು.
ನಮ್ಮ ಮಾವ ಮಂಜುನಾಥ ಕಲ್ಮಠ ಎಂಬುವವರು ರಜೆಗೆಂದು ವಿಯಟ್ಮಾಂದಿಂದ ನಮ್ಮೂರಿಗೆ ಆಗಮಿಸಿದ್ದರು. ಅವರು ಬಂದ ಸಮಯದಲ್ಲಿ ನನಗಿರುವ ಯೋಗದ ಬಗ್ಗೆ ಇರುವ ಆಸಕ್ತಿ ಅವರಿಗೆ ತಿಳಿಸಿದೆ. ಆಗ ಅವರು ನನಗೆ ಮೊದಲು ನೀನು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿರುವ ಶಿವಾನಂದ ಮಠದಲ್ಲಿ ಯೋಗ ಕಲಿತುಕೊ ಎಂದು ಹೇಳಿದರು.
ಅದರಂತೆ ನಾನು ಕುಂದಗೋಳದಲ್ಲಿರುವ ಮಠದಲ್ಲಿ ಸ್ವಾಮೀಜಿಗಳ ಮಾರ್ಗದರ್ಶನದಿಂದ ಯೋಗ ವಿದ್ಯೆಯನ್ನು ಕಲಿಯಲು ಪ್ರಾರಂಭಿಸಿ ಸುಮಾರು ಆರು ತಿಂಗಳದಲ್ಲಿ ಯೋಗದ ಎಲ್ಲ ಆಸನಗಳನ್ನು ಉತ್ತಮ ಮಾಡಲು ಕಲಿತೆ. ಇದನ್ನು ಗಮನಿಸಿದ ಸ್ವಾಮೀಜಿಗಳು ನೀನು ಇನ್ನು ಮುಂದೆ ಯೋಗ ಶಿಕ್ಷಕನಾಗು ಎಂದು ಹೇಳಿದರು. ಅಲ್ಲಿಂದ ನನ್ನ ಯೋಗ ಶಿಕ್ಷಕ ವೃತ್ತಿ ಪ್ರಾಂಭವಾಯಿತು. ಹಾಗೇಯೆ ಜಿಲ್ಲೆ ರಾಜ್ಯದಲ್ಲಿ ವಿವಿಧ ಕಡೆ ಹಲವಾರು ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಯೋಗ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿ, ಪ್ರಮಾಣ ಪತ್ರಗಳನ್ನು ಗೆದ್ದುಕೊಂಡು ಬಂದೆ.
ನಂತರ ನಮ್ಮ ಮಾವನವರ ಸಲಹೆ ಮೆರೆಗೆ ವಿಯಟ್ನಾಮ್ ದೇಶದಲ್ಲಿರುವ ಕೆಲವು ಯೋಗ ಸಂಸ್ಥೆಗಳ ಜೊತೆ ಆನ್‍ಲೈನ್ ಮೂಲಕ ಸಂದರ್ಶನ ನೀಡಿದೆ ಅವರು ಕೇಳಿದ ಎಲ್ಲ ಅರ್ಹತೆಗಳು ಇದ್ದವು ಆದರೆ, ಆಂಗ್ಲ ಭಾಷೆ ಮಾತ್ರ ಮಾತನಾಡಲು ಬರುತ್ತಿರಲಿಲ್ಲ. ಇದರಿಂದ ನನ್ನ ಮೊದಲ ಸಂದರ್ಶನ ಫಲಕಾರಿ ನೀಡಲಿಲ್ಲ. ಇಷ್ಟಕ್ಕೆ ಜಿಗುಪ್ಸೆ ಹೊಂದದೆ ಇದನ್ನೆ ಸ್ಪರ್ಧೆಯಾಗಿ ತೆಗೆದುಕೊಂಡು ಆಂಗ್ಲ ಭಾಷೆ ತರಬೇತಿ ಪಡೆದು ಆಂಗ್ಲ ಭಾಷೆ ಮಾತನಾಡಲು ಪ್ರಾರಂಭಿಸಿದೆ.
ಮತ್ತೆ ವಿಯಟ್ನಾಮ್‍ನ ಸನ್ ಲೈಟ್ ಯೋಗ ಸಂಸ್ಥೆಗೆ ಕರೆ ಮಾಡಿ ಸಂದರ್ಶನದಲ್ಲಿ ಪಾಸಾಗಿ ಈಗ ನಾನು ಯೋಗ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ ತಿಂಗಳಿಗೆ 40 ಸಾವಿರ ಸಂಭಾವನೆ ಪಡೆಯುತ್ತಿದ್ದೆನೆ. ಸದ್ಯ ಸಿಂಗಾಪುರ್, ಕಾಂಬೊಡಿಯಾ, ಹಾನಯ್ಯ, ಬ್ಯಾಂಕಾಕ್ ದೇಶಗಳು ಯೋಗ ಕಲಿಸಲು ಅವಕಶಗಳನ್ನು ನೀಡಲು ಮುಂದೆ ಬಂದಿದ್ದಾವೆ ಎಂದು ರಾಚಯ್ಯ ಕನ್ನಡಮ್ಮ ಪತ್ರಿಕೆಗೆ ಮೊಬೈಲ್ ಕರೆ ಮೂಲಕ ಕನ್ನಡಮ್ಮಗೆ ತಿಳಿಸಿದರು.
ಯಾವುದೇ ವಿದ್ಯೆಯಾಗಲಿ ನಿಷ್ಠೆಯಿಂದ ಕಲಿತರೆ ನಾವು ಅಂದಕೊಂಡ ಗುರಿಯನ್ನು ಸಾಧಿಸಬಹುದು ಅದರ ಜೊತೆಗೆ ಉತ್ತಮ ಆದಾಯವನ್ನು ಗಳಿಸಬಹುದು ಎಂಬುದನ್ನು ತೊರಿಸಿಕೊಟ್ಟಿದ್ದಾರೆ.
ಬಾಕ್ಸ್
ನಾನು ವಿದೇಶದಲ್ಲಿ ಯೋಗ ಶಿಕ್ಷಕನಾಗಿ ಕೆಲಸ ಮುಖ್ಯವಾಗಿ ನನ್ನ ಮಾವ ಮಂಜುನಾಥ ಕಲ್ಮಠವ ಅವರೂ ನೀಡಿದ ಸ್ಪೂರ್ತಿಯೇ ನನ್ನ ಈ ಸಾಧನೆ ಕಾರಣರಾಗಿದ್ದಾರೆ. ಹಾಗೇಯೆ ವಿದೇಶದಲ್ಲಿ ಭಾರತೀಯರಿಂದ ಯೋಗವನ್ನು ಕಲಿತರೆ ಮಾತ್ರ ಯೋಗ ಎಂಬ ಮನೋಭಾವನೆ ಇದೆ ಇದರಿಂದ ಭಾರತೀಯ ವ್ಯಗ ಯೋಗ ಶಿಕ್ಷಣ ಪಡೆದು ಶಿಕ್ಷಕನಾಗಲು ಇದೊಂದು ಉತ್ತಮ ಅವಕಾಶವಾಗಿದೆ. ಯೋಗವನ್ನು ಕಲಿತ ವ್ಯಕ್ತಿ ಸದಾ ಚೈತನ್ಯ ಶೀಲನಾಗಿ ಯಾವಾಗಲು ಹಸನ್‍ಮುಖಿಯಾಗಿರುತ್ತಾನೆ. ಹಾಗಾಗಿ ಎಲ್ಲರೂ ಪ್ರತಿನಿತ್ಯ ಯೋಗವನ್ನು ಮಾಡಿದರೆ ಆರೋಗ್ಯದಿಂದ ಇರಲು ಸಾಧ್ಯ.
-ರಾಚಯ್ಯ ಗುರುಶಿದ್ದಯ್ಯ ಗೋಬಿ. ಯೋಗ ಶಿಕ್ಷಕ

loading...