ಹಿಡಕಲ್ಲ ಗ್ರಾಮದಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ಶಾಸಕ ಪಿ.ರಾಜೀವ್ ಚಾಲನೆ

0
27
loading...

ವಸತಿ ನಿಲಯಗಳು ಬದುಕನ್ನು ರೂಪಿಸುತ್ತವೆ
ಹಾರೂಗೇರಿ: ಪ್ರತಿಯೊಬ್ಬ ವಿದ್ಯಾರ್ಥಿಗಳು ಬಾಲ್ಯದಿಂದಲೇ ಒಳ್ಳೆಯ ಗುಣಮಟ್ಟದ ಶಿಕ್ಷಣ ಪಡೆದು ಕೊಂಡರೆ ಮುಂದೆ ವಿಶ್ವದಲ್ಲಿಯೇ ಒಳ್ಳೆಯ ನಾಗರಿಕ ಪ್ರಜೆಯಾಗಿ ಬೆಳೆಯಲು ಸಾದ್ಯವಿದೆ, ವಸತಿ ನಿಲಯಗಳಲ್ಲಿ ಪ್ರತಿಯೊಬ್ಬರ ಭವಿಷ್ಯ ಹಾಗೂ ಬದುಕುವ ಬಗೆಯಿದೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು.
ಪಟ್ಟಣದ ಸಮೀಪದ ಹಿಡಕಲ್ಲ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2.20 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬಾಲಕರ ವಸತಿ ನಿಲಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿದ್ದು, ಪ್ರತಿಯೊಬ್ಬರು ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಲು ವಸತಿ ನಿಲಯಗಳು ಅವಶ್ಯಕತೆ ಇದೆ, ಶಿಕ್ಷಣ ಒಂದು ಉತ್ತಮ ಸಮಾಜವನ್ನು ರೂಪಿಸುತ್ತದೆ, ವಸತಿ ನಿಲಯಗಳು ಬಡವರ ಬದುಕನ್ನು ರೂಪಿಸುವ ಜೊತೆಗೆ ಸಮಾಜಕ್ಕೆ ಒಳ್ಳೆಯ ಸತ್ಫ್ರಜೆಗಳನ್ನು ನೀಡುತ್ತದೆ ಎಂದು ಶಾಸಕ ಪಿ. ರಾಜೀವ್ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣರತ್ನ ಪ್ರಶಸ್ತಿ ಪುರಸ್ಕøತ ಬಿ.ಎಲ್ ಘಂಟಿ ಮಾತನಾಡಿ ಕುಡಚಿ ಮತಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಾಸಕ ಪಿ. ರಾಜೀವ್ ಅವರು ಸರಕಾರದಿಂದ ಕೋಟ್ಯಾಂತರ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅನಾಥವಾಗಿ ನಿಂತ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಕ್ಕೆ ಹಗಲಿರುಳು ದುಡಿಯುವ ಜೊತೆಗೆ ಕ್ಷೇತ್ರದ ಜನನಾಯಕ ಹೇಗೆ ಇರಬೇಕೆಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಎಇಇ ಜಿ.ಎಫ್ ಗಿರಡ್ಡಿ, ಗುತ್ತಿಗೆದಾರ ಮುರಳಿಧರ, ರಾಮಚಂದ್ರ ಬೆಳಗಲಿ, ಮಾರುತಿ ಘಂಟಿ, ರಮೇಶ ಹಲ್ಯಾಪ್ಪಗೋಳ, ಕೆಂಚಪ್ಪ ಸೈದಾಪೂರ, ಲಕ್ಷ್ಮಣ ಕಲಾಲ, ಹಾಲಪ್ಪ ಪೂಜೇರಿ, ರಾಮಣ್ಣ ಭಜಂತ್ರಿ, ಬಿ.ಎಲ್ ಘಂಟಿ, ಶಂಕರ ಕೊಡತೆ, ಸಿದ್ಧು ಸವದಿ, ಚನ್ನಪ್ಪಾ ಅಂಗಡಿ, ಶಿವಾನಂದ ಅಮರಶೆಟ್ಟಿ, ಭೀಮಪ್ಪಾ ಬೆಳಗಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕರಾದ ಯಲ್ಲಪ್ಪ ಭಜಂತ್ರಿ, ಕೆ.ಎಸ್.ಜಂಬಗಿ, ಎಪಿಎಮ್‍ಸಿ ಸದಸ್ಯರಾದ ರಾಮಣ್ಣ ಕಂಕಣವಾಡಿ, ಶಂಕರ ದುಪದಾಳ, ರಾವಸಾಬ ಕಾಂಬಳೆ, ಬಸು ನಾವ್ಹಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...