ಹೆಂಡತಿಯಿಂದ ಗಂಡನ ರಕ್ಷಣೆ ಮಾಡುವಂತೆ ಒತ್ತಾಯ

0
322
loading...


ಕನ್ನಡಮ್ಮ ಸುದ್ದಿ
ಬೆಳಗಾವಿ:14 ಅಂತಾರಾಷ್ಟ್ರೀಯ ತಂದೆಯ ದಿನಾಚಾರಣೆಯ‌ ನಿಮಿತ್ಯ ಪತಿ ಮತ್ತು ಅವರ ಮನೆಯಲ್ಲಿರುವ ಕುಟುಂಬದ ಸದ್ಯರ ಮೇಲೆ‌ ಪತ್ನಿಯಿಂದ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಮಂಗಳವಾರ ನವೋದಯ ಸಮಾಜ ಸೇವಾ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಮಾರು ವರ್ಷಗಳಿಂದ ಪುರುಷರ ಮೇಲೆ ಅವರ ಕುಟುಂಬದ ಸದಸ್ಯರ ಮೇಲೆ ಪತ್ನಿಯಿಂದ ಮಾನಸಿಕ ಕಿರುಕುಳ, ಅನ್ಯಾಯ ದೌರ್ಜನ್ಯ ಹಾಗೂ ಕಟ್ಟಿಕೊಂಡ ಪತಿಯ ಮೇಲೆಯೇ ಸುಳ್ಳು ಪ್ರಕರಣವನ್ನು ದಾಖಲಿಸಿ ಸಂಪೂರ್ಣ ಕುಟಂಬವನ್ನು ಬಿದಿಗೆ ತರಲು ಹಾಗೂ ಪುರುಷರ ಮನೆಯಲ್ಲಿರುವ ಮಹಿಳೆ ಹಾಗೂ ತಂದೆ ತಾಯಂದಿರನ್ನು ಅಪಮಾನ ಮಾಡಿ ತೊಂದರೆ ಕೊಡುವ ಪ್ರಸಂಗಗಳು ಸಾಕಷ್ಟು ನಡೆದಿವೆ ಎಂದು ಮನವಿಯಲ್ಲಿ ದೂರಿದ್ದಾರೆ.
ಅನೇಕ ಪ್ರಕರಣಗಳಲ್ಲಿ ಪುರುಷರು, ಪತ್ನಿ ಕೊಡುವ ಕಿರುಕುಳಕ್ಕೆ ದೇಶದಲ್ಲಿ ಹತ್ತು ನಿಮಿಷಕ್ಕೆ ಒಬ್ಬ ಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ ಮಾಹಿತಿ ನೀಡಿದೆ. ಇದರಿಂದ ಮನೆಯವರು ಬಿದಿ ಪಾಲಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ವಿವಾಹ ವಿಚ್ಛೇದನಗಳಿಂದ ಮಕ್ಕಳು ಅನಾಥರಾಗುತ್ತಿದ್ದಾರೆ. ಮಕ್ಕಳಿಗೆ ನಿಜವಾದ ತಂದೆ ಬೇಕು ಮಲ ತಂದೆಯಲ್ಲ. ತಂದೆ ಇಲ್ಲದ ಮಕ್ಕಳು, ಮಕ್ಕಳಿಲ್ಲದ ತಂದೆಯನ್ನು‌ ಸೃಷ್ಟಿಸಲು ಅವಕಾಶ ‌ನೀಡಬಾರದೆಂದು‌ ಮನವಿಯಲ್ಲಿ ಸೂಚಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಶಿಧರ ಕೋರ್ಪಡೆ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...