ಹೊಟೇಲ್ ಬಿಲ್ಲ ನೀಡಿಲ್ಲ ಎಂದು ಗಡಾದ ಅವರ ಮಾಹಿತಿ ಸತ್ಯಕ್ಕೆ ದೂರವಾಗಿದ್ದು:ಡಿಸಿ

0
190
loading...

 

ಕನ್ನಡಮ್ಮ ಸುದ್ದಿ
ಬೆಳಗಾವಿ:13 ಚಳಿಗಾಲ ಅಧಿವೇಶನದಲ್ಲಿ ಇಫಾ ಹೋಟೆಲ್‍ನ ಬಿಲ್ಲ ಪರಿಶೀಲನೆ ನಡೆಸಿ ಸಂದಾಯ ಮಾಡಬೇಕಾಗಿರುವುದರಿಂದ ಹೋಟೆಲ್‍ಗೆ ಬಿಲ್ಲ್ ಸಂದಾಯ ಮಾಡಿಲ್ಲ. ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಬಿಲ್ಲು ಸಂದಾಯ ಮಾಡಿರುವುದಾಗಿ ಪತ್ರಕರ್ತರಿಗೆ ತಿಳಿಸಿದ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಳೆದ ನವೆಂಬರ ತಿಂಗಳಿನಲ್ಲಿ ನಡೆದ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಇಫಾ ಹೊಟೇಲ್‍ನಲ್ಲಿರುವ 51 ಕೊಠಡಿಗಳನ್ನು ಸಚಿವರುಗಳಿಗೆ ಹಾಗೂ ಹಿರಿಯ ಅಧಿಕಾರಿಗಳ ವಾಸ್ತವ್ಯಕ್ಕಾಗಿ ಬಾಡಿಗೆಯ ಆಧಾರದ ಮೇಲೆ ಪಡೆದುಕೊಳ್ಳಲಾತ್ತು. ಇಫಾ ಹೋಟೆಲ್ ಇವರಿಂ ಸ್ವೀಕೃತವಾಗಿರುವ ಊಟದ ಬಿಲ್ಲನಲ್ಲಿ ವ್ಯತ್ಯಾಸ ಕಂಡು ಬಂದಿರುವುದಾಗಿ ಹಾಗೂ ಜಿಲ್ಲಾಡಳಿತವು ಹೊಟೇಲ್ ಇಫಾ ವರಿಗೆ ಬಿಲ್ಲ ಸಂದಾಯ ಮಾಡಿರುವುದರಾಗಿ ಮಾಹಿತಿ ಹಕ್ಕು ಹೋರಾಟಗಾರ ಪತ್ರಕರ್ತರಿಗೆ ಮಾಹಿತಿ ನೀಡಿರುವ ವಿಷಯ ಸಾಮಾಜಿಕ ಜಾಲತಾಣಗಳ ಮುಖಾಂತರ ತಿಳಿದು ಬಂದಿದೆ.
2016ನೇ ಸಾಲಿನ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೆಲವೊಂದು ಹೊಟೇಲಗಳ ಬಿಲ್‍ನ್ನು ಪಾವತಿಸುವುದು ಬಾಕಿ ಇರುತ್ತದೆ. ಅವುಗಳು ಪರಿಶೀಲನೆ ಹಂತದಲ್ಲಿವೆ. ಹೊಟೇಲ್ ಇಫಾ ಇವರು ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಬಿಲ್ಲನ್ನು ಪರಿಶೀಲಿಸಿ ಸಂದಾಯ ಮಾಡಬೇಕಾಗಿರುವುದರಿಂದ ಇಫಾ ಹೊಟೇಲಿಗೆ ಬಿಲ್ಲನ್ನು ಸಂದಾಯ ಮಾಡಿರುವುದರಿಲ್ಲ. ಭೀಮಪ್ಪ ಗಡಾದ ಅವರು ಬಿಲ್ ಸಂದಾಯ ಮಾಡಿರುವುದಾಗಿ ಪತ್ರಕರ್ತರಿಗೆ ತಿಳಿಸಿರುವ ಮಾಹಿತಿ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...