1456 ಜನರಿಗೆ ಉಚಿತ ಎಲ್ಪಿಜಿ ಸಂಪರ್ಕ ಸಂಸದ ಪ್ರಕಾಶ ಹುಕ್ಕೇರಿ ಘೋಷಣೆ

0
241
loading...

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 17: ಕೇಂದ್ರ ಸರಕಾರ ಉಜ್ವಲ್ ಯೋಜನೆಯಡಿ ಬಡಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸುತ್ತಿರುವ ಬೆನ್ನಲ್ಲೆ ಸಂಸದ ಪ್ರಕಾಶ ಹುಕ್ಕೇರಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದ 1456 ಬಡ ಜನರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಉಚಿತ ಸಿಲಿಂಡರ್ ವಿತರಿಸುವ ಅನ್ನಪೂರ್ಣೇಶ್ವರಿ ಅನಿಲ ಭಾಗ್ಯ ಯೋಜನೆ ಘೋಷಿಸಿದ್ದಾರೆ.
ಈ ಕುರಿತು ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ತಮ್ಮ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಪ್ರಕಾಶ ಹುಕ್ಕೇರಿ, ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿಯಲ್ಲಿ ಎಲ್ಪಿಜಿ ಹೊಂದಿರದ 456 ಬಿಪಿಎಲ್ ಕುಟುಂಬಗಳ ಫಲಾನುಭವಿಗಳಿಗೆ ಗ್ಯಾಸ ಸಂಪರ್ಕ ದೊರೆಯಲಿದ್ದು, ಆದರೆ ಫಲಾನುಭವಿಗಳು 1900 ಪಾವತಿಸಬೇಕಾಗಿದೆ. ಈ ಫಲಾನುಭವಿಗಳ ಹಣ 9.80 ಲಕ್ಷ ಹಣವನ್ನು ಸಾರ್ವನಿಕ ವಂತಿಕೆಯಿಂದ ಸಂಗ್ರಹಿಸಿ ಭರಿಸಿ ಬಡವರಿಗೆ ಉಚಿತ ಎಲ್ಪಿಜಿ ಸಂಪರ್ಕ ದೊರೆಯುವಂತೆ ಮಾಡಲಾಗುವುದು ಎಂದರು.
ಅಲ್ಲದೇ ಮುಂಬರುವ ದಿನಮಾನಗಳಲ್ಲಿ ಅನ್ನಪೂರ್ಣೇಶ್ವರಿ ಅನಿಲ ಭಾಗ್ಯ ಯೋಜನೆಯಡಿ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯ ಎಲ್ಪಿಜಿ ಸಂಪರ್ಕ ಹೊಂದಿರದ ವಿವಿಧ ಸಮುದಾಯದ 1000 ಜನರಿಗೆ ಉಚಿತ ಗ್ಯಾಸ ಸಂಪರ್ಕ ಕೊಡಿಸುವ ಉದ್ದೇಶ ಹೊಂದಲಾಗಿದ್ದು, ಈ ಯೋಜನೆಗೆ ಸುಮಾರು 40 ಲಕ್ಷ ಹಣ ವೆಚ್ಚವಾಗಲಿದ್ದು ಈ ಹಣವನ್ನು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಸಂಗ್ರಹಿಸಿ ಎಲ್ಪಿಜಿ ಸಂಪರ್ಕ ಕೊಡಿಸಲಾಗುವುದು ಎಂದರು.
ಈಗಾಗಲೇ ಸರಕಾರದ ವಿವಿಧ ಯೋಜನೆಗಳಡಿ ಪರಿಶಿಷ್ಟ ಜಾತಿಯ 4668 ಫಲಾನುಭವಿಗಳಿಗೆ, ಪರಿಶಿಷ್ಟ ಜಾತಿಯ 599 ಹಾಗೂ ಸಾಮಾನ್ಯ ವರ್ಗದ 281 ಸೇರಿ ಒಟ್ಟು 5548 ಹೆಚ್ಚು ಫಲಾನುಭವಿಗಳಿಗೆ ಉಚಿತ ಗ್ಯಾಸ ವಿತರಣೆ ಮಾಡಲಾಗಿದ್ದು, ಕ್ಷೇತ್ರವನ್ನು ಹೊಗೆಮುಕ್ತವನ್ನಾಗಿಸುವ ಸಂಕಲ್ಪದೊಂದಿಗೆ ಪ್ರತಿ ಗ್ರಾಮಮಟ್ಟದಲ್ಲಿ ಸವರ್ೆ ಮಾಡಿ ಎಲ್ಪಿಜಿ ಸಂಪರ್ಕ ಹೊಂದಿರದ ಅರ್ಹ ಕುಟುಂಬಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ವಹಿಸಲಾಗುವುದು ಎಂದರು.
3 ಬ್ಯಾರೇಜ್ಗೆ ಹಣ:
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಒಳಪಡುವ ಖೇಮಲಾಪೂರ-ಕೃಷ್ಣಾ ಕಿತ್ತೂರ ಬ್ಯಾರೇಜಗೆ 5 ಕೋಟಿ, ಉಗಾರ ಬ್ಯಾರೇಜ ಎತ್ತರಿಸಲು 6 ಕೋಟಿ, ಮಾಂಜರಿ-ಅಂಕಲಿ ಹೊಸ ಬ್ಯಾರೇಜ ನಿರ್ಮಾಣಕ್ಕಾಗಿ 5 ಕೋಟಿ ಸೇರಿ 16 ಕೋಟಿ ವೆಚ್ಚದ ಕಾಮಗಾರಿಗಳಿಗೆ ಜೂನ 28ರಂದು ಟೆಂಡರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜೂನ 30ರಂದು ಟೆಂಡರ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಚಿಕ್ಕೋಡಿ ಹಳ್ಳದ ಸ್ವಚ್ಛತೆ:
ರಾಜ್ಯದಲ್ಲಿಯೇ ಮಾದರಿಯಾಗಿ ಚಿಕ್ಕೋಡಿ ಪಟ್ಟಣದ ಹಳ್ಳದ ಮೇಲೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದ್ದು, ಮಳೆಗಾಲದ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಬಾರದೆಂಬ ಉದ್ದೇಶದಿಂದ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ, ತಹಶೀಲ್ದಾರ ಸಿ.ಎಸ್.ಕುಲಕರ್ಣಿ, ಮುಖ್ಯಾಧಿಕಾರಿ ಹುಲಗೆಜ್ಜಿ ಅವರಿಗೆ ಮಳೆ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾಡಾ ಮಾಜಿ ಅಧ್ಯಕ್ಷ ಸುರೇಶ ಕೋರೆ, ಪುರಸಭೆ ಮಾಜಿ ಅಧ್ಯಕ್ಷರಾದ ನರೇಂದ್ರ ನೇರ್ಲೆಕರ, ರಾಮಾ ಮಾನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...