ಅಂಗನವಾಡಿ ಎದುರು ಸಾರ್ವಜನಿಕರಿಂದ ಪ್ರತಿಭಟಣೆ

0
35
loading...

ಕನ್ನಡಮ್ಮ ಸುದ್ದಿ-ನರಗುಂದ: ಸುಮಾರು 8 ವರ್ಷಗಳಿಂದ ಸ್ಥಳೀಯ ಹೊರಕೇರಿ ಬಡಾವಣೆಯ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತಿದ್ದ ಎಲ್.ಎಚ್. ಭಜಂತ್ರಿ ಸರಿಯಾಗಿ ಅಂಗನಾಡಿ ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತೀಯರಿಗೆ ಒದಗಿಸಬೇಕಾದ ಆಹಾರ ಹಾಗೂ ಮೊಟ್ಟೆಗಳನ್ನು ವಿತರಣೆಮಾಡುತಿಲ್ಲವೆಂದು ಅಲ್ಲಿಯ ಸಾರ್ವಜನಿಕರು ಹಾಗೂ ಮಹಿಳೆಯರು ಅಂಗನವಾಡಿ ಎದಿರು ಶುಕ್ರವಾರ ಪ್ರತಿಭಟಣೆ ನಡೆಸಿ ಉತ್ತಮ ಸೇವೆ ಸಲ್ಲಿಸುವ ಅಂಗನವಾಡಿ ಕಾರ್ಯಕರ್ತೆಯನ್ನು ನೇಮಕಮಾಡುವಂತೆ ಸಿಡಿಪಿಒ ಇಲಾಖೆಗೆ ಆಗ್ರಹಿಸಿದರು.
ಗುಡ್ಡದ ದಿಬ್ಬದಲ್ಲಿಯ ಮಸಿದಿಯಲ್ಲಿರುವ ಅಂಗನವಾಡಿ ಸಂಖ್ಯೆ 4 ರಲ್ಲಿಕಾರ್ಯಕರ್ತೆಯಾಗಿ ಸೇವೆ ಮಾಡುತ್ತಿರುವ ಎಲ್.ಎಚ್. ಭಜಂತ್ರಿ ಶುಕ್ರವಾರ ಸೇವೆಗೆ ಹಾಜರಾಗಿರಲಿಲ್ಲ. ಅಂಗನವಾಡಿಗೆ ಬರುವಂತೆ ಅವರನ್ನು ದೂರವಾಣಿ ಮೂಲಕ ಸಾರ್ವಜನಿಕರು ಅವರನ್ನು ಸ್ಥಳಕ್ಕೆ ಕರೆಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕರ್ತೆ ಭಜಂತ್ರಿ, ದಿನಾಂಕ 18 ರಿಂದ 24 ರವರೆಗೆ ಚಿತ್ರದುರ್ಗದ ಸಿರಿಗೇರಿಯಲ್ಲಿ ಅಂಗನಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರ ನಡೆಸಿದ್ದ ಹಿನ್ನಲೆಯಲ್ಲಿ ನಾನು ಅಲ್ಲಿಗೆ ತೆರಳಿದ್ದೆ ಎಂದು ತಿಳಿಸಿದರು. ಹಾಗಿದ್ದಲ್ಲಿ ಮಂಗಳವಾರದಿಂದ ಶುಕ್ರವಾರದವರೆಗೆ ಏಕೆ ಅಂಗವನಾಡಿಗೆ ಬಂದಿಲ್ಲ. ಆಯಾ ಸುಜಾತಾ ಕುಂಬಾರ ಅವರೇ ನಾಲ್ಕು ದಿನದಿಂದ ಕೆಲಸ ನಿರ್ವಹಿಸುತಿದ್ದಾರೆ. ಶುಕ್ರವಾರ ಅಂಗನವಾಡಿ ಮಕ್ಕಳಿಗೆ ಆಹಾರ ವಿತರಣೆ ಮಾಡಿಲ್ಲ. ಒಟ್ಟು ಎಷ್ಟು ಮಕ್ಕಳು ಈ ಅಂಗನವಾಡಿಯಲ್ಲಿ ಕಲಿಯುತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿ, ಪ್ರತಿ ತಿಂಗಳು ಅಂಗನಾಡಿಗೆ ಒದಗುವ ಆಹಾರ ಸಾಮಗ್ರಿಗಳನ್ನು ಇಡಲು ಮಸೀಧಿ ಬಳಿಯಲ್ಲಿರುವ ಕೊಠಡಿಯೊಂದನ್ನು ನೀಡಲು ಕಳೆದ ಎರಡು ವರ್ಷದ ಹಿಂದೆ ತಿಳಿಸಿದರೂ ಕೂಡಾ ನೀವು ಒಪ್ಪಲಿಲ್ಲವೆಂದು ಸಾರ್ವಜನಿಕರು ಅವರ ಮೇಲೆ ಹರಿಹಾಯ್ದರು. ಆಹಾರ ಸಾಮಗ್ರಿ ಪ್ರತಿ ತಿಂಗಳು ಒದಗಿಸುವ ವಾಹನದವರು ಮಸೀದಿ ದಿಬ್ಬದ ಮೇಲೆ ಇರುವದರಿಂದ ಅಲ್ಲಿಗೆ ಬಂದು ಸಾಮಗ್ರಿಗಳನ್ನು ಇಳಿಸಿಲು ಆಗುವುದಲ್ಲವೆಂದು ತಿಳಿಸಿದ್ದರಿಂದ ಪ್ರತಿ ತಿಂಗಳು ನಮ್ಮ ಮನೆಯಲ್ಲಿಯೇ ಆಹಾರ ಸಾಮಗ್ರಿಗಳನ್ನು ಒಟ್ಟುಕೊಂಡಿರುವರುವುದಾಗಿ ಭಜಂತ್ರಿ ತಿಳಿಸಿದರು. ನಿತ್ಯದ ಮಕ್ಕಳ ದಾಖಲಾತಿ ಹಾಗು ಅಂಗನವಾಡಿ ಕಾರ್ಯಕರ್ತೆ ಹಾಗೂ ಆಯಾ ರುಜುಮಾಡುವ ಹಾಜರಿ ಪುಸ್ತಕ ಕೇಳಿದಾಗ ಅಂಗನವಾಡಿ ಕಾರ್ಯಕರ್ತೆ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದರಿಂದ ಸಾರ್ವಜನಿಕರು ಕೋವವ್ಯಕ್ತಪಡಿಸಿ, ಇದೊಂದೇ ಬಾರಿ ಅಲ್ಲ. ಅನೇಕ ಸಲ ನಿಮ್ಮ ಮೇಲೆ ಆರೋಪವಿದ್ದಾಗಲೂ ಇಲ್ಲಿ ಎಲ್ಲರೂ ಸಹಿಸಿಕೊಂಡು ತಮ್ಮನ್ನು ಇಲ್ಲಿಯೇ ಸೇವೆಯಲ್ಲಿ ಮುಂದುವರೆಸಿದ್ದರು. ಈಗ ನಿಮ್ಮ ಅಗತ್ಯವಿಲ್ಲ ನಮಗೆ ಬೇರೆ ಅಂಗನವಾಡಿ ಕಾರ್ಯಕರ್ತೆಯನ್ನು ಹಾಕಬೇಕೆಂದು ಸಿಡಿಪಿಒ ಇಲಾಖೆಗೆ ತೆರಳಿ ಸಾರ್ವಜನಿಕರು ಮನವಿ ಸಲ್ಲಿಸಿದರು.
ಮಕ್ತುಮ ಸವಟಗಿ, ಇಬ್ರಾಹಿಂ ಸವಟಗಿ, ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಪಾರೂಖ ಮಜಿದ್‍ಮನಿ, ಸಾಧಿಕಅಲಿ ಚೌದರಿ, ಸೌಕತ್‍ಅಲಿ ಅಡಗೋಡಿ, ಕೆ.ಬಿ. ಖಲೀಫ್, ಮಾಬೂಸಾಬ ಮಟಿಗೇರ, ರಾಜಬಿ ಗಸ್ತಿ, ಇಮಾಮಬಿ ಗಸ್ತಿ, ರೋಷನಬಿ ಜವಳಿ, ಜೀಜಾಬಾಯಿ ಕುಡೇನವರ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.

loading...