ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಾಗವಾನಿ ತಂಡುಗಳು ವಶಕ್ಕೆ

0
37
loading...

ಕನ್ನಡಮ್ಮ ಸುದ್ದಿ-ಕುಮಟಾ: ಕುಮಟ-ಸಿದ್ದಾಪುರ ರಸ್ತೆಯ ತಾಲೂಕಿನ ಬಡಾಳದ ಮೆದನಿ ಕ್ರಾಸ್ ಸಮೀಪ ಸುಮಾರು 1.20 ಲಕ್ಷ ರೂ ಮೌಲ್ಯದ ಸಾಗವಾನಿ ತುಂಡುಗಳನ್ನು ಅಶೋಕ ಲೈಲ್ಯಾಂಡ್ ಮಿನಿ ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರ ಆರೋಪಿಗಳನ್ನು ಸೋಮವಾರ ಬೆಳಗಿನ ಜಾವದಲ್ಲಿ ಅರಣ್ಯ ಸಿಬ್ಬಂದಿಗಳು ಬಂದಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳಾದ ಸಾಗರ ತಾಲೂಕಿನ ಕಾರ್ಗಲ್ ನಿವಾಸಿ ಪಾಶ್ರ್ವನಾಥ ಹಾಗೂ ಸಿದ್ಧರಾಜು ಎನ್ನುವವರನ್ನು ಅರಣ್ಯ ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೋರ್ವ ಆರೋಪಿ ರಮೇಶ ಬಿ ಬೆಣ್ಣೆಮನೆ ಪರಾರಿಯಾಗಿದ್ದಾನೆ. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಆರೋಪಿಗಳ ಸಹಿತ ಲಗೇಜ್ ಟೆಂಪೋ ಹಾಗೂ 1.20 ಲಕ್ಷ ರೂಪಾಯಿ ಮೌಲ್ಯದ 0.859 ಘ.ಮೀ ಸಾಗುವಾನಿ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಡಾಳದ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಅರಣ್ಯ ಸಿಬ್ಬಂದಿಗಳು ಗಸ್ತುತಿರುಗುವ ಸಂದರ್ಭದಲ್ಲಿ ಮರಗಳನ್ನು ಕಡಿದ ಬುಡಗಳು ಕಂಡು ಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕಡಿದಿಟ್ಟ ತುಂಡುಗಳ ಮೇಲೆ ನಿರಂತರ ನಿಗಾ ವಹಿಸಿದ್ದರು. ರವಿವಾರ ಅಕ್ರಮವಾಗಿ ಕಡಿದಿಟ್ಟ ತುಂಡುಗಳು ರಫ್ತುಪಡಿಸಲಿರುವ ಖಚಿತಪಡಿಸಿಕೊಂಡ ಸಿಬ್ಬಂದಿಗಳು ರವಿವಾರ ರಾತ್ರಿ ಇಡೀ ಬೆಟ್ಟದಲ್ಲಿ ಅವಿತು ಕುಳಿತಿಕೊಂಡಿದ್ದರು. ಸೋಮವಾರ ಬೆಳಗಿನ ಜಾವ ಅಶೋಕ ಲೈಲ್ಯಾಂಡ್ ಮಿನಿ ಲಾರಿಯಲ್ಲಿ ಸಾಗವಾನಿ ತುಂಡುಗಳನ್ನು ಸಾಗಾಟಮಾಡುತ್ತಿರು ಸಂದರ್ಭದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿ ಹಾಗೂ ವಾಹನ ವಾಹನ ಸಮೇತ ಸಾಗುವಾನಿ ತುಂಡುಗಳು ವಶಪಡಿಸಿಕೊಂಡಿದ್ದಾರೆ.
ಡಿಎಫ್‍ಒ ವಸಂತ ರೆಡ್ಡಿ ನಿರ್ದೇಶನದಲ್ಲಿ ಐಎಫ್‍ಎಸ್ ಅಧಿಕಾರಿ ಪಿ ರುತ್ರೇನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಡಾಳ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ ಮುಕ್ರಿ, ಸಾಂತಕಲ್ ಉಪವಲಯ ಅರಣ್ಯಾಧಿಕಾರಿ ಎಸ್ ಪಿ ಮಡಿವಾಳ, ಎಸ್ ಟಿ ಪಟಗಾರ, ಚಂದ್ರಕಾಂತ. ರಾಜೇಶ ಕೋಚ್ರೆಕರ್, ರಾಘವೇಂದ್ರ ನಾಯ್ಕ, ಮಂಜುನಾಥ ನಾಯ್ಕ, ಜೀಪ್ ಚಾಲಕ ಕಮಲಾಕರ್ ಭಂಡಾರಿ ಭಾಗವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ವಿ ನಾಯ್ಕ ತನಿಖೆ ಕೈಗೊಂಡಿದ್ದಾರೆ.

loading...