ಅಕ್ರಮ ಮರಳು: ಇಬ್ಬರ ಬಂಧನ

0
20
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಜಿಲ್ಲೆಯಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿಮಾಡಿ ಇಬ್ಬರನ್ನು ಬಂಧಿಸಿ, 36 ಸಾವಿರ ರೂ. ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.
ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಅಕ್ರಮ ಮರಳು ದಂದೆ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ 30 ಸಾವಿರ ರೂ. ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಕ್ಕೇರಿ ತಾಲೂಕಿನ ಜಾರಕಿಹೊಳಿ ಗ್ರಾಮದಲ್ಲಿ ಅಕ್ರಮ ಅಡ್ಡೆಯ ಮೇಲೆ ಪೊಲಿಸರು ದಾಳಿಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಬೆನಕನಹೊಳಿ ಗ್ರಾಮದ ಶಿವಪ್ಪಾ ರಾಮಾ ದನಾಕಾರ ಮತ್ತು ಜಿನರಾಳ ಗ್ರಾಮದ ಮಂಜುನಾಥ ಕಾಡಪ್ಪಾ ದೇಶಪ್ಪಗೋಳ ಬಂಧಿತರು. ಅವರಿಂದ 6 ಸಾವಿರ ರೂ. ಮೌಲ್ಯದ ಮರಳು ಹಾಗೂ 407 ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...