ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣವೆಂದು?

0
53
loading...


ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ಮೃದು ದೋರಣೆಯಿಂದ ನಿರಂತರವಾಗಿ ನಡೆಯುತ್ತಿರುವ ದಂಧೆ
ಭರಮಗೌಡಾ ಪಾಟೀಲ
ಬೆಳಗಾವಿ : ಸರಕಾರದ ಖಜಾನೆ ಖಾಲಿ, ಜನ ಸಾಮಾನ್ಯರ ಜೇಬಿಗೆ ಕತ್ತರಿ, ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯಿಂದ ಕಡಿವಾಣಕ್ಕೆ ಬಾರದ ಅಕ್ರಮ ಮರಳು ದಂಧೆ, ಬಂಡಿವಾಳ ಮಾಡಿಕೊಂಡ ಅಕ್ರಮಕೋರರು. ಮಹಾರಾಷ್ಟ್ರಕ್ಕೂ ಹಬ್ಬಿದ ಮರಳು ದಂಧೆ ಜಾಲ.
ಸಕ್ರಮ ಮರಳು ದೊರಯದ ಹಿನ್ನಲೆಯಲ್ಲಿ ಸಾಮಾನ್ಯ ಜನರು ತಲೆಯ ಮೇಲೆ ಕೈಯಿಟ್ಟು ಕುಳಿತುಕೊಂಡಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಅಕ್ರಮ ಮರಳು ದಂಧೆಕೋರರು ಅಥಣಿ, ಗೋಕಾಕ, ರಾಮದುರ್ಗ ತಾಲೂಕುಗಳಲ್ಲಿ ಹರಿದು ಹೋಗಿರುವ ನಾಲಾ, ನದಿ, ಹಳ್ಳ-ಕೊಳ್ಳಗಳಿಂದ ಅಕ್ರಮ ಮರಳು ತೆಗೆದು ಸಾವಿರಾರು ರೂ.ಗಳಿಗೆ ಮಾರಾಟ ಮಾಡಿಕೊಂಡು ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸ ನಿರಂತರವಾಗಿ ನಡೆಸುತ್ತಿದ್ದಾರೆ.
ಜಿಲ್ಲೆಯ ಗೋಕಾಕ, ಅಥಣಿ, ರಾಮದುರ್ಗ ಎಂದರೆ ತಕ್ಷಣ ಜನರ ಬಾಯಿಗೆ ಬರುವ ಮಾತು ಅಕ್ರಮ ಮರಳು ಸಾಗಾಟ ಕೇಂದ್ರಗಳೆಂದು. ಈ ಮೂರು ತಾಲೂಕಿನಲ್ಲಿ ಬೇರು ಬಿಟ್ಟಿರುವ ಅಕ್ರಮ ಮರಳು ದಂಧೆಕೋರರ ಜಾಲ ಇಡೀ ಬೆಳಗಾವಿ ಜಿಲ್ಲೆಯನ್ನೆ ಆವರಿಸಿ ಪಕ್ಕದ ಮಹಾರಾಷ್ಟ್ರಕ್ಕೂ ಹಬ್ಬಿಕೊಂಡಿದೆ.
ತಹಶೀಲ್ದಾರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸದೆ ಇರುವುದ್ದರಿಂದ ಅಥಣಿ, ಗೋಕಾಕ, ರಾಮದುರ್ಗ ತಾಲೂಕುಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಮರಳು ಸಾಗಾಟ ದಂಧೆ ನಡೆಯುತ್ತಿದೆ. ಖಚಿತ ಮಾಹಿತಿವಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ದಾಳಿ ನಡೆಸದೆ ಇರುವುದು ಈ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ದಂಧೆಗೆ ಕಡಿವಾಣವೆಂದು ಜನ ಸಾಮಾನ್ಯರ ಪ್ರಶ್ನೆಯಾಗಿದೆ. ಆದರೆ ಅಕ್ರಮ ಮರಳು ದಂಧೆಗೆ ಲಂಗು, ಲಗಾಮು ಹಾಕಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ಮೃದು ದೋರಣೆಯಿಂದ ಹಾಗೂ ಅಧಿಕಾರಿಗಳು ಅಕ್ರಮ ಮರಳು ದಂಧೆಗೆ ಕುಮಕ್ಕು ನೀಡುತ್ತಿರುವುದ್ದರಿಂದ ಅಕ್ರಮ ಮರಳು ದಂಧೆ ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯತೆಗೆ ಕ್ರಮ ಕೈಗೊಂಡು ಸರಕಾರ ಜನ ಸಾಮಾನ್ಯರ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.
========
ಗೋಕಾಕ ಹಾಗೂ ರಾಮದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಕಣ್ಣು ಮುಚ್ಚಿ ಕೆಲಸ ಮಾಡದೆ, ಹುದ್ದೆಯ ಗೌರವ ಉಳಿಸಿಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು. ಅಧಿಕಾರಿಗಳ ಮೃದು ದೋರಣೆ ತಾಳಿದ್ದರಿಂದ ಅಕ್ರಮ ದಂಧೆಕೋರರಿಗೆ ಕುಮಕ್ಕು ನೀಡಿದಂತಾಗುತ್ತದೆ. ಅಕ್ರಮ ಮರಳು ದಂಧೆಯನ್ನು ಸಮುಗ್ರವಾಗಿ ಮಟ್ಟಹಾಕಿ ಅವರ ವಿರುದ್ಧ ಕ್ರಿಮೀನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳÀÀಲೂ ಸೂಚಿಸಲಾಗಿದೆ.
ಎನ್.ಜಯರಾಮ್
ಜಿಲ್ಲಾಧಿಕಾರಿಗಳು ಬೆಳಗಾವಿ
========
ಸರಕಾರ ಸಂಪೂರ್ಣ ಮರಳು ನೀತಿಯನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಹೊಸ ನೀತಿಯನ್ನು ಸರಕಾರ ಕೈಬಿಟ್ಟು ಹಳೆಯ ನೀತಿಯನ್ನು ಮುಂದುವರೆಸಬೇಕು. ಹೊಸ ನೀತಿಯ ಪರಿಣಾಮ ಇಂದು ಬಡವರು, ಸಾಮಾನ್ಯ ಜನರು ಮನೆ ಇನ್ನಿತರ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು ಮರಳಿಗಾಗಿ ಪರದಾಡಬೇಕಾಗಿದೆ. ಸರಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತಿಲ್ಲ. ಇತ್ತ ಬಡವರಿಗೆ ಸಕ್ರಮ ಮರಳು ದೊರೆಯುತ್ತಿಲ್ಲ. ಬಡವರು, ಸಾಮಾನ್ಯ ಜನರಿಗೆ ಮರಳು ದೊರೆಯುವ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
ಶಶಿಕಾಂತ ನಾಯಿಕ
ಬಿಜೆಪಿ ಜಿಲ್ಲಾಧ್ಯಕ್ಷರು ಚಿಕ್ಕೋಡಿ
=======
ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವುದಕ್ಕೆ ಗುರುವಾರ ಅಕ್ರಮ ಮರಳು ಸಾಗಾಟ ಮಾಡಲು ತೆರಳುತ್ತಿದ್ದ ಟ್ರಾಕ್ಟರ್ ಟ್ರೇಲರ್ ಪಲ್ಟಿಯಾದ ಪರಿಣಾಮ ಮನ್ನಾಪೂರ ಗ್ರಾಮದಲ್ಲಿ ಇಬ್ಬರು ಸಾವನಪ್ಪಿ ಐವರು ಗಾಯಗೊಂಡಿರುವ ಘಟನೆ ಸಾಕ್ಷಿಯಾಗಿದೆ. ಅಕ್ರಮ ಮರಳು ದಂಧೆಕೋರರ ಅಕ್ರಮ ದಂಧೆಗೆ ಎರಡು ಬಡ ಜೀವಿಗಳು ಬಲಿಯಾಗಿರುವುದಂತು ಅಧಿಕಾರಿಗಳ ನಿರ್ಲಕ್ಷ್ಯತೆಗೆ ಕೈಗನ್ನಡಿಯಾಗಿರುವುದು ನಿಜ. ಅಧಿಕಾರಿಗಳು ಅಕ್ರಮ ಮರಳು ದಂಧೆಯನ್ನು ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದ್ದರೆ ಎರಡು ಜೀವಗಳನ್ನು ಉಳಿಸಬಹುದಾಗಿತ್ತು.
=========
ಖಚಿತ ಮಾಹಿತಿ ಮೆರೆಗೆ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಸರಕಾರಿ ವಾಹನದಲ್ಲಿ ತೆರಳುವ ಮುಂಚೆ ನಡು ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ನಿಲ್ಲುವ ಮಾಹಿತಿದಾರರು ಅಕ್ರಮ ಮರಳು ಸಾಗಾಟ ನಡೆಸುವವರಿಗೆ ಮಾಹಿತಿ ನೀಡುತ್ತಾರೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ. ಜಿಲ್ಲಾಧಿಕಾರಿಗಳಿಗೆ ಬರುವ ಖಚಿತ ಮಾಹಿತಿ ಅಲ್ಲಿನ ಅಧಿಕಾರಿಗಳಿಗೆ ಡಿಸಿಯವರು ಕ್ರಮ ಕೈಗೊಳ್ಳಲೂ ಸೂಚನೆ ನೀಡಿದರೆ ಅಧಿಕಾರಿಗಳು ಖಾಸಗಿ ವಾಹನದಲ್ಲಿ ತೆರಳಿ ಕ್ರಮ ಕೈಗೊಳ್ಳುವ ಬದಲು ಸರಕಾರಿ ವಾಹನಗಳಲ್ಲಿ ತೆರಳಿದರೆ ಅಕ್ರಮ ಮರಳು ಗಣಿಗಾರಿಕೆ ನಡೆಸುವರಿಗೆ ತಿಳಿಯುವಿದಿಲ್ಲವೇ ಎನ್ನುವುದು ಸಹ ಅಧಿಕಾರಿಗಳಿಗೆ ತಿಳಿದಿಲ್ಲ ಎಂದರೆ ವಿಪರ್ಯಾಸದ ಸಂಗತಿಯಾಗಿದೆ.

loading...