ಅಧ್ಯಾತ್ಮಿಕ ಶಕ್ತಿ ಎಲ್ಲ ಶಕ್ತಿಗಿಂತ ಮಿಗಿಲು

0
37
loading...

ಕನ್ನಡಮ್ಮ ಸುದ್ದಿ-ಧಾರವಾಡ- ಭವಾನಿನಗರದ ರಾಯರ ಮಠದಲ್ಲಿ ಚಾತುರ್ಮಾಸ್ಯ ಪೂರ್ವ ಸಂಚಾರದ ಪ್ರಯುಕ್ತ ನಗರಕ್ಕೆ ಆಗಮಿಸಿದ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರಿಗೆ ತಪ್ತಮುದ್ರಾಧಾರಣ ಮಾಡಿದರು.
ರಾಯರ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ನಾನಾ ವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮುದ್ರಾಧಾರಣ ನಿಮಿತ್ತ ಸುದರ್ಶನ ಹೋಮ ನಡೆಯಿತು. ಇದೇ ಸಂದರ್ಭದಲ್ಲಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿದ ಶ್ರೀಗಳು ಭಕ್ತರಿಗೆ ಸುದರ್ಶನ ಹೋಮಾಗ್ನಿಯ ತಪ್ತ ಶಂಖ ಚಕ್ರಗಳ ಮುದ್ರಾಧಾರಣ ಮಾಡಿದರು. ನಂತರ ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ಮಂತ್ರಾಲಯ ವಿದ್ಯಾಪೀಠದ ಕುಲಪತಿ ಪಂ ವಾದಿರಾಜಾಚಾರ್ಯ ಪ್ರವಚನ ನೀಡಿ, ಕಲಿಕಾಲದಲ್ಲಿ ಧರ್ಮಕ್ಕೆ ಗ್ಲಾನಿಯಾಗುತ್ತಿರುವ ಸಂದರ್ಭದಲ್ಲಿ ಕರುಣಾಮೂರ್ತಿಗಳಾದ ರಾಯರು ಭಕ್ತರನ್ನು ಉದ್ದಾರ ಮಾಡುತ್ತಿದ್ದಾರೆ. ಧರ್ಮ ಸಂಸ್ಕಾರಗಳಿಂದಲೇ ಜೀವಕ್ಕೆ ಮುಕ್ತಿ ಲಭ್ಯವಾಗುತ್ತಿದೆ. ಇದರಲ್ಲಿ ಸಂಶಯವೇ ಇಲ್ಲ. ಅಧ್ಯಾತ್ಮಿಕ ಶಕ್ತಿ ಎಂತಹ ಶಕ್ತಿಗಿಂತ ಮಿಗಿಲಾಗಿದೆ. ಆದ ಕಾರಣ ರಾಯರ ಸೇವ್ಯದಿಂದ ಧರ್ಮ ಮಾರ್ಗದಲ್ಲಿ ನಡೆಯವದು ಇಂದಿನ ಅನಿವಾರ್ಯವಾಗಿದೆ ಎಎಂದು ಹೇಳಿದರು.
ಆರ್. ಕೆ. ವಾದೀಂದ್ರಾಚಾರ್ಯ, ಸಂಸದ ಪ್ರಹ್ಲಾದ ಜೋಶಿ, ಸಿ. ನಾಗರಾಜರಾವ್, ಗುರುರಾಜಾಚಾರ್ಯ ಸಾಮಗ, ಕೆ. ರಘೋತ್ತಮರಾವ್, ಪಂ. ಎನ್. ಆರ್. ದ್ವಾರಕಾನಾಥಾಚಾರ್ಯ ಉಪಸ್ಥಿತರಿದ್ದರು.

loading...