ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆಗಳು ಆಗಸ್ಟ್ 21 ರಿಂದ ಬಂದ್

0
110
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಅನುದಾನ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ 20 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 21 ರಿಂದ ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪೌಢ್ರ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಮತ್ತು ಆಗಸ್ಟ್ 26 ರಂದು ಬೃಹತ್ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಎಂಎಲ್‍ಸಿ ಮತ್ತು ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು.
ನಗರದ ಕೆಎಲ್‍ಇ ಜೀರಗಿ ಸಭಾಭವನದಲ್ಲಿ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟ ವತಿಯಿಂದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸಬೇಕು. 20 ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ತ್ರೀವಗೊಳ್ಳಿಸಬೇಕಾಗಿದೆ. ರಾಜ್ಯದಲ್ಲಿ ಮುಂಬೈ ಕರ್ನಾಟಕದಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಇವೆ ಬೆಳಗಾವಿ ವಿಭಾಗದಲ್ಲಿ 72% ಶಿಕ್ಷಣ ಸಂಸ್ಥೆಗಳು ಇವೆ. ಸರ್ಕಾರ ದಿನಕ್ಕೊಂದು ಆದೇಶ ಹೋರಡಿಸುತ್ತಿದೆ. ಈ ಸಭೆಯ ಮೂಲಕ ಸರ್ಕಾರಕ್ಕೆ ಬೀಸಿ ಮುಟ್ಟಿಸುವ ಕೆಲಸ ಆಗಬೇಕು. ಸಭೆಯಲ್ಲಿ ಹೊರಾಟದ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸದ ಪ್ರಭಾಕರ ಕೋರೆ ಮಾತನಾಡಿ, ಬಸರಾಜ ಹೊರಟ್ಟಿ ಖಾಸಗಿ ಸಂಸ್ಥೆಯ ಪರವಾಗಿ ಹೋರಾಟವನ್ನು ಮೊದಲ ಆರಂಭಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನೂರಾರು ವರ್ಷಗಳಿಂದ ಶಿಕ್ಷಣ ನೀಡುತ್ತಿದ್ದಾರೆ. ಮೊದಲಿನ ಕಾಲದಲ್ಲಿ ದಾನಿಗಳಿಂದ ಶಿಕ್ಷಣ ಸಂಸ್ಥೆ ಬೆಳಿಸಲು ಸಾಧ್ಯವಾಗಿತ್ತು. ಈಗ ದಾನಿಗಳು ಇಲ್ಲ. ಸರ್ಕಾರ ತಾರತ್ಯಮ ಮಾಡುತ್ತಿದೆ ಸಚಿವರಿಗೆ ಸೇರಿದ ರಾಣಿಬೆನ್ನೂರಿನ ಶಿಕ್ಷಣ ಸಂಸ್ಥೆಗೆ ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಶಾಲೆಗಳನ್ನು ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬೀಸಿ ಮೂಟಿಸುವ ಕೆಲಸ ಮಾಡಬೇಕಾಗಿದೆ. ಈ ವೇಸಿಕೆ ಜಾತ್ಯಾತೀತ ಮತ್ತು ರಾಜಕೀಯ ಹೊರತುಪಡಿಸಿ ಹೋರಾಟ ಮತ್ತು ಸಂಘಟನೆಯಾಗಿದೆ ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಒಗ್ಗಟಿನಿಂದ ಸರ್ಕಾರದ ಮೇಲೆ ಒತ್ತಡ ತರಬೇಕು. ಅಧಿವೇಶನವನ್ನು ಬೆಳಗಾವಿ ನಡೆಯುವಂತೆ ಸರ್ಕಾರಕ್ಕೆ ಒತ್ತಡ ಹಾಕಬೇಕು. ಆಗ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚಿಸಲು ಸಾಧ್ಯವಾಗುವುದು. ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ತ್ ಸದಸ್ಯ ಮಹಾಂತೇಶ ಕವಟಗಿಮಠ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಹಸವು ನಿಗ್ಗಿಸಿದ್ದು ಸರ್ಕಾರ ಮರತ್ತಿದೆ. ಸಂಘಟನೆ ಮೂಲಕ ಖಾಸಗಿ ಶಿಕ್ಷಣ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡಬೇಕಾಗಿದೆ. ಮುಂಬೈ ಕರ್ನಾಟಕ ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಪಡುತ್ತಿದೆ. ಬೆಳಗಾವಿ ವಿಭಾಗದಲ್ಲಿಯೇ ಶೇ. 72 ರಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಶಾಸಕ ಸಂಜಯ ಪಾಟೀಲ, ಎಂಎಲ್‍ಸಿಗಳಾದ ಅರುಣ ಶಾಹಪುರ, ಹನುಮಂತ ನಿರಾಣಿ, ಮಾಜಿ ಸಂಸದ ಅಮರಸಿಂಗ ಪಾಟೀಲ, ವೀರಣ್ಣಾ ಚರಂತಿಮಠ, ಡಿ.ಸಿ ಗೋಪಿನಾಥ ಶಂಕರಣ್ಣಾ ಮುನ್ನೋಳಿ ಮತ್ತು ರಾಜ್ಯ ಶಾಲಾ ಆಡಳಿತ ಮಂಡಳಿಯ ಸದಸ್ಯರು ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

loading...