ಅನುಭವಿಕರಿಗೆ, ಹಿರಿಯರಿಗೆ ಕೆಪಿಸಿಸಿಯಲ್ಲಿ ಸೂಕ್ತ ಸ್ಥಾನ

0
37
loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ: ಕೆ.ಪಿ.ಸಿ.ಸಿ. ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಎ.ಎಂ. ಹಿಂಡಸಗೇರಿ ಮಾಜಿ ಸಚಿವರು ಮತ್ತು ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು. ವಿಧಾನಪರಿಷತ್ ಮಾಜಿ ಸದಸ್ಯರಾದ ವೀರಣ್ಣಾ ಮತ್ತಿಕಟ್ಟಿ, ಹಾಗೂ ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಪಾರಸಮಲ್ ಜೈನ, ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಅನಿಲಕುಮಾರ ಪಾಟೀಲ, ರಾಜಶೇಕರ ಮೆಣಸಿನಕಾಯಿ, ಹಳೇ ಧಾರವಾಡ ಜಿಲ್ಲೆಯಿಂದ ನೇಮಕವಾಗಿ ಇವರೆಲ್ಲ ಆಯ್ಕೆಯನ್ನು ಈ ಭಾಗದ ಪಕ್ಷದ ಸಂಘಟನೆಯ ದೃಷ್ಟಿಯಿಂದ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಎಚ್.ವ್ಹಿ, ಮಾಡಳ್ಳಿಯವರು ಸ್ವಾಗತಿಸಿದ್ದಾರೆ.
ಶನಿವಾರ ಬೆಳಗ್ಗೆ 10.30ಕ್ಕೆ ಎ.ಎಂ. ಹಿಂಡಸಗೇರಿ ಅವರ ನಿವಾಸಕ್ಕೆ ತೆರಳಿ ಶಾಲುಹೊದಿಸಿ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಾ. ಮಹೇಶ ನಾಲವಾಡ, ಎಸ್.ಬಿ. ವಡ್ಡಟ್ಟಿ, ಜೆ.ಡಿ. ಇಂಗಳಗಿ, ಬಿ.ಡಿ. ಗಾಣಗೇರ ಮುಂತಾದವರು ಹಾಜರಿದ್ದರು.
ನಂತರ ಎಚ್.ವ್ಹಿ. ಮಾಡಳ್ಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

loading...