ಲಾರಿ-ಬಸ್ ಮುಖಾಮುಖಿ ಡಿಕ್ಕಿ ನಾಲ್ವರು ಗಂಭೀರ ಗಾಯ

0
54
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಖಾನಾಪುರ ತಾಲೂಕಿನ ಸಾವರಗಾಳಿ ಹತ್ತಿರ ಲಾರಿ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡದಿದೆ.
ಪ್ರಭಾಕರ ಚೌಗಲೆ, ಸಿದ್ದಯ್ಯ ಮಠಪತಿ, ಉತ್ತರ ಪ್ರದೇಶದ ದೀಪಕ ಸಿಪಾಯಿಲಾಲ ಹಾಗೂ ರಾಮಕುಮಾರ ಬನಪುಕದಂ ಗಂಭೀರ ಗಾಯಗೊಂಡವರು. ಬಸ್ ಚಾಲಕ ಪ್ರಭಾಕರ ಚೌಗಲೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ಮೂರರು ಸ್ಥಿತಿಯೂ ಗಂಭೀರವಾಗಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಗೋವಾ ಕಡೆಗೆ ಹೊರಟಿತ್ತು ಬಸ್ ಖಾನಾಪುರದಿಂದ ಗುಂಜಿ ಕಡೆಗೆ ಹೊರಟಿದ್ದ ಬಸ್‍ಗೆ ರಭಸದಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ನಂದಗಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...