ಅಪರೂಪದ ಅಳಿವಿನಂಚಿನ ಉಡ ರಕ್ಷಣೆ; ಡಿಸಿಎಫ್‍ಗೆ ಹಸ್ತಾಂತರ

0
47
loading...

ಬೆಳಗಾವಿ: ಅಪರೂಪದ ಅಳಿವಿನಂಚಿನ (ಘೋರ್ಪಡ)  ಉಡವನ್ನು ಬಿಜೆಪಿ ನಾಯಕರು ರಕ್ಷಿಸಿ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ಅವರಿಗೆ ಒಪ್ಪಿಸಿದ್ದಾರೆ.
ವೆರ್ನಿಡಾ ಕುಟುಂಬದ, ರೆಪ್ಟಿಲ್ಲಾ ವರ್ಗದ ಈ ಬೃಹತ್ ಹಲ್ಲಿ ಪ್ರಕಾರವೂ ಆಫ್ರಿಕಾ, ಏಷಿಯಾ ಹಾಗೂ ಓಸಿಯಾನಿಯಾ ಮೂಲದ್ದು ಎಂದು ನಂಬಲಾಗಿದೆ. ವಣ್ಯಜೀವಿ ಕಾಯ್ದೆ 1972 ರ 15 ನೇ ಕಾಯ್ದೆ ಅಡಿ ಈ ದೊಡ್ಡ ಹಲ್ಲಿ ಪ್ರಕಾರ ಗುರುತಿಸಲಾಗಿದೆ.
ವ್ಯಕ್ತಿಯೊಬ್ಬ ತನಗೆ ಸಿಕ್ಕ ಉಡವನ್ನು ರಕ್ಷಣೆಗಾಗಿ ಹಿಡಿದು ನಗರದಲ್ಲಿ ಸಾಗುತ್ತಿದ್ದಾಗ ಬಿಜೆಪಿ ಮುಖಂಡ ಕಿರಣ ಜಾಧವ ಮತ್ತಿತರರು ಡಬ್ಬದಲ್ಲಿ ಸಂಗ್ರಹಿಸಿ ತಂದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಅಪರೂಪದ ಉಡಕ್ಕೆ ಹಾನಿ ಮಾಡದೇ ವ್ಯವಸ್ಥಿತವಾಗಿ ರಕ್ಷಿಸಿ ತಮಗೆ ಒಪ್ಪಿಸಿದ್ದಕ್ಕಾಗಿ ಡಿಸಿಎಫ್ ಬಸವರಾಜ ಪಾಟೀಲ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಉಡವನ್ನು ಕಾಡಿಗೆ ಬಿಡಲಾಯಿತು. ಈ ಸಂದರ್ಭದಲ್ಲಿ ಎಸಿಎಫ್ ಸಿ ಬಿ. ಪಾಟೀಲ, ನಗರದ ಆರ್‍ಎಫ್‍ಒ ಶ್ರೀನಾಥ ಕಡೋಲಕರ ಉಪಸ್ಥಿತರಿದ್ದರು.

loading...