ಅ.1 ರಂದು ವ್ಯಸನ ಮುಕ್ತ ದಿನಾಚರಣೆ ನಿರ್ಧಾರ ಸೂಕ್ತವಾಗಿದೆ:  ಗುರು ಮಹಾಂತ ಸ್ವಾಮಿಗಳು

0
111
loading...

ಕೋಹಳ್ಳಿ : ಡಾ. ಮಹಾಂತ ಶಿವಯೋಗಿಗಳು ಅನೇಕ ವರ್ಷಗಳಿಂದ ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಸಿಕೊಂಡು ಲಕ್ಷಾಂತರ ಜನರ ಕಣ್ಣೀರಿಡುವ ಕುಟುಂಬಗಳಿಗೆ ನೆಮ್ಮದಿಯ ಜೀವನ ಸಾಗಿಸಲು ಸರ್ಕಾರ ಬಾಗಲಕೋಟ ಜಿಲ್ಲೆಯಾದ್ಯಂತ ಮಹಾಂತ ಶಿವಯೋಗಿಗಳ ಜನ್ಮ ದಿನವಾದ ಅಗಷ್ಟ 1 ರಂದು ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಿಸಲು ಆದೇಶಿಸಿದ್ದು ಸರಕಾರದ ಈ ನಿರ್ಧಾರ ಸೂಕ್ತವಾಗಿದೆ ಎಂದು ಸವದಿ – ಇಲಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮಿಗಳು ಹೇಳಿದರು.
ಸಮೀಪದ ಸವದಿ ಶ್ರೀ ಸಂಗನ ಬಸವ ಮಠದಲ್ಲಿ 294 ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಅಗಷ್ಟ 1 ರಂದು ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಿಸುವ ಭರವಸೆಯಿದೆ. ಇಂದಿನ ದಿನಮಾನಗಳಲ್ಲಿ ಯುವ ಜನಾಂಗವು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ್ದರಿಂದ ವ್ಯಸನ ಮುಕ್ತ ದಿನಾಚರಣೆಯನ್ನು ಶೀಘ್ರವಾಗಿ ಇಡೀ ರಾಜ್ಯಾಂದ್ಯಂತ ಜಾರಿಗೆ ತರಬೇಕೆಂದು ಹೇಳಿದರು.
ಬಸವ ಬೆಳವಿ ಚರಂತೇಶ್ವರ ಮಠದ ಶ್ರೀಶರಣ ಬಸವ ದೇವರು ಮಾತನಾಡಿ, ಮೂಢನಂಬಿಕೆ, ಕಂದಾಚಾರ, ಜಾತಿಯತೆ, ದುಶ್ಚಟಗಳನ್ನು ದೂರ ಮಾಡಿದ ಡಾ. ಮಹಾಂತ ಶಿವಯೋಗಿಗಳು ಪೂಜ್ಯರಲ್ಲಿಯೇ ಶ್ರೇಷ್ಠ ಸ್ಥಾನದಲ್ಲಿದ್ದಾರೆ. ಅವರ ಕಾಯಕ ದಾಸೋಹ ಸೇವೆ ನಿಜಕ್ಕೂ ಸರ್ವ ಕಾಲಕ್ಕೂ ಸಾರ್ಥಕವಾಗುವದೆಂದು ಹೇಳಿದರು.
ದಿವ್ಯಸಾನಿಧ್ಯವನ್ನು ಸವದಿ-ಇಲಕಲ್ ಮಠದ ಡಾ. ಮಹಾಂತ ಶಿವಯೋಗಿಗಳು ವಹಿಸಿದ್ದರು. ಶಿರೂರದ ಡಾ ಬಸವಲಿಂಗ ಶ್ರೀಗಳು, ಜನವಾಡ ಅಲ್ಲಮಫ್ರಭು ಆಶ್ರಮದ ಶ್ರೀಮಲ್ಲಿಕಾರ್ಜುನ ದೇವರು ಹಾಗೂ ಗುಳೆದಗುಡ್ಡದ ಶ್ರೀ ಗುರುಬಸವ ದೇವರು ಮಾತನಾಡಿದರು. ಶಿಕ್ಷಕ ಎಸ್. ಎಸ್. ಇಂಗಳೇಶ್ವರ, ಸವದಿ ಗ್ರಾ. ಪಂ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಮಲ್ಲಪ್ಪ ಅವಟಿ, ಗುರುಲಿಂಗ ಬಾಳಿಕಾಯಿ ಇವರಿಗೆ ಶ್ರೀಮಠದಿಂದ ಗೌರವ ಸತ್ಕಾರ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಶ್ರೀಶೈಲ ಬಾಳಿಕಾಯಿ, ಭೀಮಣ್ಣ ರಾಜಮನಿ, ಜಿನ್ನಪ್ಪ ಸುರಗೋಣ, ಅಶೋಕ ಸಾರವಾಡ, ಜಯಾನಂದ ಪಾಟೀಲ, ಬಾಕಪ್ಪ ಮಾಯಪ್ಪನವರ, ಸುರೇಶ ಸಂತಿ, ಭೀಮಣ್ಣ ಅಥಣಿ ಉಪಸ್ಥಿತರಿದ್ದರು. ಪ್ರಕಾಶ ಪಾಟೀಲ ನಿರೂಪಿಸಿದರು. ಸಂಗನಗೌಡ ಪಾಟೀಲ ವಂದಿಸಿದರು.

loading...