ಉಗಾರ ಕ್ಲಬ್ ಇನ್ನುಳಿದ ಶಾಖೆಗಳಿಗೆ ಮಾದರಿ: ಉದಯಕುಮಾರ

0
32
loading...

ಕಾಗವಾಡ: ಲಾಯನ್ಸ್ ಕ್ಲಬ್ ಇದು ಒಂದು ಸಾಮಾನ್ಯರ ನಿಸ್ವಾರ್ಥ ಸೇವಾ ಸಂಸ್ಥೆ. ಲಾಯನ್ಸ್‍ಕ್ಲಬ್ ಸ್ಥಾಪಿಸಿ ಈ ವರ್ಷ 100 ವರ್ಷ ಪೂರೈಸಿದೆ.20 ವರ್ಷಗಳಿಂದ ಉಗಾರ ಪರಿಸರದಲ್ಲಿ ಸೇವೆ ಸಲ್ಲಿಸುವ ಉಗಾರ ಕ್ಲಬ್ ಇನ್ನುಳಿದ ಶಾಖೆಗಳಿಗೆ ಮಾದರಿಯಾಗಿದೆ ಎಂದು ಬೆಳಗಾವಿ ಜಿಲ್ಲಾ ಲಾಯನ್ಸ್ ಕ್ಲಬ್ ಗವರ್ನರರಾದ ಉದಯಕುಮಾರ ವಿಂಜನೆಕರ್ ಉಗಾರದಲ್ಲಿ ಹೇಳಿದರು.
ಉಗಾರ ಬಾಲಮಂದಿರ ಸಭಾಂಗಣದಲ್ಲಿ ಸನ್ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮ ನೆರವೆರಿತು. ಈ ಸಮಾರಂಬಕ್ಕೆ ಮುಖ್ಯ ಅತಿಥಿಗಳಾಗಿ ಉದಯಕುಮಾರ ವಿಂಜನೆಕರ್ ಆಗಮಿಸಿ ಅಧಿಕಾರ ಹಸ್ತಾಂತರ ಮಾಡಿದರು.
ಉಗಾರ ಶಾಖೆಯಅಧ್ಯಕ್ಷ ಬಿ.ಎನ್.ಚೌಗುಲೆ ಇವರು ನೂತನ ಅಧ್ಯಕ್ಷ ಸಚೀನ ಪೋತದಾರ ಇವರಿಗೆ ಅಧಿಕಾರ ಹಸ್ತಾಂತರಿಸಿದರು. ಉಗಾರ ಶಾಖೆಗೆ ಉಪಾಧ್ಯಕ್ಷರಾಗಿ ಎಸ್.ಎನ್.ಗುರವ, ಪಿ.ಕೆ.ಕೂಡಒಕ್ಕಲಗಿ, ರಾಹುಲ ಶಾಹಾ, ಪಿಎಂಜೆಎಫ್ ರಾಜಾಭಾವು ಶಿರಗಾಂವಕರ, ಕಾರ್ಯದರ್ಶಿಗಳಾಗಿ ಡಾ.ಬಾಳಗೌಡ ಪಾಟೀಲ, ಸಹಕಾರ್ಯದರ್ಶಿ ಜೆ.ಎಸ್.ಪಾಟೀಲ, ಖಜಾಂಚಿ ಸುಭಾಷ ಹೆಬ್ಬಾಳೆ, ಲಾಯನ್‍ಟ್ವಿಸ್ಟರ್ ಶಶಿಕಾಂತ ಜೋಶಿ, ಲಾಯನ್‍ಟೇಮರ್ ಮನೋಜ ಮಾಲಗತ್ತೆ, ಸಂಚಾಲಕರಾಗಿರಾಜೇಂದ್ರ ಪೋತದಾರ, ರವೀಂದ್ರಗಾಣಿಗೇರ, ಜಗದಿಶ ಪಟವರ್ಧನ, ಡಾ.ಅಶೋಕ ಆರಗೆ ಇವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಗಾರ ಶಾಖೆಯ ಹಿಂದಿನ ಅಧ್ಯಕ್ಷರನ್ನು ಅತಿಥಿಗಳಿಂದ ಸನ್ಮಾನಿಸಲಾಯಿತು.ಎಸ್.ಎನ್.ಗುರವ ವರದಿವಾಚನ ಮಾಡಿದರು.ಜ್ಯೋತಿಕುಮಾರ ಪಾಟೀಲ, ಎ.ಬಿ.ಹೊನನವರ, ಡಾ.ಬಾಳಗೌಡ ಪಾಟೀಲ, .ವಿ.ಎಸ್.ದೇಶಪಾಂಡೆ, ಬಿ.ಬಿ.ಕಾಗೆ, ದೀಪಚಂದ ಶಾಹಾ, ಪಿ.ಬಿ.ಕುಲಕರ್ಣಿ, ಡಾ.ಎಸ್.ಎ.ಭರಮದೆ, ಬಿ.ಡಿ.ಕಟ್ಟಿ, ಡಾ.ಬಿ.ಎ.ಪಾಟೀಲ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.

loading...