ಉದ್ಯಮಭಾಗದ ಕೈಗಾರಿಕೆ ಮೂಲಭೂತ ಸೌಲಭ್ಯಗಳಿಂದ ವಂಚಿತ: ಉಮೇಶ

0
48
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಉದ್ಯಮಭಾಗದ ಸಣ್ಣ ಕೈಗಾರಿಕೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಉಮೇಶ ಶರ್ಮ ಹೇಳಿದರು.
ನಗರದ ಉದ್ಯಮಭಾಗದ ಸಣ್ಣ ಕೈಗಾರಿಕೆ ಸಭಾ ಭವನದಲ್ಲಿ ಸೋಮವಾರ ನಡೆದ ಕೈಗಾರಿಕೆಗಳ ಮೂಲಭೂತ ಸೌಲಭ್ಯಗಳ ಕೊರತೆ ಸಭೆಯಲ್ಲಿ ಮಾತನಾಡಿದ ಅವರು. ಕೈಗಾರಿಕೆಗಳಿಗೆ ಪಾಲಿಕೆಯಿಂದ ಯಾವುದೇ ಸೌಲಭ್ಯ ಇಲ್ಲದಂತಾಗಿದೆ. ವಿದ್ಯುತ್, ನೀರು, ಸ್ವಚ್ಚತೆ, ಬದ್ರತೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡದೆ ಪಾಲಿಕೆ ಅಧಿಕಾರಿಗಳು ಕೈಗಾರಿಕೆಗಳ ಕಡೆ ಯಾವೊಬ್ಬರು ಸಮಸ್ಯೆಗಳನ್ನು ಆಲಿಸಲು ಬರುವುದಿಲ್ಲಾ ಆದರೆ, ಕೈಗಾರಿಕೆಗಳ ಕರವಸುಲಿಗೆ ಮಾತ್ರ ಬರುತ್ತಾರೆ.
ಕೈಗಾರಿಕೆಗಳಲ್ಲಿ ವಿದ್ಯುತ್ ಇಲ್ಲದೇ ಕೈಗಾರಿಕೆಗಳ ಬಿಡಿ ಭಾಗಗಳು ಕಳ್ಳತನವಾಗುತ್ತಿದೆ. ಈ ಕುರಿತು ದೂರು ನೀಡಿದರು ಯಾವುದೇ ಪ್ರಯೋಜನೆಯಾಗಿಲ್ಲ. ಸಣ್ಣ ಕೈಗಾರಿಕೆ ಸಚಿವರ ಜಿಲ್ಲೆಯಲ್ಲಿಯೆ ಇಂತಹ ತೊಂದರೆಯಾಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲಿನ ಉದ್ಯಮಿಗಳ ತೊಂದರೆಯನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಕೈಗಾರಿಕೆಗಳನ್ನು ಬಂದ್ ಮಾಡಿ ಸುಮಾರು 8 ರಿಂದ 10 ಸಾವಿರ ಕಾರ್ಮಿಕರನ್ನು ಸೇರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಯ ಉಪಾಧ್ಯಕ್ಷ ರೋಹನ್ ಜವಳಿ, ವೆಂಕಟೇಶ ಸರ್ನೊಬತ್, ನಗರ ಸೇವಕರಾದ ರೂಪಾ ನೇಸರ್ಕರ, ಮೋಹನ್ ಬಾಂದುರ್ಗಿ, ಆಶ್ಪಕ್ ತಹಶಿಲ್ದಾರ್, ವಿಠಲ ಗೌಸ್, ಮಾದೇವ ಚೌಗಲೆ, ಅಶೋಕ, ಕೋಳಿ ಸೇರಿದಂತೆ ನೂರಾರು ಉದ್ಯಮಿಗಳು ಇದ್ದರು.

loading...