ಎನ್.ಜಿ.ಓ. ಒಕ್ಕೋಟ ಆಸ್ಥಿತ್ವಕ್ಕೆ ಪದಾಧಿಕಾರಿಗಳ ಆಯ್ಕೆ

0
161
loading...

ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮುಖ್ಯ

ಕನ್ನಡಮ್ಮ ಸುದ್ದಿ-ಕೊಪ್ಪಳ: ಸರ್ಕಾರ ಹಾಗೂ ಜನ ಸಮುದಾಯದ ಕೊಂಡಿಯಾಗಿ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಅವುಗಳ ಯಶಸ್ವಿಗೆ ಸರ್ಕಾರೇತರ ಸಂಸ್ಥೆಗಳು ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದು ವೇಡ್ಸ್ ಸಂಸ್ಥೆಯ ಮುಖ್ಯಸ್ಥರಾದ ವ್ಹಿ.ಚಕ್ರಪಾಣಿ ಹೇಳಿದರು.
ಕೊಪ್ಪಳ ಜಿಲ್ಲಾ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೋಟ ರಚಿಸುವ ಸಂಬಂಧವಾಗಿ ನಗದ ಮಹಿಳೆ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯಲ್ಲಿ ಜರುಗಿದ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವುರು ಸರ್ಕಾರ ಎನ್.ಜಿ.ಓ.ಗಳ ಕಾರ್ಯಧ್ಯಕ್ಷತೆ ಹಾಗೂ ಅವುಗಳ ಉದ್ದೇಶಗಳನ್ನು ನೋಡಿ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ಒದಗಿಸಬೇಕು. ಇಂದಿನ ದಿನಗಳಲ್ಲಿ ಈ ಮೊದಲು ನೀಡುತ್ತಿದ್ದ ಅವಕಾಶಗಳು ದೊರುಕುತ್ತಿಲ್ಲವೆಂದರು.
ಜಿಲ್ಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳಿದ್ದು, ಅವುಗಳಲ್ಲಿ ಕೆಲವುಗಳಿಗೆ ಮಾತ್ರ ಕಾರ್ಯಕ್ರಮಗಳು ದೊರುಕುತ್ತಿದ್ದು, ನಿಸ್ವಾರ್ಥ ಸೇವಾ ಮನೋಭಾವದಿಂದ, ಜನಪರ ಕಾಳಜಿಯಿಂದ ಸಾಮಾಜಿಕ ಕಾರ್ಯಚಟುವಟಿಕೆ ಮಾಡುವ ಸಂಸ್ಥೆಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ಸರ್ಕಾರ ಮತ್ತು ಜನರ ಮಧ್ಯೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು, ಮತ್ತು ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಎಲ್ಲ ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸಮಾಡಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 30 ಕ್ಕೂ ಹೆಚ್ಚು ಎನ್.ಜಿ.ಓ.ಗಳ ಪ್ರತಿನಿಧಿಗಳು ಜಿಲ್ಲೆಯಲ್ಲಿ ಫೇವಾರ್ಡ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಒಕ್ಕೋಟ ರಚಿಸುವುದು ಹಾಗೂ ಆ ಮೂಲಕ ಒಗ್ಗಟ್ಟಿನಿಂದ ಸಂಘಟನೆಯಾಗಿ ಕೆಲಸ ಮಾಡಬೆಕೆಂದು ಅಭಿಪ್ರಾಯ ಪಡಲಾಯಿತು. ಅದರಂತೆ ನೂತನವಾಗಿ ವಿಕಾಸ ಕೊಪ್ಪಳ ಜಿಲ್ಲಾ ಎನ್.ಜಿ.ಓ. ಒಕ್ಕೋಟವನ್ನು ರಚಿಸಲಾಯಿತು.
ವಿಕಾಸ ಕೊಪ್ಪಳ ಜಿಲ್ಲಾ ಎನ್.ಜಿ.ಓ. ಒಕ್ಕೋಟದ ನೂತನ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಮೌಲಾಹುಸೇನ ಬುಲ್ಡಿಯಾರ್, ಉಪಾಧ್ಯಕ್ಷರಾಗಿ ಭಾರತಿ ಆಗಳೂರ, ಮಂಜುಳಾ ವಿಶ್ವನಾಥ್, ಪ್ರೇಮಾ ಕುಷ್ಟಗಿ, ಶರಣಮ್ಮ ಚರಾರಿ. ಪ್ರಧಾನ ಕಾರ್ಯದರ್ಶಿಗಳಾಗಿ ವ್ಹಿ.ಚಕ್ರಪಾಣಿ, ಸಹಕಾರ್ಯದರ್ಶಿ ನವಲಿ ಸ್ವಾಮಿ, ಖಜಾಂಚಿ ಶಿವಯೋಗಿ ಬಳ್ಳೋಳ್ಳಿ ಇವರನ್ನು. ಹಾಗೂ ಉಳಿದವರನ್ನು ಒಕ್ಕೋಟದ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಾದ ರಾಘವೇಂದ್ರ ಸುಬೇದಾರ್, ಪಿ.ಹೆಚ್ಚ.ನೂರಭಾಷ್, ಆನಂದ ಹಳ್ಳಿಗುಡಿ, ಎಂ.ಮಂಜುನಾಥ, ದೇವಪ್ಪ ಕರಡಿ, ಎಂ.ಚಂದ್ರಪ್ಪ, ಸುಜಾತ್ ಗೊರ್ಲೆಕೊಪ್ಪ, ಆನಂದ ಹಟ್ಟಿ, ವೀರಣ್ಣ ಕುರಿ, ಶಿದ್ದಲಿಂಗಯ್ಯ ಅಳವಂಡಿ, ಗಿರಿಜಾ, ಭುವನೇಶ್ವರಿ , ಮರಿಸ್ವಾಮಿ, ನಾಗರತ್ನ, ಮಂಜುಳಾ ಇತರರು ಭಾಗವಹಿಸಿದ್ದರು.

loading...