ಎರಡು ತಿಂಗಳಿನಿಂದ ಸ್ಥಗಿತಗೊಂಡ ಬನ್ನಿಕೊಪ್ಪ ಗ್ರಾಮದ ಶುದ್ಧ ನೀರಿನ ಘಟಕ

0
66
loading...

ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ | ಜವಾಬ್ದಾರಿ ಮರೆತು ಅಧಿಕಾರಿಗಳು
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶುದ್ದ ನೀರಿನ ಘಟಕವು ಸ್ಥಗಿತಗೊಂಡು ಎರಡು ತಿಂಗಳು ಕಳೆದರೂ ಸಹ ದುರಸ್ಥಿಗೊಂಡಿಲ್ಲವೆಂದು ಗ್ರಾಮದ ಭಾರತೀಯ ಮಾನವ ಹಕ್ಕುಗಳ ಸಂಘಟನೆಯ ಸದಸ್ಯರಾದ ಬಸವರಾಜ ಪುರದ ಸೇರಿದಂತೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ಶುದ್ದ ಕುಡಿಯುವ ನೀರಿನ ಹಕ್ಕು ಪ್ರತಿಯೊಬ್ಬ ಶ್ರೀಸಾಮಾನ್ಯನ ಕಾರ್ಯವಾಗಿದೆ ಹಾಗಾಗಿ ಹತ್ತು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಪ್ರತಿ ಗ್ರಾಮದಲ್ಲೂ ಒಂದು ಕುಡಿಯುವ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಆದರೆ ನಿರ್ವಹಣೆ ಕೊರತೆಯಿಂದಾಗಿ ಬನ್ನಿಕೊಪ್ಪ ಗ್ರಾಮವು ಸೇರಿದಂತೆ ಶಿರಹಟ್ಟಿ ತಾಲೂಕಿನ ಬಹುತೇಕ ನೀರಿನ ಘಟಕಗಳು ಸ್ಥಾಪಿತಗೊಂಡ ಕೆಲವೇದಿನಗಳಲ್ಲಿ ಸ್ಥಗಿತಗೊಂಡಿರುವುದು ಬಹಳ ವಿಷಾದದ ಸಂಗತಿಯಾಗಿದೆ.
ಇನ್ನು ಹಲವುಕಡೆ ಯಂತ್ರಗಳು ಕೆಟ್ಟುನಿಂತು ತುಕ್ಕು ಹಿಡಿಯುತ್ತಿದ್ದರೂ ಸಹ ನಿರ್ವಹಣಾ ಜವಾಬ್ದಾರಿ ಹೊತ್ತ ಕಂಪನಿಗಳಾಗಲಿ ಅಥವಾ ಗ್ರಾಮ ಪಂಚಾಯತಿಗಳಾಗಲಿ ತಮ್ಮ ಜವಾಬ್ದಾರಿ ಮರೆತು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಶುದ್ದ ನೀರಿನ ಘಟಕವು ಸ್ಥಗಿತಗೊಂಡ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಿಡಿಒ ಸುರೇಶ ಕಲವಡ್ಡರ ಎರಡು ತಿಂಗಳ ಹಿಂದೆ ತಾಪಂ ಇಒಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ನೀರಿನ ಘಟಕವು ಹೈದರಾಬಾದಿನ ಸ್ಮಾರ್ಟ ಇಂಡಿಯಾ ಪ್ರಾವೈಟ್ ಲಿಮಿಟೆಡ್ ಸಂಸ್ಥೆ ಈ ಬಗ್ಗೆ ಅವರನ್ನು ವಿಚಾರಿಸಿದರೆ ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ಇಪ್ಪತ್ತು ಲೀಟರ ನೀರಿಗೆ ಸಾರ್ವಜನಿಕರಿಂದ ಇಲ್ಲಿಯವರೆಗೂ ಎರಡು ರೂಪಾಯಿ ಹಣ ತೆಗೆದುಕೊಳ್ಳುತ್ತಿದ್ದು ಈಗ ಕಂಪನಿಯ ಹಿಂದಿನ ಒಪ್ಪಂದದ ಮೇರೆಗೆ ನೀರಿನ ಬೆಲೆಯನ್ನು ಹೆಚ್ಚಿಸಬೇಕೆಂದರೆ ಗ್ರಾಮ ಪಂಚಾಯತಿ ನಮಗೆ ಸ್ಪಂದಿಸದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂದು ಹಾಗೂ ಈಗ ಕೆಟ್ಟಿರುವ ಯಂತ್ರ ದುರಸ್ಥಿಗಾಗಿ ಎರಡು ಲಕ್ಷಕ್ಕೂ ಅಧಿಕ ಹಣವನ್ನು ಸಂಸ್ಥೆಯು ವ್ಯಯಿಸಬೇಕಾಗಿದೆಂದು ಕನ್ನಡಮ್ಮಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಾರೆ ಅವರಿವರ ಮುಸುಕಿನ ಗುದ್ದಾಟದಲ್ಲಿ ಗ್ರಾಮದ ಜನರು ಶುದ್ದ ಕುಡಿಯುವ ನೀರಿನಗೆ ಕೊಕ್ಕೆ ಬಿದ್ದಿದೆ. ಈಗಲಾದರೂ ಸಹ ಎಚ್ಚೆತ್ತುಕೊಂಡು ಕೆಟ್ಟು ನಿಂತ ಸ್ಥಗಿತಗೊಂಡಿರುವ ಈ ಶುದ್ದ ನೀರಿನ ಘಟಕದ ದುರಸ್ತಿಗೆ ಮುಂದಾಗಬೇಕಿದೆ.
ಬಾಕ್ಸ್:

ಅಧಿಕಾರಿಗಳು ನೀರಿನ ಘಟಕ ಪ್ರಾರಂಭಕ್ಕೆ ಈ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಗ್ರಾಮಸ್ಥರೊಂದಿಗೆ ಹೋರಾಟ ಮಾಡುತ್ತೇನೆ.
-ಬಸವರಾಜ ಪುರದ. ಭಾರತೀಯ ಮಾನವ ಹಕ್ಕುಗಳ ಸಂಘಟನೆ ಸದಸ್ಯ
ಬಾಕ್ಸ್:

ಸಾರ್ವಜನಿಕರಿಗೆ ತೊಂದರೆ ಮಾಡಬೇಕೆನ್ನುವ ಉದ್ದೇಶವೇನಿಲ್ಲ ಸಮಸ್ಯೆ ಸರಿಪಡಿಸಿಕೊಂಡು ನೀರಿನ ಘಟಕವನ್ನು ಪ್ರಾರಂಭಿಸುತ್ತೇವೆ.
-ಶರಣಪ್ಪ. ಸ್ಮಾರ್ಟ್ ಕಂಪನಿಯ ಮೇಲ್ವಿಚಾರಕರು

loading...