ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುವಂತೆ ಪ್ರತಿಭಟನೆ

0
35
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ಅಭಿವೃದ್ದಿ ಹೋರಾಟ ವೇದಿಕೆ ಹಾಗೂ ಕನ್ನಡ ಕ್ರಾಂತಿ ಸೇನೆ ಕಾರ್ಯಕರ್ತರು ಪಟ್ಟಣದ ಬೃಂದಾವನ ಸರ್ಕಲ್‍ನಲ್ಲಿ ಯೋಜನೆ ಜಾರಿಗೆ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲೂಕು ಅಭಿವೃದ್ದಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಮಾತನಾಡಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದು ಮಹದಾಯಿ ಹೋರಾಟ ಎರಡು ವರ್ಷ ಕಳೆದರು ಪ್ರತಿಫಲ ಸಿಗುತ್ತಿಲ್ಲ. ಹೋರಾಟಗಾರರಿಗೆ ಬೆಲೆ ಕೊಡುವಂತ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿಲ್ಲ. ರೈತರ ಬಂಡಾಯಕ್ಕೂ ಮುನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರದಲ್ಲಿ ಯೋಜನೆ ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಮುಧೋಳ ಮಾತನಾಡಿ, ಸಂವಿಧಾನ ಪ್ರಕಾರ ರೈತರಿಗೆ ಸಿಗಬೇಕಾದ ಸೌಲತ್ತುಗಳನ್ನು ಪಡೆದುಕೊಳ್ಳಲು ಎರಡು ವರ್ಷ ಕಳೆದರು ಹೋರಾಟ ಮಾಡಬೇಕಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದರು.
ಕನ್ನಡ ಕ್ರಾಂತಿ ಸೇನೆ ತಾಲೂಕು ಅಧ್ಯಕ್ಷ ನೀಲಪ್ಪ ಚಿಕ್ಕಣ್ಣವರ, ಮುಖಂಡರಾದ ಸುಭಾಷ ಗುಡಿಮನಿ, ಶಿವಾನಂದ ನವಲಗುಂದ, ಮಲ್ಲೇಶ ಬಾರಕೇರ, ಪ್ರಕಾಶ ಪಾಟೀಲ, ಬಿ.ಎಸ್.ಸಸಿಮಠ, ಬುಟ್ಟು ಹೊಸಮನಿ, ವೀರೇಶ ಇನಾಮದರ, ನಾಗರಾಜ ಹೊಸಮನಿ, ಕೊಟೇಪ್ಪ ಕುರಿ, ಸಂಜಯ ಕಲ್ಯಾಣಿ, ವಿನೋದ ತ್ಯಾಮಣ್ಣವರ, ಅಲ್ಲಾಸಾಬ್ ಹೊಸಮನಿ, ಸೇರಿದಂತೆ ಇತರರು ಇದ್ದರು.

loading...