ಕಾರ್, ಬಸ್ ನಡುವೆ ಡಿಕ್ಕಿ: ಬಾಲಕ ಸೇರಿ ಮೂವರ ಸಾವು

0
37
loading...

ಕನ್ನಡಮ್ಮ ಸುದ್ದಿ-ಕುಮಟಾ: ಕಾರ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರು ಮೃತಪಟ್ಟರೆ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಾಲೂಕಿನ ದಿವಗಿ ಸೇತುವೆ ಸಮೀಪದ ಶಿರಸಿ-ಕಾರವಾರ ಕ್ರಾಸ್ ಬಳಿ ಇಂದು ಬೆಳಿಗ್ಗೆ ನಡೆದಿದೆ.ಮಂಗಳೂರಿನ ಸುರತಕಲ್ ನಿವಾಸಿಗಳಾದ ನಂದಿನಿ ಶಶಿಧರ (56) ಸ್ಥಳದಲ್ಲೇ ಮೃತಪಟ್ಟರೆ, ಕಾರ್ ಚಾಲಕ ಪ್ರಸನ್ನ ರಾವ್ ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಹಾಗೂ 3 ವರ್ಷದ ಪುಠಾಣಿ ಬಾಲಕ ಶಾಶ್ವತ್ ಸಚಿನಕುಮಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಚೀನಕುಮಾರ (38), ಸೌಮ್ಯ ಸಚೀನಕುಮಾರ (34) ಹಾಗೂ ಶಶಾಂಕ ಸಚೀನಕುಮಾರ (8) ಇವರು ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ ಚಾಲಕ ಪ್ರಸನ್ನ ರಾವ್ ಒರ್ವ ಬಿಟ್ಟರೆ ಉಳಿದವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ. ಸಚೀನಕುಮಾರ ಅವರು ತನ್ನ ತಂದೆಯವರ ಶ್ರಾಧ್ಧ ಕಾರ್ಯಕ್ಕೆ ತಾಯಿ, ಪತ್ನಿ ಹಾಗೂ ಎರಡು ಗಂಡು ಮಕ್ಕಳೊಂದಿಗೆ ಮಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಗೋಕರ್ಣದಿಂದ ಕುಮಟಾ ಕಡೆ ಬರುತ್ತಿದ್ದ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯರ ಸಹಕಾರದಿಂದ 108 ವಾಹನದ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಳ ಆಸ್ಪತ್ರಗೆ ಸಾಗಿಸಲಾಗದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‍ಐ ಶಶಿಕುಮಾರ ಮುಂದಿನ ತನಿಖೆ ಕೈಗೊಂಡಿದ್ದಾರೆ.

loading...