ಕ್ರೀಡೆಯಿಂದ ಮಕ್ಕಳ ಆರೋಗ್ಯ ವೃದ್ಧಿ: ಮೌನೇಶ

0
44
loading...

ಕನ್ನಡಮ್ಮ ಸುದ್ದಿ-ಶಿಗ್ಗಾವಿ:- ಕ್ರೀಡೆ ಮಕ್ಕಳ ಆರೋಗ್ಯ, ಆತ್ಮ ವಿಶ್ವಾಸ, ಚಲ, ಮೂಡಿಸುವದಲ್ಲದೆ ಚಟುವಟಿಕೆ ಹೆಚ್ಚಿಸುತ್ತದೆ. ಮಕ್ಕಳು ಶಾಲೆಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಹೆಚ್ಚು ಹೆಚ್ಚು ಬಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಗ್ರಾಪಂ ಸದಸ್ಯ ಮೌನೇಶ ವಾಲ್ಮೀಕಿ ಹೇಳಿದರು.ತಾಲೂಕಿನ ಹಿರೆಮಲ್ಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ 2017-18 ನೇ ಸಾಲಿನ ಬನ್ನೂರ ಕ್ಲಸ್ಟರ ಮಟ್ಟದ ಕ್ರೀಡಾಕೂಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಯ ಸಮಗ್ರ ಅಭಿವೃದ್ದಿಗೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಗುರುಗಳಾದ ಪ್ರಶಾಂತ ಶಿರೂರ ಪ್ರಾಸ್ಥಾವಿಕವಾಗಿ ಮಾತನಾಡಿದರು. ತಾಪಂ ಸದಸ್ಯ ಯಲ್ಲಪ್ಪ ನರಗುಂದ, ಗ್ರಾಪಂ ಅಧ್ಯಕ್ಷೆ ನಂದಾ ನೀಲಮ್ಮನವರ, ಎಸ್.ಡಿ.ಎಮ್.ಸಿ.ಅಧ್ಯಕ್ಷ ಬಸಪ್ಪ ಕಡಕೋಳ, ಚನ್ನಬಸಗೌಡ ಹುತ್ತನಗೌಡ್ರ, ಗದಿಗೆಪ್ಪ ಮುಗದೂರ, ಜಗನ್ನಾಥಯ್ಯ ಹಿರೇಮಠ ವೇದಿಕೆಯಲ್ಲಿದ್ದರು.
ಗ್ರಾಪಂ ಸದಸಯರಾಧ ಶಿಖಂದರಸಾಬ್ ನದಾಫ, ನಾಗನಗೌಡ ಪಾಟೀಲ, ಸದಾನಂದ ಭಜಂತ್ರಿ, ಮಹಬೂಬಅಲಿ ಗೊಂದಿ, ನೀಲಪ್ಪ ಕೆಳಗೇರಿ, ಗ್ರಾಮದ ರುದ್ರಗೌಡ ಹುತ್ತನಗೌಡ್ರ, ಶರೀಪಸಾಬ್ ಮುಂದಿನಮನಿ, ಇರಪನಗೌಡ ಹುತ್ತನಗೌಡ್ರ, ಶಿವಬಸಪ್ಪ ಬೂದನೂರ, ಹಜರೆಸಾಬ ನದಾಫ, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

loading...