ಗರ್ಲಗುಂಜಿ ಅರಣ್ಯ ರಕ್ಷಕ ವರ್ಗಾವಣೆ ಖಂಡಿಸಿ ಮಹಿಳೆಯರು ಪ್ರತಿಭಟನೆ

0
58
loading...

ಕನ್ನಡಮ್ಮ ಸುದ್ದಿ ಬೆಳಗಾವಿ: ಖಾನಾಪುರ ತಾಲೂಕಿನ ಗರ್ಲಗುಂಜಿ ಬಿಟ್‍ನ ಅರಣ್ಯ ರಕ್ಷಕ ಲಕ್ಷ್ಮಣ ವಾಳದ ಎಂಬುವವರ ವರ್ಗಾವಣೆ ಖಂಡಿಸಿ ಗರ್ಲಗುಂಜಿ ಗ್ರಾಮದ ಸಾರ್ವಜನಿಕರು ಆರ್‍ಎಫ್‍ಒ ಶ್ರೀನಾಥ ಕಡೋಲ್ಕರ್ ಮೂಲಕ ಸಿಸಿಎಫ್‍ಗೆ ಮನವಿ ಸಲ್ಲಿಸಿದರು.
ಬುಧವಾರ ಅರಣ್ಯ ಇಲಾಖೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಅರಣ್ಯ ರಕ್ಷಕರು ನಮ್ಮ ವಲಯದಲ್ಲಿ ಅರಣ್ಯ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ. ಹಾಗಾಗಿ ಅವರ ವರ್ಗಾವಣೆಯನ್ನು ವಜಾಗೊಳಿಸಿ ಪುನಃ ಯಾವ ಬಿಟ್‍ನಲ್ಲಿ ಇದ್ದರೊ ಅವರನ್ನು ಮುಂದುವರೆಸಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟವನ್ನು ಮಾಡುವುದಾಗಿ ಗ್ರಾಮದ ಮಹಿಳೆಯರು ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ವರ್ಗಾವಣೆ ಪ್ರಕ್ರಿಯೆ ಇಲಾಖೆಯಲ್ಲಿ ಇರುವುದು ಸಾಮಾನ್ಯ ಯಾವುದೇ ಹುದ್ದೆಯಲ್ಲಿ ಇದ್ದರು ಅವರನ್ನು ಒಂದು ವಲಯದಿಂದ ಇನೊಂದು ವಲಯಕ್ಕೆ ವರ್ಗಾಣೆ ಮಾಡುವುದು ಇಲಾಖೆಯ ಕಾಯ್ದೆ. ಅದರ ವಿರುದ್ಧವಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿರುವುದು ಸೂಕ್ತವಾದುದ್ದಲ್ಲ. ಒಬ್ಬ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸೇವೆ ಮಾಡುವುದು ಇಲಾಖೆಯ ಕರ್ತವ್ಯವಾಗಿದೆ. ಹಾಗಾಗಿ ಆ ಅಧಿಕಾರಿ ಪರ ಸಾರ್ವಜನಿಕರು ನಮ್ಮ ಕ್ಷೇತ್ರಕ್ಕೆ ಇರಲಿ ಎಂಬುದು ಗ್ರಾಮಸ್ಥರ ನಡೆ ಸಮ್ಮತವಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಇದ್ದರು.

loading...