ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸಿ

0
144
loading...

ರಾಮದುರ್ಗ: ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಅತ್ಯಂತ ಹಿಂದುಳಿದಿದ್ದು, ಕೇವಲ ಅಂಕಿ ಸಂಖ್ಯೆ ಕೊಡುವದನ್ನು ಬಿಟ್ಟು ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೆರಣೆ ನೀಡಬೇಕೆಂದು ಜಿ. ಪಂ ಸಿ.ಎಸ್ ಆರ್.ರಾಮಚಂದ್ರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.
ಪಟ್ಟಣದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಸಹಯೋಗದಲ್ಲಿ ನಡೆದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಮದುರ್ಗ ತಾಲೂಕಿನಲ್ಲಿ 1153 ಗರ್ಭಿಣಿ, ಬಾಣಂತಿ ಸ್ತ್ರೀಯರಿಗೆ ಮತ್ತು ಬಹಳಷ್ಟು ಆಶಾ ಕಾರ್ಯಕರ್ತರಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ನಿವೇ ಮಾಡಿಕೊಂಡಿಲ್ಲವೆಂದರೆ ಗ್ರಾಮಸ್ಥರಿಗೆ ಹೇಗೆ ಹೇಳಿತ್ತೀರಿ ಎಂದು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಜಾಗದ ಕೊರತೆ, ನೀರಿನ ತೊಂದರೆ, ಮನೆನೆ ಇಲ್ಲಾ ಎಂಬ ಸಬೂಬ ಕೇಳುವದನ್ನು ಬಿಟ್ಟು ಸರಕಾರದಿಂದ ಶೌಚಾಲಯ ನೀರ್ಮಾಣಕ್ಕಾಗಿ ಸಾಮಾನ್ಯ ಜನರಿಗೆ ರೂ.12000 ಮತ್ತು ಎಸ್.ಸಿ. ಎಸ್.ಟಿ ಜನರಿಗೆ ರೂ.15000 ಸಹಾಯಧನ ನೀಡುತ್ತಿದ್ದು, ಅದರ ಬಗ್ಗೆ ತಿಳುವಳಿಕೆ ಮೂಡಿಸಬೇಕೆಂದು ಅವರು ಸೂಚನೆ ನೀಡಿದರು.
ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳ ಮರ್ಯಾದೆ ಕಾಪಾಡಲು ಪ್ರತಿಯೊಬ್ಬರು ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಜಿಲ್ಲೆಯನ್ನು ಬಯಲು ಶೌಚಮುಕ್ತವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದ ಅವರು ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಸ್ವಚ್ಛ ಭಾರತ ಅಭಿಯಾನದ ಪ್ರಮಾಣ ವಚನ ಬೋಧಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಎಸ್.ಬಿ.ಮುಳ್ಳೊಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಈ ಸಾಲಿನಲ್ಲಿ 3 ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಎಲ್ಲ ಕಾರ್ಯಕರ್ತೆಯರು ಶ್ರಮಪಡಬೇಕು, ಪ್ರತಿ ಗರ್ಭಿಣಿ ಸ್ತ್ರೀಯರ ಮನೆಗೆ ಭೇಟಿ ನೀಡಿ ಮನವರಿಕೆ ಮಾಡಿಕೊಡಬೇಕು. ಸರಕಾರದ ಈ ಯೋಜನೆ ಯಶಸ್ವಿಯಾಗಬೇಕಾದರೆ ತಮ್ಮ ಈಗಿನ ಕಾರ್ಯವೈಖರಿ ಬದಲಾಗಬೇಕು. ಪ್ರತಿಯೊಂದು ಮನೆಗೆ ಭೇಟಿ ಒಂದು ತಿಂಗಳಲ್ಲಿ ಮಾಡಿದ ಸಾಧನೆ ಬಗ್ಗೆ ವರದಿ ನೀಡಬೇಕೆಂದು ಹೇಳಿದರು.
ಜಿ.ಪಂ. ಸದಸ್ಯರಾದ ರಮೇಶ ದೇಶಪಾಂಡೆ ನಾವು ಮೊದಲು ಸ್ವಚ್ಛತೆಗೆ ಆದ್ಯತೆ ಕೊಡಬೇಕು, ಸ್ತ್ರೀ ಶಕ್ತಿ ಅಸ್ತ್ರ ಉಪಯೋಗ ಮಾಡಿ ಮನಸ್ಸಿನ ನೈರ್ಮಲ್ಯತೆ ಹೋಗಲಾಡಿಸಿ ಜನರನ್ನು ಪ್ರೇರೆಪಿಸುವಂತಹ ಕಾರ್ಯವಾಗಬೇಕು, ಪರಿಸರದ ಜೊತೆ ತಮ್ಮ ಮರ್ಯಾದೆಯನ್ನು ಸಹ ಉಳಿಸಿಕೊಳ್ಳಬೇಕೆಂದು ಹೇಳಿದರು.
ಜಿ.ಪಂ.ಸದಸ್ಯ ರೇವಣಪ್ಪ ಸೋಮಗೊಂಡ, ಬಿ.ಎ.ಓ ಆರ್.ಟಿ.ಬಳಿಗಾರ, ಸಿ.ಡಿ.ಪಿ.ಓ ಖಾದರಬಿ ಲಕ್ಮೇಶ್ವರ, ತಾ.ಪಂ.ಇಒ ಎಸ್.ಕೆ.ಪಾಟೀಲ ಉಪಸ್ಥಿತರಿದ್ದರು.

loading...