ಗ್ರಾಮ ಸಭಾ ಸಂಘದ ಪ್ರತಿನಿಧಿಗಳಿಗೆ ನೀರು, ನೈರ್ಮಲ್ಯ,ಆರೋಗ್ಯ ತರಬೇತಿ

0
39
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ:ಪರಿಸರದ ಹಿತ, ನೈರ್ಮಲ್ಯ ಹಾಗೂ ಆರೋಗ್ಯದ ಅರಿವು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪ್ರತಿ ಮನೆಗೊಂದು ಶೌಚಾಲಯ ನಿರ್ಮಾಣ ಅತ್ಯವಶ್ಯ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ಸಿಸ್ಟರ ಮೇರಿ ನಿರ್ಮಲಾ ಹೇಳಿದರು.ಇತ್ತಿಚೆಗೆ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸ್ಥಳಿಯ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಹುಲ್ಲತ್ತಿ ಗ್ರಾಮ ಪಂಚಾಯಿತಿ ಇವರ ಆಶ್ರಯದಲ್ಲಿ ನೀರು,ನೈರ್ಮಲ್ಯ,ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ ಸಂಘಗಳ ಮುಖಾಂತರ ಆರ್ಥಿಕ ಅಭಿವೃಧ್ಧಿ ಹೊಂದುತ್ತಿದ್ದಾರೆ. ಗ್ರಾಮ ಸಭಾ ಸಂಘದ ಪ್ರತಿನಿಧಿಗಳು ಸದಸ್ಯರು ಗ್ರಾಮ ಸಭೆಗಳಲ್ಲಿ ವಾರ್ಡ ಸಭೆಗಳಲ್ಲಿ ಭಾಗವಹಿಸಿ ಸರ್ಕಾರಿ ಸೌಲಭ್ಯಗಳ ಮಾಹಿತಿ ಪಡೆದು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು, ಪ್ರತಿ ಕುಟುಂಬ ಶೌಚಾಲಯ ನಿರ್ಮಿಸಿಕೋಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ಗೊಲ್ಲರ ಮಾತನಾಡಿ, ಗ್ರಾಮ ಪಂಚಾಯತಿಗಳು ಶೌಚಾಲಯ ನಿರ್ಮಿಸಿಕೋಳ್ಳಲು ಜಾಗ್ರತಿ ಮೂಡಿಸುತ್ತಿದ್ದು, ಪ್ರತಿ ಕುಟುಂಬದವರು ತಮ್ಮ ಮನೆಯ ಸುತ್ತಲೂ ಸ್ವಚ್ಚತೆಗೆ ಮಹತ್ವ ನೀಡಿ ಪರಿಸರ ರಕ್ಷಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ. ಪುಟ್ಟಪ್ಪ. ಜ್ಯೋತಿಬಾನವರ ವಹಿಸಿದ್ದರು, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹೆಮಂತ ಕುಮಾರ ದೇಟಿನ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಕುರಿತು ತರಬೇತಿ ನೀಡಿದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಮ್.ಜಿ.ಹೀರೆಮಠ ಪಂಚಾಯಿತಿ ವ್ಯವಸ್ಥೆ ಕುರಿತು ತಿಳಿಸಿದರು. ರೋಶನಿ ಸಂಸ್ಥೆಯ ಸಂಯೋಜಕ ಕೆ.ಎಫ್ ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ಸದಸ್ಯರಾದ ವಿರಯ್ಯ ಹಿರೇಮಠ, ಮಾದೇವಪ್ಪ ತಿಳವಳ್ಳಿ, ಸರತಾಜ್ ಬಾವಾನವರ, ಬಸವಣ್ಣೆಪ್ಪ ಬಸಾಪುರ ಹಾಗೂ ಗ್ರಾಮದ ರವಿ ಹೋಸಮನಿ, ಮಾರ್ಕಂಡೇಶ್ವರ ಪವಾರ, ಗಣೇಶ ಇದ್ದರು. ಯಶೋದಾ ಸೋಮಸಾಗರ ಪ್ರಾರ್ಥಿಸಿದರು, ಶಾರದಾ ತಂಬುಳಿ ಸ್ವಾಗತಿಸಿದರು, ಮಂಗಳಾ ಹಂಚಿನಮನಿ ನಿರೂಪಿಸಿದರು. ಗೌರಮ್ಮ ವಾಯ್.ಕೆ ವಂದಿಸಿದರು.

loading...