ಜಿಲ್ಲಾಮಂತ್ರಿ ಹೇಳಿದ ಮಾತು ಮರೆತ ಶಾಸಕ ಸೇಠ್ – ಅನಧಿಕೃತ ಬೇಸ್‍ಮೆಂಟ್‍ಗೆ ಬೆಂಬಲ – ಪಾಲಿಕೆ ಅಧಿಕಾರಿಗಳಿಗೆ ಧಮ್ಕಿ

0
440
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:7 ನಗರದಲ್ಲಿ ಉದ್ಬವಾಗುತ್ತಿರುವ ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆಯಿಂದ ಮುಕ್ತಿಗೊಳಿಸಲು ಪಾಲಿಕೆ ಆಯುಕ್ತ ಶಶಿಧರ ಕುರೇರ್ ನೇತೃತ್ವದ ತಂಡ ಶುಕ್ರವಾರ ಅನಧಿಕೃತ ಸುಮಾರು 287 ಕಟ್ಟಡಗಳಿಗೆ ನೋಟಿಸ್ ನೀಡಿ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವುಗಳನ್ನು ತೆರವುಗೊಳಿಸದಂತೆ ಪಾಲಿಕೆಯ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ.
ಮಹಾನಗರ ಪಾಲಿಕೆಯಿಂದ ಕೇಲವು ಕಡೆಗಳಲ್ಲಿ ರಸ್ತೆ ಅಗಲೀಕರಣಗೊಳ್ಳಿಸಿದ್ದರೂ ಸಮರ್ಪಕವಾಗಿ ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆಗೆ ನಾಂದಿ ಹಾಡಲು ಕಳೆದ ಎರಡು ತಿಂಗಳಿನಿಂದ ಪಾಲಿಕೆ ಆಯುಕ್ತರು, ನಗರ ಪೊಲೀಸ್ ಇಲಾಖೆ ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಸಭೆ ನಡೆಸಿ ಅನಧಿಕೃತವಾಗಿ ಬೇಸಮೆಂಟ್ ನಿರ್ಮಿಸಿಕೊಂಡ ಕೆಲ ಖಾಸಗಿ ಶಾಲಾ ಕಾಲೇಜು ಹಾಗೂ ಕಟ್ಟದ ಮಾಲೀಕರಿಗೆ ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು.
ಅದರಂತೆ ಪಾಲಿಕೆ ಆಯುಕ್ತರ ನೇತೃತ್ವದ ತಂಡ ಶುಕ್ರವಾರ ಸಮಾದೇವಿ ಮಂದಿರದ ರಸ್ತೆಯಿಂದ ಅನಧಿಕೃತ ಬೇಸ್‍ಮೆಂಟ್ ತೆರವುಗೊಳಿಸುತ್ತ, ಖಡೇಬಜಾರನಲ್ಲಿ ಕಾರ್ಯಾಚರಣೆ ನಡೆಸುವ ವೇಳೆ ಉತ್ತರ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ಪಾಲಿಕೆಯ ಅಧಿಕಾರಿಗಳ ಮೇಲೆ ಹರಿಹಾಯ್ದು ತೆರವುಗೊಳಿಸದಂತೆ ಧಮ್ಕಿ ಹಾಕಿದ್ದಾರೆ.
ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಪಾಲಿಕೆಯಲ್ಲಿ ಅಧಿಕಾರಿಗಳೊಂದಿಗೆ ಕರೆಯಲಾ ಮೊದಲ ಸಭೆಯಲ್ಲಿ ನಗರದ ಅಭಿವೃದ್ಧಿ ವಿಷಯ ಬಂದಾಗ ಯಾವ ಜನಪ್ರತಿನಿಧಿಗಳು ಅಡ್ಡಗಾಲು ಹಾಕಬಾರದೆಂದು ಸೂಚನೆ ನೀಡಿದರೂ ಜಿಲ್ಲಾ ಮಂತ್ರಿಯ ಮಾತಿಗೆ ಕವಡೆಗಾಸಿನ ಕಿಮ್ಮತ್ತು ನೀಡದ ಉತ್ತರ ಕ್ಷೇತ್ರದ ಶಾಸಕ ತಾವೇ ಜಿಲ್ಲಾಮಂತ್ರಿಯಂತೆ ವರ್ತಿಸಿ ಅಧಿಕಾರಿಗಳ ಮೇಲೆ ದರ್ಪ ತೋರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೇಲ್ನೊಟಕ್ಕೆ ಶಾಸಕ ಫಿರೋಜ್ ಸೇಠ್ ಕೇವಲ ತಮ್ಮ ಕ್ಷೇತ್ರವನ್ನು ಮಾತ್ರ ಅಭಿವೃದ್ಧಿಯಾಗಲಿ ಎನ್ನುವ ಮಂತ್ರ ಪಠಿಸುತ್ತಿರುವ ಸೇಠ್ ಪಾಲಿಕೆಯ ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡದೆ ಜಿಲ್ಲಾಮಂತ್ರಿ ಮೊದಲೇ ಹೇಳಿದ್ದಾರೆ. ಅಭಿವೃದ್ಧಿ ಪಡೆಸುವಲ್ಲಿ ಯಾವ ಶಾಸಕ, ನಗರ ಸೇವಕರ ಮಾತು ಕೇಳದೆ ಸಮಗ್ರ ನಗರ ಅಭಿವೃದ್ಧಿ ಪಡೆಸಬೇಕೆಂದು ಆದರೆ ಶಾಸಕ ಸೇಠ್ ಜಿಲ್ಲಾ ಮಂತ್ರಿಗಳ ಗಮನಕ್ಕೆ ತರದೆ ಬೇಸ್‍ಮೆಂಟ್ ತೆರವುಕಾರ್ಯಚರಣೆ ಮಾಡುತ್ತಿರುವುದು ಏಕೆ. ನಿಮ್ಮ ಕಾಲ ಸಮೀಪ ಬಂದಿದೆ. ಎಂದು ಭಹಿರಂಗವಾಗಿ ಅಧಿಕಾರಿಗಳ ಮೇಲೆ ದರ್ಪಹಾಕುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲಿಕೆ ಅಧಿಕಾರಿಗಳಿಗೆ ಬೇಸಮೆಂಟ್ ತೆರವುಮಾಡಲು ಅಧಿಕಾರ ಕೊಟ್ಟವರು ಯಾರು? ಥುಮೇ ಜಾನೆಕಾ ಟೈಂ ಆಯಾ ಹೈ ( ನಿಮಗೆ ಹೋಗುವ ಸಮಯ ಬಂದಿದೆ) ಯಾರು ಅಂಗಡಿಯ ಬಾಗಿಲು ತೆರಬೇಡಿ ಬಂದ ಕರೋ ಸಬ್. ನಾಟಕ್ ಕರ ರಹೇಹೈ ಕಾರಪೊರೇಷನ್ ವಾಲೇ

ಫಿರೋಜ್ ಸೇಠ್
ಉತ್ತರ ಕ್ಷೇತ್ರದ ಶಾಸಕ

loading...