ಜು.21 ಕ್ರೀಡಾ ಚಟುವಟಿಕೆಗಳ ಸಮಾರಂಭ

0
22
loading...

ಹಾರೂಗೇರಿ: ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಚಂದ್ರಮಶ್ರೀ ಟ್ರಸ್ಟ (ರಿ) ವಿಶ್ವಸ್ಥ ಸಂಸ್ಥೆಯ ಜ್ಞಾನ ಗಂಗೋತ್ರಿ ಬಾಲಕಿಯರ ಪ್ರಾಥಮಿಕ ಹಾಗೂ ಶ್ರೀ ಪದ್ಮಾವತಿ ಹೆಣ್ಣು ಮಕ್ಕಳ ಪ್ರೌಡಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸನ್ 2017-18ನೇ ಸಾಲಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಜು.21 ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ.
ಸಮಾರಂಭವನ್ನು ಚಿಕ್ಕೋಡಿಯ ಮಾಜಿ ಶಾಸಕ ಮನೋಹರ ಕಟ್ಟಿಮನಿ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ ತದ್ದೇವಾಡಿ ಆಗಮಿಸುವರು, ಅಧ್ಯಕ್ಷ್ಯತೆಯನ್ನು ಸಂಸ್ಥೆ ಚೇರಮನ್ ಎಸ್.ಎ ದಟವಾಡ ವಹಿಸಿಕೊಳ್ಳುವರು ಎಂದು ಮುಖ್ಯೋಪಾಧ್ಯಾಯ ಎಮ್.ಎಸ್ ಬಳವಾಡ ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

loading...