ಟ್ಯಾಂಕರ್ ನೀರಿಗೆ ಹೆಚ್ಚುತ್ತಿದೆ ಬೇಡಿಕೆ

0
31
loading...

ಏಳು ತಾಲೂಕುಗಳ 43 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ
| ಲಗಮಣ್ಣಾ ಸಣ್ಣಲಚ್ಚಪ್ಪಗೋಳ
ಬೆಳಗಾವಿ: ಮುಂಗಾರು ಮಳೆ ಕೈಕೊಟ್ಟದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಆರಂಭವಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಸರಿಯಾದ ಮಳೆಯಾಗದೆ ಟ್ಯಾಂಕರ್ ನೀರು ಪೂರೈಸುವಂತೆ ಹಲವು ಗ್ರಾಮಗಳ ಬೇಡಿಕೆಯಾಗಿದೆ.
ಜಿಲ್ಲೆಯ ಖಾನಾಪುರ, ಬೈಲಹೊಂಗಲ, ಕಿತ್ತೂರ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ ಮತ್ತು ಅಥಣಿ ತಾಲೂಕಿನ 43 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಜಿಲ್ಲಾಡಳಿತ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸರಿಯಾದ ಮಳೆಯಾಗದೆ ಹಲವು ಗ್ರಾಮಗಳ ಜನರು ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಮಳೆ ಕೊರತೆ: ವಾಡಿಕೆಯಂತೆ 154 ಮೀ.ಮೀ ಮಳೆಯಾಗಬೇಕಾಗಿತ್ತು. ಆದರೆ ಮಳೆಗಾಲ ಆರಂಭವಾಗಿ ಎರಡು ತಿಂಗಳ ಕಳೆಯುತ್ತಿದ್ದರೂ ಇವರೆಗೆ 115 ಮೀ.ಮೀ ಮಾತ್ರ ಮಳೆಯಾಗಿದೆ. ಜಿಲ್ಲೆಯೂ ವಾಡಿಕೆಗಿಂತಲೂ 24 ಮೀ.ಮೀ ಮಳೆ ಕೊರತೆಯನ್ನು ಎದುರಿಸುತ್ತಿದೆ.
ಸರಿಯಾದ ವೇಳೆಗೆ ಮಳೆಯಾಗದೆ ರೈತರಿಗೆ ಈ ವರ್ಷವು ಬರಗಾಲ ಸಂಭವಿಸುವ ಆತಂಕ ಎದುರಾಗಿದೆ. ಜನಜಾನುವಾರಗಳಿಗೆ ಮಳೆ ಕೈಕೊಟ್ಟರೆ ಜೀವನ ಸಾಗಿಸುವುಸುವುದು ಕಷ್ಟಕರವಾಗಿ ಪರಿಣಮಿಸುವ ಆತಂಕ ಎದುರಾಗಿದೆ. ಮಳೆ ಬೆಳೆ ಇಲ್ಲದೇ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಗಾಯದ ಮೇಲೆ ಬರೇ ಎಳೆದಂತಾಗಿದೆ.
ಜನಜಾನವಾರು ಸಂಕಷ್ಟದಲ್ಲಿ: ಮುಂಗಾರು ಕೈಕೊಟ್ಟಿದರಿಂದ ಕುಡಿಯುವ ನೀರು ಮೇವಿನ ಸಮಸ್ಯೆಯಿಂದ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆರಾಯ ಕಣ್ಣಾಮುಚ್ಚಾಲೆ ಆಟ ಹೀಗೆ ಮುಂದುವರೆದರೆ ಜಿಲ್ಲೆಯ ಜನಜಾನುವಾರ ಸಂಕಷ್ಟ ಸುಳಿಯಲ್ಲಿ ಸಿಲುಕು ಆತಂಕ ಪಡುವಂತಾಗಿದೆ.
ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಸಿದ್ದಾರೆ. ಗ್ರಾಮೀಣ ಜನತೆ ಮಳೆಗಾಗಿ ಗ್ರಾಮದೇವತೆಯ ಪೂಜೆ ಪುನಸ್ಕಾರಗಳ ಮೋರೆ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ತಾಲೂಕುವಾರು ಟ್ಯಾಂಕರ್ ನೀರು ಪೂರೈಕೆ
ತಾಲೂಕು   ಗ್ರಾಮಗಳ ಸಂಖ್ಯೆ    ಟ್ಯಾಂಕರ್ ಸಂಖ್ಯೆ
ಖಾನಾಪುರ       3                      3
ಬೈಲಹೊಂಗಲ    7                      7
ಕಿತ್ತೂರು           4                     4
ಹುಕ್ಕೇರಿ           4                      2
ಚಿಕ್ಕೋಡಿ          20                    30
ರಾಯಬಾಗ         4                      5
ಅಥಣಿ              1                       1
ಜಿಲ್ಲೆಯಲ್ಲಿ ಒಟ್ಟು     43                   52

ಬಾಕ್ಸ್ 

ಮುಂಗಾರು ಮಳೆ ಕೈಕೊಟ್ಟಿದೆ ಜನಜಾನುವಾರಗಳಿಗೆ ಮೇವು ನೀರಿಲ್ಲ ಕುಡಿಯುವ ನೀರಿಗಾಗಿ ದಿನವಿಡೀ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣ ಮಳೆಯಾಗುವವರೆಗೂ ಜಿಲ್ಲಾಡಳಿತ ಟ್ಯಾಂಕರ್ ನೀರು ಪೂರೈಸಬೇಕು.
ಜಿ.ಎಂ ಪಾಟೀಲ, ಜಾಗನೂರ ನಿವಾಸಿ

loading...