ಡಿಐಜಿ ರೂಪಾಗೆ ಮಾಹಿತಿ ಕೊಟ್ಟ ಮೂವರು ಕೈದಿಗಳು ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರ

0
134
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:16 ನ್ಯಾಷನಲ್ ಮಟ್ಟದಲ್ಲಿ ಸುದ್ದಿಯಾಗಿರುವ ಬೆಂಗಳೂರಿನ ಹರಪ್ಪ ಅಗ್ರಹಾರದಲ್ಲಿ ನಡೆಯುತ್ತಿರುವ ಅವ್ಯವಹಾರದ ಮಾಹಿತಿಯನ್ನು ಡಿಐಜಿ ಡಿ. ರೂಪಾ ಅವರಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿರುವ ಮೂವರು ಕೈದಿಯನ್ನು ರವಿವಾರ ಹಿಂಡಲಗಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದರು.
ಬೆಂಗಳೂರಿನ ಪರಪ್ಪ ಅಗ್ರಹಾರದಲ್ಲಿ ಕೈದಿಗಳಿಗೆ ತಾರತಮ್ಯ‌ ಮಾಡುತ್ತಿದ್ದಾರೆ. ಎಂದು ಡಿಐಜಿ ಡಿ.ರೂಪಾ ಅವರಿಗೆ ಕೆಲ ಕೈದಿಗಳು‌ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಪರಪ್ಪ ಅಗ್ರಹಾರದಲ್ಲಿದ್ದ ಸುಮಾರು 41 ಕ್ಕೂ ಹೆಚ್ಚು ಕೈದಿಗಳನ್ನು ರಾಜ್ಯದಲ್ಲಿರುವ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹದಲ್ಲಿ ರವಾನಿಸಲಾಗಿದೆ. ಅದರಂತೆ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಅನಂತಮೂರ್ತಿ, ಬಾಬು ಹಾಗೂ ಲಾಂಗ ಬಾಬು ಎಂಬ ಮೂವರು ಕೈದಿಗಳನ್ನು ಸ್ಥಳಾಂತರ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಖಾನೆ ಡಿಜಿಪಿ ಸತ್ಯನಾರಾಯಣ ಹಾಗೂ ಡಿಜಿಪಿ ಡಿ. ರೂಪಾ ಅವರ ನಡುವೆ ವಾಗ್ವಾದ ನಡೆಯುತ್ತಿದೆ. ಡಿಜಿಪಿ ಸತ್ಯನಾರಾಯಣ ಮೂರ್ತಿ ಅಣ್ಣಾ ಡಿಎಂಕೆ ಪಕ್ಷದ ಶಶಿಕಲಾ‌ ಅವರಿಂದ ಎರಡು ಕೋಟಿ ರೂ ಹಣ ಪಡೆದು ಐಶಾರಾಮಿ ಜೀವನ‌ ನಡೆಸಲು ಬಿಟ್ಟಿದ್ದಾರೆ. ಅಲ್ಲದೆ ಕಾರಾಗೃಹದಲ್ಲಿರುವ ಹಣವಂತ ಕೈದಿಗಳಿಗೆ ರಾಜಮರ್ಯಾದೆ ನೀಡುತ್ತಾರೆ. ಕೆಲ ಕೈದಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಇಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದರಂತೆ ಈ‌ ಕುರಿತು ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ 41 ಕೈದಿಗಳನ್ನು ಬೇರೆ ಬೇರೆ ಕಾರಾಗೃಹದಲ್ಲಿ ರವಾನಿಸಿದ್ದಾರೆ. ಅದರಂತೆ ಮೂವರು ಕೈದಿಗಳನ್ನು ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ರವಾನಿಸಿದ್ದಾರೆ.

loading...