ದಲಿತ ಸಂಘರ್ಷ ಸಮಿತಿಯಿಂದ ತಹಶೀಲ್ದಾರಗೆ ಮನವಿ

0
52
loading...

ಕನ್ನಡಮ್ಮ ಸುದ್ದಿ-ಕಲಘಟಗಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸರ್ಕಾರಿ ಜಮೀನು ಸಾಗುವಳಿದಾರರಿಗೆ ರಕ್ಷಣೆ ನೀಡಬೇಕೆಂದು ಬಗರಹುಕುಂ ಸಾಗುವಳಿದಾರರ ಪರವಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಮಾದೇವ ಮಾದರ ತಹಶೀಲ್ದಾರ ಜಿ.ಬಿ ಜಕ್ಕನಗೌಡರ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಕಲಘಟಗಿ ತಾಲ್ಲೂಕು ತಬಕದಹೊನ್ನಳ್ಳಿ ಗ್ರಾಮದ ರಿ ಸ ನಂ 444 ರ 194 ಎಕರೆ 20 ಗುಂಟೆ ಸರ್ಕಾರಿ ಖರಾಬ ಜಾಗೆ ಇದ್ದಿದ್ದು ಇದರಲ್ಲಿ ಬಡಪಾಯಿ ಕೂಲಿಕಾರ್ಮಿಕರು ಮತ್ತು ದಲಿತ ಕುಟುಂಬದವರು ತಲಾ ಎರಡು ಎಕರೆ ಭೂಮಿಯನ್ನು ಸಾಗುವಳಿ ಮಾಡುತ್ತ ಬಂದಿರುತ್ತಾರೆ. ಮೇಲಾಧಿಕಾರಿಗಳಿಗೆ ಇಲ್ಲಸಲ್ಲದ ತಪ್ಪು ಮಾಹಿತಿ ತಿಳಿಸಿದ್ದರಿಂದ ತಾಲ್ಲೂಕು ದಂಡಾಧಿಕಾರಿಗಳು ದಲಿತರ ಜಮೀನಿಗೆ ಪೊಲೀಸ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಟ್ರಾಕ್ಟರ ಮೂಲಕ ಬೆಳೆ ನಾಶ ಪಡಿಸಲು ಮುಂದಾಗಿರುವುದನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದರು.ಬಡ ಕುಟುಂಬದ ಮಹಿಳೆಯರು ತಮ್ಮ ಜಮೀನಲ್ಲಿ ಫಸಲನ್ನು ಬೆಳೆಯಲು ಮಾಂಗಲ್ಯಸೂತ್ರವನ್ನು ಒತ್ತೆ ಇಟ್ಟು ಬೀಜ ಗೊಬ್ಬರ ಖರೀದಿಸಿ ತಮ್ಮ ಮಕ್ಕಳ ಉಪಜೀವನಕ್ಕಾಗಿ ತಮ್ಮ ಜಮೀನಿನಲ್ಲಿದ್ದ ಫಸಲನ್ನು ಬೆಳೆದಿರುತ್ತಾರೆ ಬೆಳೆದಂತ ಫಸಲನ್ನು ನಾಶ ಪಡಿಸಿದರೆ ಸಾಗುವಳಿ ಮಾಡಿದ ರೈತರು ವಲಸೆ ಹೋಗುವ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಅನಿವಾರ್ಯವಾಗಿದೆ.
ಈಗಾಗಲೇ ಸಾವಿರಾರು ಎಕರೆ ಆಸ್ತಿ ಹೊಂದಿದ ದೊಡ್ಡ ದೊಡ್ಡ ವ್ಯಕ್ತಿಗಳು ಸುಮಾರು 40 ರಿಂದ 60 ಎಕರೆವರೆಗೂ ಅಕ್ರಮವಾಗಿ ಸಾಗುವಳಿ ಮಾಡುತ್ತ ಬಂದಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಸಂಬಂಧಪಟ್ಟ ಆಸ್ತಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. ಈಗ ಕೇವಲ ಎರಡು ಎಕರೆಯಂತೆ ಉಪಜೀವನಕ್ಕಾಗಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.ಬಸಪ್ಪ ಭಜಂತ್ರಿ, ನಿಂಗಪ್ಪ ಲಮಾಣಿ, ಯಲ್ಲಪ್ಪ ಹುಲಿಕಟ್ಟಿ, ಪರಸಪ್ಪ ಲಮಾಣಿ, ಚನ್ನಪ್ಪ ಮಾದರ, ಸಹದೇವ ಮಾಳಗಿ, ಹೊನ್ನಪ್ಪ ವಾಲ್ಮೀಕಿ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.

loading...