ದಿ.31 ರಂದು ಪುಣ್ಯಸ್ಮರಣೋತ್ಸವ

0
17
loading...

ಕನ್ನಡಮ್ಮ ಸುದ್ದಿ-ಹಾವೇರಿ: ನಗರದ ಜಗದ್ಗುರು ರೇಣುಕ ಮಂದಿರ (ನಡುವಿನಮಠ) ದಲ್ಲಿ ತಪೋನಿಧಿ ಆಚಾರ್ಯತ್ರಯರಾದ ಬಾಳೆಹೊನ್ನೂರು ಮದ್ರಂಭಾಪುರಿ ಲಿಂಗೈಕ್ಯ ಶಿವಾನಂದ ಜಗದ್ಗುರುಗಳ, ವೀರಗಂಗಾಧರ ಜಗದ್ಗುರುಗಳ ಹಾಗೂ ರುದ್ರಮುನಿ ಜಗದ್ಗುರುಗಳವರ ಪುಣ್ಯದಿನಾಚರಣೆಯು ಇದೇ ಜುಲೈ 31 ನೇ ಸೋಮವಾರ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯರ ಹಾಗೂ ಹರಸೂರುಬ ಅಭಿನವರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶಿವದೀಕ್ಷೆ ವ, ಅಯ್ಯಾಚಾರಗಳು ನಡೆಯಲಿವೆ. ಶಿವದೀಕ್ಷೆ ವ, ಅಯ್ಯಾಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ದಿ.27ರೊಳಗಾಗಿ ಮಂದಿರದ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಲು ಪ್ರಕಟಣೆ ಮೂಲಕ ತಿಳಿಸಲಾಗಿದೆ.

loading...