ಧಾನ, ಧರ್ಮ ಮಾಡುವುದು ಶ್ರೇಷ್ಠ ಕಾರ್ಯ

0
48
loading...

ಕೋಳಿಗುಡ್ಡ : ಇದ್ದವರು ಇಲ್ಲದವರಿಗೆ ಧಾನ,ಧರ್ಮ ಮಾಡುವುದು ಶ್ರೇಷ್ಠ ಕಾರ್ಯ. ಅನ್ನದಾಸೋಹ, ಸಮಾಜ ಸೇವೆ ಮಾಡಿದವರು ಶಾಶ್ವತವಾಗಿ ಭೂಮಿ ಮೇಲೆ ನೆಲೆಸಿರುತ್ತಾರೆ ಎಂದು ಮಹಾಂತದೇವರು ನುಡಿದರು.
ಅವರು ಕೋಳಿಗುಡ್ಡದ ಲಿಂ.ಮಾತೋಶ್ರೀ ನೀಲಮ್ಮತಾಯಿ ಪಾಟೀಲ, ಲಿಂ ಶ್ರೀ ತಮ್ಮನಗೌಡ ಪಾಟೀಲ, ಲಿಂ.ಮಾತೋಶ್ರೀ ಲಿಂಬೆವ್ವಗೌಡತಿ ಪಾಟೀಲ ಅವರ ಪುಣ್ಯರಾಧನಾ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿ ಕೆಲಸಕ್ಕೆ ಬಾರದ ಹಳೆಯ ವಿಷಯಗಳನ್ನು ಕುರಿತು ಚರ್ಚಿಸುವುದನ್ನು ತ್ಯಜಿಸಿ. ನಮಗೆ ನಾವೇ ಹಾನಿಮಾಡಿಕೊಳ್ಳುವ ವಿಷಯಗಳನ್ನು ಬಿಟ್ಟು ಒಳ್ಳೆಯ ಆಚಾರ, ವಿಚಾರ, ನ್ಯಾಯ, ನಿಷ್ಠೆ, ಸತ್ಯವಂತರಾದವರು ಆ ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ. ಏಕೆಂದರೆ ನಮ್ಮ ದು:ಖಕ್ಕೆ ನಮ್ಮ ಅವನತಿಗೆ ನಾವೇ ಕಾರಣಿಕರ್ತರು. ಅದಕ್ಕಾಗಿ ಆಧ್ಯಾತ್ಮದಲ್ಲಿ ಅದ್ಬುತ ಶಕ್ತಿ ಇದೆ, ಅದನ್ನು ತಿಳಿದು ನಡೆದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅನ್ನದಾಸೋಹ, ಸಮಾಜ ಸೇವೆ ಮಾಡುತ್ತಿರುವ ಶ್ರೀ ಅಪ್ಪಣಗೌಡ. ಪಾಟೀಲ ಕುಟುಂಬದವರ ಸೇವೆ ಶ್ಲಾಘನೀಯ ಎಂದು ಆಶೀರ್ವಚನ ನೀಡಿದರು.
ನಂತರ ಕಾಡಯ್ಯ ಸ್ವಾಮಿಗಳು ಮಾತನಾಡಿ ಬುದ್ಧ, ಬಸವಣ್ಣ, ಮಹಾವೀರ, ಹೆಮರಡ್ಡಿ ಮಲ್ಲಮ್ಮ, ಅಕ್ಕಮಹಾದೇವಿ ಜನಿಸಿದ ನಾಡಿನಲ್ಲಿ ನಾವು ಜನಿಸಿರುವುದು ಪುಣ್ಯದ ಕೆಲಸವೇ ಸರಿ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ, ಆಧ್ಯಾತ್ಮದ ಕಡೆ ಒಲವು ತೋರಿಸಿದರೆ ನಾವು ಜೀವನದಲ್ಲಿ ಯಶಸ್ವಿಯಾಗುತ್ತೇವೆ. ಧಾನ,ಧರ್ಮ ಮಾಡುವುದು ಪುಣ್ಯವಂತರು ಮಾಡುವ ಕೆಲಸವಾಗಿದೆ ಎಂದರು.

loading...