ನಾಡ ಧ್ವಜ “ಭೀಮ” ಬಲ ಮೊಳಗಿದ್ದೇಲ್ಲಿ ! – ಹೊಸ ಚಿಂತನೆಗೆ ಎಡೆ ಮಾಡಿಕೊಟ್ಟ ಕರ್ನಾಟಕ ನಿಲುವು

0
209
loading...

ಕನ್ನಡಮ್ಮ ವಿಶ್ಲೇಷಣೆ

ಬೆಳಗಾವಿ:18 ಕರ್ನಾಟಕ್ಕಾಗಿಯೇ ಪ್ರತ್ಯೇಕ ನಾಡ ಧ್ವಜ ರೂಪಿಸಬೇಕು ಎನ್ನುವ ಮೂಲಕ ಬೆಳಗಾವಿ ಜಿಲ್ಲೆ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಮನವಿ‌ ಈಗ ರಾಷ್ಟ್ರಮಟ್ಟದಲ್ಲಿ‌ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಭೀಮಪ್ಪ ಗಡಾದ ಅವರು ಸರಕಾರಕ್ಕೆ ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಸರಕಾರ ನಾಡಿಗೆ ಪತ್ರತ್ಯೇಕ ಧ್ವಜ ವಿನ್ಯಾಸಗೊಳಿಸುವ ಕುರಿತು ಸರಕಾರ ಈ ಬಗ್ಗೆ ವರದಿ ಸಲ್ಲಿಸಲು ಸಮಿತಿಯನ್ನು ಅಸ್ಥಿತ್ವಕ್ಕೆ ತರಲು ಮುಂದಾಗಿರುವುದು ರಾಷ್ಟ್ರದ ಗಮನ ಸೆಳೆದಿದೆ.
ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಗಳು ತಮ್ಮದೆಯಾದ ಸ್ವಂತ ಧ್ವಜ ಹೊಂದಬಹುದು ಎನ್ನುವುದನ್ನು ಸಂವಿಧಾನ ತಜ್ಞರು ಹೇಳಿರುವುದು ಕರ್ನಾಟಕ ಪ್ರತ್ಯೇಕ‌ ಧ್ವಜ ಹೊಂದಬಹುದು ಎಂಬ ಸರಕಾರದ ಆಶಯ ಆಶಯ ಈಡೇರಬಹುದು. ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ವಿಷಯ ಇಡೀ ದೇಶದಲ್ಲಿ ಭಾರೀ ಪ್ರಮಾಣದ ಚರ್ಚೆಯನ್ನು ಹುಟ್ಟು ಹಾಕಿದ್ದು, ಎಂದಿನಂತೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದ ಶಿವಸೇನೆ ಕರ್ನಾಟಕ ನಿಲುವನ್ನು ತೀವ್ರವಾಗಿ ಆಕ್ಷೇಪಿಸಿದ್ದು ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ವಜಾಗೊಳಿಸುವಂತೆ ಎಂದಿನಂತೆ ತನ್ನ ಕರ್ನಾಟಕ ವಿರೋಧಿ ನಿಲುವನ್ನು ಮತ್ತೆ ತೋರರ್ಪಡಿಸಿದೆ. ಶಿವಸೇನೆ ಸೇರಿದಂತೆ ಮಹಾರಾಷ್ಟ್ರ ಇಂಥ ಇಬ್ಬಂದಿ‌ ನಿಲುವು ತಾಳುವುದು ಹೊಸತಲ್ಲ ಮಹಾರಾಷ್ಟ್ರ ದವರಿಗೆ ಕೆಸರಿ ಧ್ವಜ ತಮ್ಮ ರಾಜ್ಯದ ಧ್ವಜವೆಂದು ಹೇಳುತ್ತಾರೆ. ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿ ಕೆಸರಿ ಧ್ವಜವನ್ನು ಹಚ್ಚಿ ಇದು‌ ಮಹಾರಾಷ್ಟ್ರದ ನೆಲವೆಂದು ಕಾಲ ಕಾಲಕ್ಕೆ ತಮ್ಮ ಹಕ್ಕು ಪ್ರತಿಪಾದಿಸುತ್ತಾ ಬರುತ್ತಾರೆ. ಭಾಷೆಯ ವಿಷಯದಲ್ಲಿ ಕೇಸರಿ ಧ್ವಜವನ್ನು ತಮ್ಮ ಮೂಗಿನ‌ ನೆರಕ್ಕೆ ಬಳಸಿಕೊಳ್ಳುವಲ್ಲಿ ಮರಾಠಿಗರು ನಿಷ್ಠಾತರು ಭಾಷೆಗಾಗಿ ಒಂದೆಡೆ ಕೇಸರಿ ಯನ್ನು ಇನ್ನೊಂದೆಡೆ ಹಿಂದುತ್ವದ ಹೆಸರನ್ನು ಧ್ವಜಕ್ಕೆ ಲೇಪಿಸುವುದರ ಮೂಲಕ ಕನ್ನಡಿಗರನ್ನು ಕಾಲ ಕಾಲಕ್ಕೆ ದಿಕ್ಕು ತಪ್ಪಿಸುತ್ತಾ ಬಂದಿದ್ದಾರೆ. ಕೇಸರಿ ( ಭಾಗವಾ) ಹಿಂದುಗಳ ಧ್ವಜ ವೆನ್ನಲು ಯಾರ ತಕರಾರು ಇಲ್ಲ ಆದರೆ ಮಹಾರಾಷ್ಟ್ರ ದ ಧ್ವಜ ಎನ್ನುದನ್ನು ಯಾವ ಕನ್ನಡಿಗರೂ ಒಪ್ಪಲಾರರು.
ಬೆಳಗಾವಿ ತಾಲೂಕಿನ ಯಳ್ಳೂರಿನಲ್ಲಿ ದಶಕಗಳ ಕಾಲ ಜೈ‌ ಮಹಾರಾಷ್ಟ್ರ ಬರೆದು ಇಂಥ ಧ್ವಜ ಹಾರಿಸಿ ಭಾಷಾ ವಿವಾಧದ ಲಾಭ ಪಡೆದ ಎಂಇಎಸ್ ಸೇರಿದಂತೆ ಮಹಾರಾಷ್ಟ್ರ ದವರು ಈಗಾ ನಮ್ಮ ನಾಡಿನ ನಾಡು‌ ಧ್ವಜಕ್ಕೆ ಸಂಬಂಧಿಸಿ ಬುದ್ದಿ ಮಾತು ಹೇಳಬೇಕಾಗಿಲ್ಲಾ. ಕರ್ನಾಟಕಕ್ಕೆ ಒಂದು ಮಹಾರಾಷ್ಟ್ರಕ್ಕೆ ಒಂದು‌ ನ್ಯಾಯ ಯಾರು ಒಪ್ಪುತ್ತಾರೆ‌.
ಬೆಳಗಾವಿ ನೆಲದಿಂದ ಮೊಳಗಿದ ನಾಡ ಧ್ವಜ ಕುರಿತ ಚಿಂತನೆ ದೇಶದಲ್ಲಿ ಮಂಗಳವಾರ ಹೊಸದೊಂದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದು ಭವಿಷ್ಯದ ಲ್ಲಿ ದೇಶದ ಇತರ ರಾಜ್ಯಗಳು ತಮಗೂ ತಮ್ಮದೆಯಾದ ಧ್ವಜ ಬೇಕು ಎಂಬ ಹಕ್ಕೋತ್ತಾಯ ಮಾಡುವ ದಿನ‌ ದೂರವಿಲ್ಲ.

loading...