ನೀರಿಗಾಗಿ ಅರಣ್ಯ ಕಾರ್ಯಕ್ರಮ

0
72
loading...

ಗೋಕಾಕ: ಅರಣ್ಯ ಇಲಾಖೆಯಿಂದ “ನೀರಿಗಾಗಿ ಅರಣ್ಯ” ಕಾರ್ಯಕ್ರಮದಡಿ ಸಸ್ಯ ಪಾಲನಾಲಯದಲ್ಲಿ ಬೆಳೆಸಿದ ಸಸಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗುರುವಾರದಂದು ನಗರದ ಬಸ್ ನಿಲ್ದಾಣದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಸಸಿಯನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಮ್.ಸಂಗೊಳ್ಳಿ, ಉಪ ವಲಯ ಅರಣ್ಯಾಧಿಕಾರಿ ಎಚ್.ಎಸ್.ಇಂಗಳಗಿ, ಮುಖಂಡ ದುರ್ಗಪ್ಪ ಶಾಸ್ತ್ರೀಗೊಲ್ಲರ, ಕೆಎಸ್‍ಆರ್‍ಟಿಸಿಯ ಅರುಣ ಹೊನ್ನತ್ತಿ, ಜಮಾದಾರ ಸೇರಿದಂತೆ ಅನೇಕರು ಇದ್ದರು.

loading...