ನೂತನ ನೀಲಕಂಠೇಶ್ವರ ಮೂರ್ತಿ ಭವ್ಯ ಮೇರವಣಿಗೆ

0
36
loading...

ಕನ್ನಡಮ್ಮ ಸುದ್ದಿ-ಬಂಕಾಪುರ: ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಪಂಚಲೋಹದ ನೀಲಕಂಠೇಶ್ವರ ಮೂರ್ತಿಯ ಮೇರವಣಿಗೆಗೆ ಅರಳಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಚಾಲನೆ ನೀಡಿದರು.
ಶ್ರಾವಣಮಾಸದ ಪ್ರಥಮ ಸೋಮವಾರದಂದು ಪ್ರತಿಷ್ಠಾಪನೆಗೊಳ್ಳಲಿರುವ ಪಂಚಲೋಹದ ಶ್ರೀ ನೀಲಕಂಠೇಶ್ವರ ಮೂರ್ತಿಯ ಮೇರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಅರಳಲೆಮಠದಿಂದ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸುವಮೂಲಕ ನೀಲಕಂಠೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ತಲುಪಿತು.ನಂತರ ಅರಳಲೆಮಠದ ಶ್ರೀ ರೇವಣಸಿದ್ದೇಶ್ವರ ಶ್ರೀಗಳವರಿಂದ ನೂತನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಗೊಂಡು ಪಂಚಾಮೃತ ಅಭಿಷೇಕ, ಸಹಶ್ರ ಬಿಲ್ವಾರ್ಚನೆ ಸೇರಿದಂತೆ ವಿವಿದ ಪೂಜಾ ಕೈಂಕರ್ಯಗಳು ಭಕ್ತ ಜನಸಾಗರದಮದ್ಯ ಶ್ರದ್ಧಾ ಭಕ್ತಿಯಿಂದ ನೇರವೇರಿದವು. ತದನಂತರ ರುದ್ರಾಣಿಬಳಗದವರಿಂದ ರುದ್ರಪಠಣ, ಸಹಶ್ರನಾಮಾವಳಿ, ಶಿದ್ದಾಂತ ಶಿಖಾಮಣಿ ಗ್ರಂಥ ಪಾರಾಯಣ ನಡೆಯಿತು. ನಂತರ ಹರಿದುಬಂದ ಜನಸಾಗರಕೆ ಅನ್ನ ಪ್ರಸಾದದ ಸೇವೆ ಗೈಯಲಾಯಿತು.
ಶ್ರೀ ನೀಲಕಂಠೇಶ್ವರ ಪಂಚಲೋಹದ ಮೂರ್ತಿ ದಾನಿಗಳಾದ ಶಾಂತಾ ಅಗಡಿಯವರನ್ನು ಈ ಸಂದರ್ಭದಲ್ಲಿ ಅರಳಲೆಮಠದ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಈಶ್ವರ ಅಗಡಿ, ದೇವಸ್ಥಾನದ ಅರ್ಚಕರಾದ ಬಸವರಾಜ ಕಡ್ಲಯ್ಯನವರಮಠ, ದೇವಸ್ಥಾನದ ಸೇವಾರ್ಥಿಗಳಾದ ಚನ್ನಕುಮಾರ ದೇಸಾಯಿ, ಸಿದ್ದಣ್ಣ ಬಳ್ಳಾರಿ, ಬಸವರಾಜ ಚಿಂಚಲಿ, ಶಂಬಣ್ಣ ಸವಣೂರ, ರುದ್ರಪ್ಪ ಚಿಂಚಲಿ, ಬಸವರಾಜ ಹಾಲಭಾವಿ, ರಾಮಣ್ಣ ವಳಗೇರಿ, ಬಾಪುಗೌಡ ಪಾಟೀಲ, ಸುರೇಶ್ ದೇಸಾಯಿ, ನಾರಾಯಣಪ್ಪ ಟೊಪಣ್ಣವರ, ರವಿ ಕುರಗೋಡಿ, ಶಿದ್ದಲಿಂಗಪ್ಪ ಸಕ್ರಿ, ಮಲ್ಲಿಕಾರ್ಜುನ ನರೇಗಲ್, ಜಗದೀಶ ಹುರಳಿ, ಸೋಮಶೇಖರ ಗೌರಿಮಠ, ಬಸವರಾಜ ಆಲದಕಟ್ಟಿ, ವಿನಾಯಕ ಕೂಲಿ ಸೇರಿದಂತೆ ಮತ್ತಿತರರು ಇದ್ದರು.

loading...