ಪಠ್ಯಕ್ರಮದಲ್ಲಿ ವೈಚಾರಿಕ ವಿಷಯಗಳ ಅಳವಡಿಸುವ ಅಗತ್ಯವಿದೆ: ದಿನೇಶ ಅಮೀನಮಟ್ಟು

0
50
loading...

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಠ್ಯಕ್ರಮದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ವಿಷಯಗಳನ್ನು ಅಳವಡಿಸುವ ಅಗತ್ಯವಿದೆ. ಜಾತಿ ಭಾರತೀಯ ಸಮಾಜಕ್ಕೆ ಅಂಟಿದ ರೋಗ. ಇದು ಮನುಷ್ಯನ ಬುದ್ಧಿವಂತಿಕೆ, ಸೃಜನಶೀಲತೆ, ಪ್ರತಿಭೆ, ಚೈತನ್ಯವನ್ನು ಮಂಕಾಗಿಸುತ್ತದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ ಅಮೀನಮಟ್ಟು ಹೇಳಿದರು.
ಪಟ್ಟಣದ ತಿರುಪತಿ ತಿರುಮಲ ಕಲ್ಯಾಣಮಂಟಪದಲ್ಲಿ ಶನಿವಾರ ಜರುಗಿದ ಎಸ್‍ಎಫ್‍ಐ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1990 ರ ದಶಕದಲ್ಲಿ ದೇಶದಲ್ಲಿ ಆರ್ಥಿಕ ಹಾಗೂ ಧಾರ್ಮಿಕ ಉದಾರೀಕರಣ ಏಕಕಾಲದಲ್ಲಿ ಬಂದೆರಗಿದ್ದರಿಂದ ಶಿಕ್ಷಿತರಾಗಿದ್ದರೂ ಇಂದಿನ ಯುವ ಜನತೆ ವೈಚಾರಿಕ ಮನೋಭಾವ ಹೊಂದುವಲ್ಲಿ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಜನರಲ್ಲಿ ವೈಚಾರಿಕತೆ ಮೂಡಿಸಲು ಬುದ್ಧ, ಬಸವ, ಅರಿಸ್ಟಾಟಲ್ ಹಾಗೂ ಗೆಲಿಲಿಯೋ ಅವರಿಗಿಂತ ಹೆಚ್ಚು ಕಷ್ಟಪಡಬೇಕಾಗಿದೆ ಎಂದರು.
ಉದಾರೀಕರಣ ಎಂಬುದು ದೇಶಕ್ಕೆ ಅಗತ್ಯ. ಆದರೆ, ಅದು ಸರ್ಕಾರಿ ಸ್ವಾಮ್ಯ ಕಂಪನಿಗಳೊಂದಿಗೆ ಪೈಪೋಟಿ ನಡೆಸುವಂತಾಗಬೇಕೆ ಹೊರತು ಅವುಗಳನ್ನು ಮುಚ್ಚಿಖಾಸಗಿ ಯವರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸುವಂತಾಗಬಾರದು. 80 ರ ದಶಕದಲ್ಲಿ ದೇಶದಲ್ಲಿ ಸಾಕಷ್ಟು ಚಳುವಳಿಗಳು ನಡೆದವು. ಅವುಗಳ ಹಿಂದೆ ಮಾದ್ಯಮ ಎಂಬ ಪ್ರಭಲ ಅಸ್ತ್ರ ಇತ್ತು. ಆದರೆ, ಇಂದು ಉದಾರಿಕರಣದಿಂದಾಗಿ ಮಾಧ್ಯಮಗಳು ಉಧ್ಯಮಗಳಾಗಿ ಸಾಮಾಜಿಕ ಜವಾಬ್ದಾರಿ ಇಲ್ಲದಂತಾಗಿದೆ ಎಂದು ಕೇಧವ್ಯಕ್ತಪಡಿಸಿದರು.
ಇಂದು ಚುನಾವಣಾ ರಾಜಕಾರಣ ಇಲ್ಲ. ಬದಲಿಗೆ ಸಾಂಸ್ಕøತಿಕ ರಾಜಕಾರಣ ತನ್ನ ಬಾಹುಗಳನ್ನು ವಿಸ್ತರಿಸುತ್ತಿದೆ. ಹುಸಿ ಮಾತಿಗೆ ಮರುಳಾಗಿ ಮತಚಲಾವನೆ ನಡೆಯುತ್ತಿದೆ. ಆದರಿಂದ ಧರ್ಮಾಧಾರಿತ ರಾಜಕಾರಣ, ಮೂಢನಂಬಿಕೆ ಹಾಗೂ ಕೋಮುವಾದ ಹೆಚ್ಚಾಗುತ್ತಿದೆ. ಅದರ ನಿಜವಾದ ಮುಖವನ್ನು ಬಯಲು ಮಾಡುವ ಅಗತ್ಯವಿದೆ. ಯುವ ಸಮೂಹ ವೈಚಾರಿಕ ಮನೋಭಾವ ಬೆಳೆಸಿಕೊಂಡು, ಆಕರ್ಷಣೆಗೆ ಒಳಗಾಗದಾಗ ಮಾತ್ರ ಸದೃಡ ಸಮಾಜ ಕಟ್ಟಲು ಸಾಧ್ಯ ಎಂದರು.
ಎಸ್‍ಎಫ್‍ಐಸಂಘಟನೆ ಅಖಿಲ ಭಾರತ ಅಧ್ಯಕ್ಷ ವಿ.ಪಿ ಸಾನು, ರೈತ ಕೂಡ್ಲೆಪ್ಪ ಗೂಡಿಮನಿ ಮಾತನಾಡಿ, ದೇಶದಲ್ಲಿ ಹಿಂದಿನಿಂದಲೂ ವರ್ಣಾಶ್ರಮ ಪದ್ದತಿಯ ವಿರುದ್ಧ ಸಮರಸಾರಿದ ನಾಯಕರನ್ನು ವ್ಯವಸ್ಥಿತವಾಗಿ ಇತಿಹಾಸದ ಪುಟಗಳಲ್ಲಿ ಕಾಣದಂತೆ ಕಲೆ ಪಟಭದ್ರ ಹಿತಾಸಕ್ತಿಗಳು ಕೆಲಸವನ್ನು ನಿರ್ವಹಿಸುತ್ತಾ ಬಂದಿವೆ. ಪರಿಣಾಮ ದುಡಿಯುವ ವರ್ಗದ ಮೇಲೆ ನಿರಂತರ ದಬ್ಬಾಳಿಕೆಯನ್ನು ನಡೆಸಲಾಗುತ್ತಿದೆ ಎಂದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ತಮ್ಮ ಸರ್ಕಾರದಲ್ಲಿ ಗುಲಾಮಗಿರಿ ಮಾಡಲು ಹಾಗೂ ಗುಮಸ್ತಾರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಕನಿಷ್ಠ ಶಿಕ್ಷಣವನ್ನಾದರೂ ಸಹ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಆದರೆ ಇಂದಿನ ರಾಜಕಾರಣಿಗಳು ಶಿಕ್ಷಣವನ್ನು ಖಾಸಗಿಕರಣ ಹಾಗೂ ಕೇಸರಿಕರಣ ಮಾಡುವ ಮೂಲಕ ದೇಶದ ಹಿಂದುಳಿದ ಕುಟಂಬಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ದೂರಿದರು.
ಎಸ್‍ಎಫ್‍ಐ ರಾಜ್ಯಾಧ್ಯಕ್ಷ ವಿ. ಅಮರೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಗುರುರಾಜ ದೇಸಾಯಿ, ಎಂ.ಎಸ್. ಹಡಪದ, ರವಿ ದಂಡಿನ ಮಾತನಾಡಿದರು. ಕಾರ್ಯಕ್ರಮದಲ್ಲಿ ಫಯಾಜ ತೋಟದ, ರಮೇಶ ಮರಾಠಿ, ಅಪ್ಪು ಮತ್ತಿಕಟ್ಟಿ, ರವೀಂದ್ರ ಹೊನವಾಡ, ಅಮರೇಶ ಕಡಗದ, ವೀರಣ್ಣ ಸೊನ್ನದ, ಎಂ.ಬಿ. ಸೋಂಪೂರ, ರೇಣುಕಾ ಕಹಾರ, ಬಸವರಾಜ ಪೂಜರ, ಶಬ್ಬೀರ ಹವಾಲ್ದಾರ, ಶಿವಾನಂದ ಭೋಸ್ಲೆ ಇತರರು ಇದ್ದರು
*****
ಕೋಮುವಾದ ಮತ್ತು ಬಂಡವಾಳ ದೇಶಕ್ಕೆ ಮಾರಕ. ಧರ್ಮ ಎಂದರೆ ರೈತನೊಳಗೊಂಡ ನಿಜವಾದ ಶ್ರಮಿಕ. ಜಾತಿಯ ಗಾಯ ಇದ್ದಲ್ಲಿ ಧರ್ಮ ಎಂಬ ಮುಲಾಮು ಕೆಲಸಮಾಡದು. ದೇಶದ ಶ್ರಯೋಭಿವೃದ್ಧಿಗೆ ಯುವ ಸಮೂಹದ ಹೋರಾಟ ಮಹತ್ತರವಾದದ್ದು” ದಿನೇಶ ಅಮೀನಮಟ್ಟು, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ.

loading...