ಪರಿಸರ ರಕ್ಷಣೆಗೆ ಮುಂದಾಗಿ: ಡಾ.ರವಿ

0
37
loading...

ಕನ್ನಡಮ್ಮ ಸುದ್ದಿ
ಬೆಳಗಾವಿ: ಪರಿಸರ ನಾಶದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಇದನ್ನು ಅರಿತು ಎಲ್ಲರು ಪರಿಸರ ರಕ್ಷಣೆ ಮಾಡಲು ಮುಂದಾಗಬೇಕೆಂದು ಡಾ.ರವಿ ಪಾಟೀಲ ಅವರು ಹೇಳಿದರು.
ವನಮಹೋತ್ಸವ ಹಾಗೂ ಸಸಿವಿತರಣಾ ಕಾರ್ಯಕ್ರಮವನ್ನು ವಿಜಯಾ ಆರ್ಥೋ ಮತು ಟ್ರಾಮಾ ಸೆಂಟರ ಅಯೋಧ್ಯಾ ನಗರರ ಹಾಗೂ ಸ್ವರಾಜ್ಯ ಮಹಿಳಾ ಮಂಡಳ ಬಾಂಧೂರ ಗಲ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಸಸಿಗಳನ್ನು ವಿತರಿಸಿ ಮಾತನಾಡಿ ಅದರು,
ವನಮಹೋತ್ಸವದ ಅಂಗವಾಗಿ ರೈತರಿಗೆ ಮಹಿಳಾ ಮಂಡಳದ ಸದಸ್ಯರಿಗೆ ಸಸಿಗಳನ್ನು ನೀಡಿ ಪರಿಸರ ಕಾಳಜಿ, ಗಿಡಗಳನ್ನು ನೆಡುವುದರಿಂದಾಗುವ ಲಾಭಗಳು ಹಾಗೂ ಆರೋಗ್ಯ ಕಾಪಾಡುವ ಸಲುವಾಗಿ ಅನುಸರಿಸಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.
ಈ ವೇಳೆಯಲ್ಲಿ ಸಭೆ ಅಧ್ಯಕ್ಷತೆವಹಿಸಸಿದ ನಗರ ಸೇವಕಿ ಹಾಗೂ ಮಾಜಿ ಉಪ ಮಹಾಪೌರ ರೇಣು ಮುತಗೇಕರ ವನಮಹೋತ್ಸವದ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾ ಚೌಗಲೆ, ನಿರ್ಮಾಲಾ, ವಿಶ್ವಾಸರಾವ್ ಪಾಟೀಲ, ಬಾಲಕೃಷ್ಣಾ, ಮಹೇಶ, ಮಧುಕರ, ಅಪ್ಪಾ ಯರವಾಡ್ಕರ, ವಿಠ್ಠಲ, ವಿಜಯ, ಸ್ಮಿತಾ, ದಿನೇಶ, ಮಾರುತಿ, ಪ್ರಮೀಲಾ, ಸುನೀತಾ, ರೇಖಾ, ಪೂಣಮ್, ರಂಜನಾ, ಶೀತಲ, ಉಜ್ಜಲಾ, ಗೀತಾ, ದೀಪಾ, ಸುನೀತಾ, ಕಮಲಾ, ಸವಿತಾ, ಅನಿತಾ ಉಪಸ್ಥಿತರಿದ್ದರು.

loading...