ಪಲ್ಲಕ್ಕಿಯಲ್ಲಿ ಬಸವಣ್ಣನ ಭಾವಚಿತ್ರ ಇಟ್ಟು ಮೆರವಣಿಗೆ ಮಾಡುವುದು ಸಾಂಸ್ಕøತಿಕ ಪರಂಪರೆ

0
24
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಪಲ್ಲಕ್ಕಿಯಲ್ಲಿ ಬಸವಣ್ಣನ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡುವುದು ಒಂದು ಸಾಂಸ್ಕøತಿಕ ಪರಂಪರೆಯಾಗಿದ್ದು, ಅದು ಕಂದಾಚಾರ ಅಥವಾ ಮೂಢ ನಂಬಿಕೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ಥಳೀಯ ಜಗದ್ಗರು ತೋಂಟದಾರ್ಯ ಶಾಖಾ ಮಠದಲ್ಲಿ ತಿಂಗಳ ಪರ್ಯಂತ ಏರ್ಪಡಿಸಿದ್ದ ಶರಣರ ಅನುಭಾವ ದರ್ಶನ ಪ್ರವಚನ ಮಂಗಲೋತ್ಸವದ ಪ್ರಯುಕ್ತ ಶನಿವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಬಸವಧರ್ಮ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಜನ ಸಾಮಾನ್ಯರಲ್ಲಿ ಮನೆ ಮಾಡಿರುವ ಕಂದಾಚಾರ ಮತ್ತು ಮೂಢನಂಬಿಕೆಗಳನ್ನು ನಾವೆಲ್ಲ ಒಂದಾಗಿ ಹೊಡೆದೋಡಿಸಬೇಕಾಗಿದೆ. ಮೂಢ ನಂಬಿಕೆಗಳ ಆಚರಣೆಯಿಂದ ಕೆಳ ವರ್ಗದ ಜನರು ಶೋಷಣೆಗೆ ಒಳಗಾಗುತ್ತಾರೆ. ಧರ್ಮ ಹಾಗೂ ದೇವರ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಪ್ರವಚನ ಸೇವಾ ಸಮೀತಿ ಅಧ್ಯಕ್ಷ ಎಚ್.ವಿರೂಪಾಕ್ಷಪ್ಪ, ಉಪಾಧ್ಯಕ್ಷ ಶ್ರೀನಿವಾಸ ಅಬ್ಬಿಗೇರಿ, ಕಾರ್ಯದರ್ಶಿ ಸುರೇಶ ಬಣಕಾರ, ಗಿರಿಶಗೌಡ ಪಾಟೀಲ, ಉಮೇಶ ಹಿರೇಮಠ, ಈಶಣ್ಣ ಬೆಟಗೇರಿ, ದ್ರುವಕುಮಾರ ಹೊಸಮನಿ, ಕೊಟ್ರೇಶ ಅಂಗಡಿ, ಪಾಲಾಕ್ಷಿ ಗಣದಿನ್ನಿ, ನಾಗೇಶ ಹುಬ್ಬಳ್ಳಿ ಇದ್ದರು.
ನಂತರ ಮಂಗಳ ವಾಧ್ಯಗಳ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವಣ್ಣನ ಭಾವಚಿತ್ರದ ಮೆರವಣಿಗೆನ್ನು ನಡೆಸಲಾಯಿತು. ನೂರಾರು ಭಕ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

loading...