ಪಶುಭಾಗ್ಯ ಯೋಜನೆ ಆಯ್ಕೆ ಬದಲಾವಣೆಗೆ ಸಾರ್ವಜನಿಕರು ಅಸಮದಾನ

0
112
loading...

ಲಾಟರಿ ಆಯ್ಕೆ ಪ್ರಕ್ರಿಯೆಗೆ ಬ್ರೇಕ್ | ಶಾಸಕ ನೇತೃತ್ವ ಸಮಿತಿಯಿಂದ ಆಯ್ಕೆ
| ಕೆ ಎಮ್. ಪಾಟೀಲ
ಬೆಳಗಾವಿ4: ರಾಜ್ಯದಲ್ಲಿ ಪಶುಭ್ಯಾಗ್ಯದ ಯೋಜನೆಯನ್ನು ಈ ಮೊದಲು ಲಾಟರಿ ಮೂಲಕ ಆಯ್ಕೆ ಮಾಡಲಾಗುತಿತ್ತು ಆದರೆ, ಈಗ ಅದನ್ನು ಸ್ಥಗಿತಗೊಳಿಸಿ ಶಾಸಕರು ಮತ ಬ್ಯಾಂಕ್‍ಗೆ ಆಯ್ಕೆ ಪ್ರಕ್ರಿಯೆಗೆ ತಾವೆ ಅಧ್ಯಕ್ಷರಾಗಿದ್ದಾರೆ. ಇದರಿಂದ ಪಶುಭಾಗ್ಯಯೋಜನೆಯು ಅರ್ಹ ಫಲಾನುಭವಿಗಳ ಕೈ ತಪ್ಪಲಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.
ಪಶುಭಾಗ್ಯವನ್ನು 2015 ರಲ್ಲಿ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಂತವರನ್ನು ಹೈನುಗಾರಿಕೆಯಲ್ಲಿ ತೊಡಗಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿ ಎಂಬ ಕಾರಣಕ್ಕೆ ಈ ಯೋಜನೆಯ ಮೂಲಕ ಮೇಕೆ, ಕುರಿ, ಕೋಳಿ ಸಾಕಾಣಿಕೆ ವ್ಯವಸ್ಥೆಯನ್ನು ಜಾರಿಮಾಡಿ ಅರ್ಹ ಫಲಾನುಭವಿಗಳನ್ನು ಪ್ರತಿ ಜಿಲ್ಲೆಯ ಆಯಾ ತಾಲೂಕಾ ಮಟ್ಟದಲ್ಲಿ ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳ ಸಮ್ಮುಖದಲ್ಲಿಯೆ ಲಾಟರಿ ಮೂಲಕ ಆಯ್ಕೆ ಮಾಡುತ್ತಿತ್ತು ಇದರಿಂದ ಅರ್ಜಿ ಸಲ್ಲಿದ ಫಲಾನುಭವಿಗಳು ಯಾರು ತಕರಾರು ತೆಗೆಯುತ್ತಿರಲಿಲ್ಲ.
ಆದರೆ, ಈಗ ಹೊಸ ಸಮಿತಿಯನ್ನು ರಚನೆ ಮಾಡಿರುವ ಪ್ರಕಾರ ನೇರವಾಗಿ ಶಾಸಕರಿಂದಲೆ ಆಯ್ಕೆ ಪ್ರಕ್ರಿಯೆ ಮಾಡುವುದರಿಂದ ಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಯಾರು ಆತ್ಮೀಯರಿರುತ್ತಾರೆ ಅವರಿಗೆ ಈ ಯೋಜನೆ ಲಾಭವಾಗಲಿದೆ ಎಂದು ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮಾತನಾಡುತ್ತಿದ್ದಾರೆ. ಹಾಗಾಗಿ ಮೊದಲು ಇರುವ ಪದ್ದತಿಯು ಬಹಳಷ್ಟು ಉತ್ತಮವಾಗಿತ್ತು ಅದನ್ನೆ ಪುನಃ ಮುಂದುವರಿಸಬೇಕು. ಇಲ್ಲದಿದ್ದರೆ ಈ ಯೋಜನೆ ಸೂಕ್ತ ವ್ಯಕ್ತಿಗಳಿಗೆ ದೊರೆಯುದಿಲ್ಲ ಎಂದು ಹೇಳುತ್ತಿದ್ದಾರೆ.
ಹೊಸ ಸಮಿತಿಯಲ್ಲಿ ಯಾರ್ಯಾರು ಇದ್ದಾರೆ: ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ತಾಲೂಕಾ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ಸಹ ಕಾರ್ಯದರ್ಶಿ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಸಾಮಾನ್ಯ ತಲಾ ಒಬ್ಬಬೊರು ಸಮಿತಿ ಸದಸ್ಯರಾಗಿರುತ್ತಾರೆ. ಈ ಸಮಿತಿಯಲ್ಲಿ ಮುಖ್ಯವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರ ಶಾಸಕರಿಗೆ ಇರುತ್ತದೆ.
ಈ ಮೊದಲು ಯಾವ ರೀತಿಯಾಗಿ ಆಯ್ಕೆ ಮಾಡುತ್ತಿದ್ದರು: 2015 ರಿಂದ ಆಯ್ಕೆ ಮಾಡಿದರು ಲಾಟರಿ ಮೂಲಕ ಆಯ್ಕೆ ಮಾಡಿದ್ದಾರೆ. ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಜಾತಿವಾರು ಆದಾರದ ಮೇಲೆ ಒಂದೊಂದು ಬಾಕ್ಸ್ ಮಾಡಿ ಅರ್ಜಿಗಳನ್ನು ಹಾಕುತ್ತಾರೆ. ಅದರ ಪ್ರಕಾರವಾಗಿ ಒಂದೆ ಸಮಯದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳು ಅರ್ಜಿ ಸಲ್ಲಿಸಿದ ಫಲಾನುಭವಿಗಳ ಮುಂದೆ ಅರ್ಜಿಯನ್ನು ಆಯ್ಕೆ ಮಾಡುತ್ತಾರೆ.
ಒಂದು ವೇಳೆ ಆಯ್ಕೆಯಾದ ಅಭ್ಯರ್ಥಿಯು ಈಗಾಗಲೇ ಬೇರೆ ಬ್ಯಾಂಕಿನಲ್ಲಿ ಸಾಲಹೊಂದಿದ್ದು, ಅವನಿಗೆ ಯಾವುದೇ ಬ್ಯಾಂಕ್ ಸಾಲ ದೊರೆಯದೆ ಇದ್ದರೆ ಆಗ ಅರ್ಜಿ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಒಟ್ಟು ಮೂರು ಅರ್ಜಿಗಳನ್ನು ಆಯ್ಕೆ ಮಾಡಿ ಮೊದಲ ವ್ಯಕ್ತಿ ಬಿಟ್ಟರೆ ಇನ್ನುಳಿದ ಇಬ್ಬರಿಗೆ ಯಾರು ಮೊದಲು ಇರುತ್ತಾರೆ ಅವರಿಗೆ ನೀಡುತ್ತಿದ್ದರು.
ಒಟ್ಟಾರೆಯಾಗಿ 2018 ರ ಚುನಾವಣೆಗೆ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಸಲುವಾಗಿ ಶಾಸಕರು ಪಶು ಭಾಗ್ಯ ಯೋಜನೆಯು ಲಾಟರಿ ಮೂಲಕ ಆಯ್ಕೆ ಮಾಡುವಂತ ವ್ಯವಸ್ಥೆಯನ್ನು ತಪ್ಪಿಸಿ. ಶಾಸಕರೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಹೊರಟಿದ್ದು, ತಾವೇ ಸರ್ಕಾರದಿಂದ ಅಧಿಕೃತವಾಗಿ ಒಂದು ಸಮಿತಿ ಮಾಡಿಕೊಂಡಿದ್ದಾರೆ. ಇದರಿಂದ ಏಷ್ಟು ಜನ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಭಾಗ್ಯ ದೊರೆಯುತ್ತದೆಯೋ ಇಲ್ಲವೊ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬಾಕ್ಸ್
ಪಶುಭಾಗ್ಯ ಯೋಜನೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನ ಪ್ರತಿನಿದಿ ಮೇಲೆ ಇದೆ ಹಾಗಾಗಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಿದರೆ ಈ ಯೋಜನೆ ಸಫಲಗೊಳ್ಳುತ್ತದೆ.
-ಡಾ. ಚಂದ್ರಶೇಖರ. ಉಪ ನಿರ್ದೇಶಕರು ಪಶು ಸಂಗೋಪನಾ ಇಲಾಖೆ, ಬೆಳಗಾವಿ

ಉತ್ತರ ಕರ್ನಾಟಕ ವಿಭಾಗಕ್ಕೆ ಪಶುಭಾಗ್ಯ ಯೋಜನೆಯಲ್ಲಿ ಜಿಲ್ಲೆಯವಾರು ಪ್ರಸಕ್ತ ಸಾಲಿನಲ್ಲಿ  ಆಹ್ವಾನಿಸಿದ ಅರ್ಜಿಯ ಸಂಖ್ಯೆಗಳು

ಸಂಖ್ಯೆ

 ಜಿಲ್ಲೆಗಳು ಅರ್ಜಿಗಳು

1

ಬೆಳಗಾವಿ

645

2

ಬಾಗಲಕೋಟ

352

3

ಧಾರವಾಡ 269

4

ಹಾವೇರಿ

375

5

ವಿಜಯಪುರ

328

6

ಉತ್ತರ ಕನ್ನಡ

458

7 ಗದಗ

259

ಒಟ್ಟು  

2686

 

loading...