ಪ್ರಕೃತಿ ನಾಶದಿಂದ ಮನುಕುಲಕ್ಕೆ ಕಂಟಕ: ಡಾ. ಸಂಜಯ

0
38
loading...

ಕನ್ನಡಮ್ಮ ಸುದ್ದಿ-ಹಾವೇರಿ: ನಗರದಲ್ಲಿ ಡಾ. ಸಂಜಯ ಡಾಂಗೆ ಅಭಿಮಾನಗಳ ಬಳಗದಿಂದ ನಗರದ ಡಾ. ಮಹದೇವ ಬಣಗಾರ ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಇತ್ತೀಚೆಗೆ ಸಸಿಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ನೇತೃತ್ವವನ್ನು ಜೆಡಿಎಸ್ ಜಿಲ್ಲಾ ಮಖಂಡರಾದ ಡಾ. ಸಂಜಯ ಡಾಂಗೆ ವಹಿಸಿಕೊಂಡು ಸಸಿ ನೆಡುವ ಕಾಮಕ್ರಮದಲ್ಲಿ ಭಾಗವಹಿಸಿ ಸಾಂಕೇತಿಕವಾಗಿ ಜಿಲ್ಲಾ ಗ್ರಂಂಥಾಲಯದ ಆವರಣದಲ್ಲಿ ಪ್ರಕೃತಿಯಲ್ಲಿ ಪರಿಸರ ಸರಿಯಾಗಿ ಪ್ರತಿಯೊಬ್ಬರು ಕಾಪಾಡಬೇಕು ಎನ್ನು ಸಂದೇಶ ನೀಡುವುದರೊಂದಿಗೆ ಹತ್ತಾರು ಅಭಿಮಾನಿಗಳೊಂದಿಗೆ ಸೇರಿ ಹತ್ತಾರು ಸಸಿಗಳನ್ನು ನೆಟ್ಟು ಮಾತನಾಡಿದರು.
ಪ್ರಕೃತಿಯಡಿಯಲ್ಲಿ ಬದಕುತ್ತಿರುವ ನಾವು ಯಾವ ಯಾವ ಜಾಗದಲ್ಲಿ ಏನೇನು ಇರಬೇಕು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಗಿಡ ನೇಡುವದು ಮಾತ್ರ ಪರಿಸರ ಕಾಳಜಿಯಲ್ಲ. ನೆಟ್ಟ ಸಸಿಗಳನ್ನು ಜೋಪಾನ ಮಾಡಿ ಅವುಗಳನ್ನು ಉಳಿಸಿ ಬೆಳಿಸುವುದು ಪ್ರತಿಯೊಬ್ಬನ ಕರ್ತವ್ಯ. ಪ್ರಕೃತಿ ವಿರುದ್ಧ ನಾವೇನಾದರು ಮಾಡಿದರೆ ಅದರ ಪರಿಣಾಮ ನಾವೇ ಎದುರಿಸಬೇಕಾಗುತ್ತದೆ. ಇದಕ್ಕೆಲ್ಲ ನಿದರ್ಶನವೆಂದರೆ ಕಳೆದ ಮೂರು ವರ್ಷದಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಆವರಿಸಿರುವ ಬರಗಾವವೇ ಕಾರಣ ಅರಣ್ಯ ಸಂಪತ್ತು ನೇರವಾಗಿ ಪ್ರಕೃತಿಯೊಂದಗೆ ಇದ್ದು ಕೊಂಡು ಭೂಮಿಗೆ ಬೇಕಾದ ವಾತಾವರಣ, ಗಾಳಿ, ನೀರು, ಬೆಳಕನ್ನು ನಮಗೆ ನೀಡಲು ಆ ಸೃಷ್ಟಿಕರ್ತನು ನೀಡಿರುವ ಮಹಾನ ಕೊಡಿಗಿಯೇ ಅರಣ್ಯ ಸಂಪತ್ತು ಅದನ್ನು ಇಂದಿನ ದಿನಮಾನದ ಕೈಗಾರಿಕೆಕರಣ, ಮಾಹಿತಿತಂತ್ರಜ್ಞಾನವನ್ನು ಬೆನ್ನುಹತ್ತಿ ಅರಣ್ಯ ಪ್ರದೇಶವನ್ನು ನಾವು ನಿವೇಲ್ಲ ಹಾಳುಮಾಡಿದ್ದೇವೆ. ಇದರಿಂದ ವಾತಾವರಣದಲ್ಲಿ ಏರುಪೇರಾಗಿ ಭೂಮಿಯಲ್ಲಿ ಮಳೆ ಸಕಾಲಕ್ಕೆ ಇಲ್ಲದಂತಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಸುತ್ತಮುತ್ತ ಸಾರ್ವಜನಿಕ ಜಾಗೆ, ಹೊಲಗದ್ದೆ ಅಡಿಯಲ್ಲಿ ಸಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೆಟ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಾಗಿದೆ. ನಾವೇಲ್ಲ ಇಂದಿನಿಂದಲೇ ಈ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಬದಲ್ಲಿ ಬಾಗವಹಿಸಿದವರು, ಜಿಲ್ಲಾ ಗ್ರಂಥಾಲಯದ ಸಿಬ್ಬಂದಿಯಾದ ಪಾರ್ವತೆವ್ವ ಹರ್ಕುಣಿ,ಅಮೀರ್‍ಜಾನ್ ಬೇಪಾರಿ, ಸುನೀಲ್ ದಂಡೆಮ್ಮನವರ, ವೀರಣಗೌಡ ಪಾಟೀಲ್, ಶಾಂತು ಕೂಲಿ,ರಬ್ಬಾನಿ ಹುಲಗೇರಿ, ಸಿದ್ದಪ್ಪ ಬಾಗಣ್ಣನವರ, ಎಸ್. ಜಮಾದಾರ, ಇರ್ಪಾನ್ ಅಗಡಿ, ಹಾಜಿ ಅಲಿ ಪಟೇಲ್, ಕೆ. ಹುಲಗೂರ, ಎ. ಯಡ್ರಾಮಿ, ಗ್ರಂಥಾಲಯದ ಓದುಗರು, ಸಿಬ್ಬಂದಿಗಳು ಭಾಗವಹಿಸಿದ್ದರು.

loading...